Advertisement

ಜೀವನಪ್ರೀತಿ ಕಲಿಸಿದ ಗೆಳತಿಗೆ ಹೇಳಬೇಕಿದೆ ಧನ್ಯವಾದ…

12:49 AM Jul 08, 2019 | mahesh |

ಜೀವನ ಪ್ರೀತಿ ಕಳೆದುಕೊಂಡರೆ ಒಂದು ಅರ್ಥದಲ್ಲಿ ಬದುಕು ಮುಗಿದ ಹಾಗೆ. ಬದುಕಬೇಕು, ಏನಾದರೂ ಸಾಧಿಸಬೇಕೆಂಬ ಹಂಬಲ ಹುಟ್ಟುವುದೇ ಜೀವನ ಪ್ರೀತಿ ಇದ್ದಾಗ. ಆದರೆ ಜೀವನದಲ್ಲಿ ಎದುರಾಗುವ ಕೆಲವೊಂದು ಕಹಿ ಘಟನೆಗಳಿಂದ ಜೀವನ ಪ್ರೀತಿ ಬಿಡಿ ಜೀವನವೇ ಬೇಡ ಅನಿಸುತ್ತದೆ. ಇಂತಹ ಸಂದರ್ಭದಲ್ಲಿ ಇನ್ನೊಂದು ಜೀವ ಆಸರೆಯಾಗಿ ನಿಂತರೆ ಬದುಕು ಸುಂದರವಾಯ್ತು ಎಂದೆನಿಸುವುದಿದೆ.

Advertisement

ಅದೆಷ್ಟು ಬಾರಿ ನಾನು ಸೋತೆ ಎಂದಾಗ ನನಗೆ ಆಸರೆಯಾದ ಜೀವಕ್ಕೆ ಧನ್ಯವಾದ ಹೇಳಲೇಬೇಕಿದೆ.

ಬಹುಶಃ ನನ್ನ ನಿನ್ನ ಸ್ನೇಹಕ್ಕೆ 15 ವರ್ಷ ಕಳೆದಿರಬಹುದು. ಆದರೆ ಜೀವನದ ಪ್ರತಿ ಹಂತದಲ್ಲೂ ಉತ್ತಮ ಸಲಹಾಗಾರ್ತಿಯಾಗಿ ನನ್ನ ಜತೆಯಾಗಿದ್ದೆ. ಯಾರಲ್ಲೂ ಹೇಳಲಾಗದ ವಿಷಯಗಳನ್ನು ನಿನ್ನಲ್ಲಿ ಹಂಚಿಕೊಳ್ಳುತ್ತಿದೆ.

ತಪ್ಪು ಮಾಡು ಆದರೆ ಆ ತಪ್ಪನ್ನು ಮತ್ತೆ ಮಾಡಬೇಡ ಎಂದಿದ್ದೆ. ಆ ಒಂದು ಮಾತು ನನ್ನ ಕಿವಿಯಲ್ಲಿ ಇನ್ನೂ ಹಾಗೆ ರಿಂಗಣಿಸುತ್ತಿದೆ. ವೃತ್ತಿ ಮತ್ತು ವೈಯಕ್ತಿಕ ಜೀವನದ ಯಾವುದೇ ಸಮಸ್ಯೆಗಳನ್ನು ನಿನ್ನಲ್ಲಿ ಹೇಳಿಕೊಂಡಾಗ ಒಂದು ಒಳ್ಳೆಯ ಸಲಹೆ ಸಿಗುತ್ತೆ ಅನ್ನುವ ಭರವಸೆ ನನ್ನದಾಗಿರುತ್ತದೆ. ಬೇಗನೆ ಸಿಡಿಮಿಡಿ, ಕೋಪ ಗೊಳ್ಳುವ ಸ್ವಭಾವ ನನ್ನದಾದರೆ, ಶಾಂತ, ತಾಳ್ಮೆಯ ಸ್ವಭಾವ ನಿನ್ನದು. ಯಾವುದೇ ಫ‌ಲಾಪೇಕ್ಷೆಯಿಲ್ಲದೆ ಸಹಾಯ ಮಾಡುವ ಗುಣ ನಿನ್ನದು. ಪ್ರಾಣಿಗಳೆಂದರೆ ನಿನಗೆ ಅತೀವ ಪ್ರೀತಿ. ನಿನ್ನಂತಹ ಮಾರ್ಗದರ್ಶಕಿ ಜೀವನ ಪೂರ್ತಿ ನನ್ನ ಜತೆಯಾಗಿರಬೇಕು ಅನ್ನೋದು ನನ್ನ ಅಭಿಲಾಷೆ. ನಮ್ಮ ಈ ಸ್ನೇಹ ಶಾಶ್ವತವಾಗಿರಲಿ.

ಅದೆಷ್ಟೋ ಬಾರಿ ನಿನಗೆ ಧನ್ಯವಾದ ಹೇಳಬೇಕೆಂದರೂ ಸಾಧ್ಯವಾಗಲಿಲ್ಲ ಗೆಳತಿ. ಅದಕ್ಕಾಗಿ ಈಗ ಹೇಳುತ್ತಿದ್ದೇನೆ ನನ್ನ ಬದುಕಿನಲ್ಲಿ ಜತೆಯಾಗಿದ್ದಕ್ಕೆ ಸಹಸ್ರಾರು ಧನ್ಯವಾದಗಳು.

Advertisement

•ಗೌರಿ

Advertisement

Udayavani is now on Telegram. Click here to join our channel and stay updated with the latest news.

Next