ಕೋಲಾರ: ತನ್ನ ಅಗಾಧ ನೆನಪಿನ ಶಕ್ತಿಯ ಮೂಲಕವೇಜಿಲ್ಲೆಯ ಲಕ್ಕೂರಿನ ಪುಟ್ಟ ಪೋರ ಎನ್.ತಾನೀಶ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಜೊತೆಗೆ ಹಲವು ದಾಖಲೆಗಳನ್ನು ಮಾಡಿ ಗಮನ ಸೆಳೆದಿದ್ದಾರೆ.
ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಸಮೀಪದ, ಲಕ್ಕೂರು ಗ್ರಾಮದ ಕೇವಲ 2 ವರ್ಷ 4 ತಿಂಗಳ ಪುಟ್ಟ ಕಂದಪ್ರತಿಷ್ಠಿತ ಮಹತ್ತರ ಸಾಧನೆಯಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್,ವಿಲ್ ಮೆಡಲ್ ಬುಕ್ ಆಫ್ ರೆಕಾರ್ಡ್ ಹಾಗೂ ಕಿಡ್ಸ್ ವರ್ಡ್ ರೆಕಾರ್ಡ್ ಮಾಡುವ ಮೂಲಕ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ವಿಶ್ವಮಾನವ ಕುವೆಂಪು ಫೌಂಡೇಷನ್ ರಾಜ್ಯಅಧ್ಯಕ್ಷ ಹಾಗೂ ಅರಳು ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಯುವ ಕವಿ ಲಕ್ಕೂರು ಎಂ.ನಾಗರಾಜ್ ಹಾಗೂ ಶ್ವೇತಾಂಜಲಿ ಭರತನಾಟ್ಯ ಶಾಲೆ ಸಂಸ್ಥಾಪಕಿ ಅಧ್ಯಕ್ಷೆ ಶ್ವೇತನಾಗರಾಜ್‌ದಂಪತಿಯ ಪುತ್ರ ಎನ್.ತಾನೀಶ್ ಈ ಎಲ್ಲಾ ಸಾಧನೆ ಮಾಡಿರುವ ಪೋರನಾಗಿದ್ದಾನೆ.
ಉತ್ತರ ನೀಡುತ್ತಾನೆ: ತಾನೀಶ್ ದೇಶದ ಮೂವತ್ತು ರಾಜ್ಯಗಳ ಹೆಸರು ಮತ್ತು ರಾಜಧಾನಿಗಳ ಹೆಸರು, 150 ಜನಮಹಾನ್ ಸಾಧಕರ ಭಾವಚಿತ್ರಗಳ ಹೆಸರು, ಜ್ಞಾನಪೀಠಪ್ರಶಸ್ತಿ ಪಡೆದ ಪುರಸ್ಕೃತರ ಹೆಸರು, ಕರ್ನಾಟಕದ 30 ಜಿಲ್ಲೆಗಳು, ಪ್ರಂಪಚದ ವಿವಿಧ ದೇಶಗಳ ಹೆಸರುಗಳು, 90 ಪ್ಲಾಷ್ ಕಾರ್ಡ್ಸ್ ಹೆಸರುಗಳು, ಪ್ರಚಲಿತ ವಿದ್ಯಮಾನದ ಸಾಮಾನ್ಯ ಜ್ಞಾನದ 80 ಪ್ರಶ್ನೆಗಳಿಗೆ ಪಟ ಪಟನೆ ಉತ್ತರ ನೀಡುತ್ತಾನೆ. ಹಣ್ಣು, ತರಕಾರಿ, ಬಣ್ಣಗಳು, ವಾಹನಗಳು, ಮಾನವ ದೇಹದ ಅಂಗಾಂಗಳು, ಕನ್ನಡ ವರ್ಣಮಾಲೆ, 12 ತಿಂಗಳುಗಳು, ಇಂಗ್ಲೀಷ್ ಅಲ್ಪಾಬೇಟ್ಸ್, ಆಕ್ಷನ್ ವರ್ಡ್ಸ್‌ಗಳನ್ನು ಬಹು ಬೇಗನೆ ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಾನೆ.
ಗೌರವ: ತಾನೀಶ್ ಮೇರು ಪ್ರತಿಭೆಯನ್ನು ಗುರ್ತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್, ವೀಲ್ ಮೆಡಲ್ ಬುಕ್ ಆಫ್‌ರೆಕಾರ್ಡ್, ಹಾಗೂ ಕಿಡ್ಸ್‌ವರ್ಡ್ ರೆಕಾರ್ಡ್ಸ್ ಪದಕ, ಮೆಡಲ್ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿದೆ.ಗಿನ್ನಿಸ್ ದಾಖಲೆ ಗುರಿ: ನೆನಪಿನ ಶಕ್ತಿಯ ಜೊತೆಗೆ ಸಂಸ್ಕೃತಿಯ ಪ್ರತಿಬಿಂಬವಾದ ಭರತನಾಟ್ಯ ಕಲಿಕೆಯ ಜೊತೆಗೆ ಕರಾಟೆ, ತಬಲ, ಸ್ಕೇಟಿಂಗ್ ತರಗತಿಗಳ ತರಬೇತಿ ಪಡೆಯುವಮೂಲಕ ಮಹತ್ತರ ಸಾಧನೆಯತ್ತ ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿಯತ್ತ ತನ್ನ ನಿರಂತರ ಅಭ್ಯಾಸವನ್ನು ಅಮ್ಮನ ಸಹಕಾರದಿಂದ ಪಡೆಯುತ್ತಿದ್ದಾನೆ ಎಂದು ತಂದೆ ಲಕ್ಕೂರು ಎಂ.ನಾಗರಾಜ್ ತಿಳಿಸಿದರು.
ಪ್ರೋತ್ಸಾಹ: ಅಕ್ಕರೆಯ ಕಂದ ತಾನೀಶ್ ಒಂದು ವರ್ಷದಮಗು ವಿದ್ದಾಗಲೇ ಯಾವುದೇ ವಿಷಯವನ್ನು ಒಮ್ಮೆ ಹೇಳಿದರೆ ಸಾಕು ಕೂಡಲೇ ಅರ್ಥೈಕೊಂಡು ಮರು ಕ್ಷಣದಲ್ಲಿಯೇ ನಮಗೆ ಹೇಳಿ ಕೊಡುವಷ್ಟು ಸಮರ್ಥವಾದ ಜ್ಞಾನ ಪಡೆದಿದ್ದಾನೆ. ಇದನ್ನು ಪ್ರೋತ್ಸಾಹಿಸುವ ಮೂಲಕ ಈ ಸಾಧನೆಗೆ ಕಾರಣವಾಗಿದೆ ಎಂದು ತಾಯಿ ಶ್ವೇತನಾಗರಾಜ್ ತಿಳಿಸಿದರು.