Advertisement

Constitution ಮೇಲೆ ನಂಬಿಕೆಗೆ ಧನ್ಯವಾದ: ಮನ್‌ ಕೀ ಬಾತ್‌ನಲ್ಲಿ ಮೋದಿ ಹೇಳಿದ್ದೇನು?

12:33 AM Jul 01, 2024 | Team Udayavani |

ಹೊಸದಿಲ್ಲಿ: ದೇಶದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟ ದೇಶವಾಸಿ ಗಳೆಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಬರೋಬ್ಬರಿ 3 ತಿಂಗಳ ಬಳಿಕ ರವಿವಾರ ನಡೆದ 111ನೇ ಮಾಸಿಕ ಮನ್‌ ಕೀ ಬಾತ್‌ ಬಾನುಲಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ಲೋಕಸಭೆ ಚುನಾವಣೆಯಲ್ಲಿ ಉತ್ಸಾಹದಿಂದ ಹಕ್ಕು ಚಲಾಯಿಸಿದ ಮತದಾರರಿಗೆ ಅಭಿನಂದನೆಗಳನ್ನು ಹೇಳಿದ್ದಾರೆ. ಈ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ನಂಬಿಕೆಯನ್ನು ಮತ್ತೂಮ್ಮೆ ಸಾಬೀತುಪಡಿ ಸಿದ್ದಾರೆ ಎಂದು ಹೇಳಿದರು.

18ನೇ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ 3 ತಿಂಗಳ ಕಾಲ ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು.

ಕೇರಳದ ಕಥುìಂಬಿ ಛತ್ರಿ, ಕಾಶ್ಮೀರದ ಬಟಾಣಿ, ಆಂಧ್ರಪ್ರದೇಶದ ಅರಕು ಕಾಫಿಯವರೆಗೆ ದೇಶಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ವಸ್ತುಗಳು, ಸಮುದಾಯಗಳ ಬಗ್ಗೆ ಮೋದಿ ಮಾತನಾಡಿದರು.

ಮೋದಿ ಹೇಳಿದ್ದೇನು?
ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಕ್ರೀಡಾ ಳುಗಳಿಗೆ “ಚಿಯರ್‌4 ಭಾರತ್‌’ ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಭಾರತೀಯ ರೆಲ್ಲರೂ ಉತ್ತೇಜನ ನೀಬೇಕು.

Advertisement

ವಿಶ್ವ ಪರಿಸರ ದಿನದ ಅಂಗವಾಗಿ ಆರಂಭಿ ಸಿರುವ “ಅಮ್ಮನ ಹೆಸರಲ್ಲಿ ಒಂದು ಗಿಡ’ ಅಭಿಯಾನಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಹರ್ಷ ತಂದಿದೆ.

ಕುವೈಟ್‌ ಅಲ್ಲಿನ ರಾಷ್ಟ್ರೀಯ ರೇಡಿಯೋ ದಲ್ಲಿ ಹಿಂದಿ ಭಾಷೆಯಲ್ಲಿ ಕಾರ್ಯಕ್ರಮ ನಡೆಸುತ್ತಿದೆ. ಭಾರತದ ಸಂಸ್ಕೃತಿ, ಸಿನೆಮಾ ಬಗೆಗಿನ ಕಾರ್ಯಕ್ರಮವಿದು.

ತುರ್ಕೆಮೆನಿಸ್ಥಾನದಲ್ಲಿ ಮೇ ತಿಂಗಳಲ್ಲಿ ಜಗತ್ತಿನ 24 ಖ್ಯಾತ ಕವಿಗಳ ಪ್ರತಿಮೆ ಗಳನ್ನು ಅನಾವರಣಗೊಳಿಸಲಾಯಿತು. ಅದರಲ್ಲಿ ಭಾರತದ ರವೀಂದ್ರನಾಥ್‌ ಟ್ಯಾಗೋರ್‌ ಪ್ರತಿಮೆಯೂ ಒಂದು.

Advertisement

Udayavani is now on Telegram. Click here to join our channel and stay updated with the latest news.

Next