Advertisement
ಜ. 5ರಂದು ಥಾಣೆ ಪಶ್ಚಿಮದ ಹೀರಾನಂದಾನಿ ಮೆಡೋಸ್‌ನಲ್ಲಿ ರುವ ಡಾ| ಕಾಶೀನಾಥ್ ಘಾಣೇಕರ್ ಸಭಾಗೃಹದಲ್ಲಿ ನಡೆದ ವರ್ತಕ್ ನಗರ ಕನ್ನಡ ಸಂಘದ 53ನೇ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಶೈಕ್ಷಣಿಕ, ವೈದ್ಯಕೀಯವಾಗಿ ಸ್ಥಳೀಯರಿಗೆ ಸಹಕರಿ ಸುತ್ತಿದೆ. ಯುವಪೀಳಿಗೆಯಲ್ಲಿ ನಾಡಿನ ಸಂಸ್ಕೃತಿ- ಸಂಸ್ಕಾರ, ಆಚಾರ- ವಿಚಾರ ಜೀವಂತವಾಗಿರಿಸುವಲ್ಲಿ ಸಂಘವು ಸದಾ ಸಹಕರಿಸುತ್ತಿದೆ. ನಾಡು-ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವ ಅಗತ್ಯತೆಯಿದೆ. ನೃತ್ಯ ಸ್ಪರ್ಧೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಅಭಿಮಾನದ ಸಂಗತಿಯಾಗಿದೆ. ಸಂಘದ ಪ್ರತಿಯೊಂದು ಕಾರ್ಯಕ್ರಮ ಗಳಿಗೆ ದಾನಿಗಳ, ತುಳು-ಕನ್ನಡಿಗರ ಸಹಕಾರ ಸದಾಯಿರಲಿ ಎಂದು ನುಡಿದು ಶುಭಹಾರೈಸಿದರು.
ಅತಿಥಿಯಾಗಿ ಆಗಮಿಸಿದ ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಮಾತ ನಾಡಿ, ಮುಂಬಯಿಯಲ್ಲಿ ಸ್ಥಾಪನೆ ಗೊಂಡಿರುವ ವಿವಿಧ ಜಾತಿಯ ಸಂಘ-ಸಂಸ್ಥೆಗಳು ಮುಂಬಯಿ ತುಳು-ಕನ್ನಡಿಗರ ಸಾಧನೆಯ ಪ್ರತೀಕಗಳಾಗಿವೆ. ಆದರೆ ಕನ್ನಡಪರ ಸಂಘಗಳು ಮಾತ್ರ ಭಿನ್ನವಾಗಿ ಗೋಚರಿ ಸುತ್ತಿದ್ದು, ನಾಡು- ನುಡಿಯ ಬಲವರ್ಧನೆಗೆ ಶ್ರಮಿಸುತ್ತಿವೆ. ಕನ್ನಡಪರ ಸಂಘಟನೆಗಳಿಗೆ ಯಾವುದೇ ರೀತಿಯ ಜಾತಿ, ಧರ್ಮ-ಮತದ ಅಂತರವಿಲ್ಲ. ಅವೆಲ್ಲವನ್ನು ಮೀರಿ ಕನ್ನಡಪರ ಸಂಘ – ಸಂಸ್ಥೆಗಳು ಇಲ್ಲಿ ಬೆಳೆದು ನಿಂತಿವೆ. ಇಲ್ಲಿ ನಾವೆಲ್ಲರೂ ಕನ್ನಡಿಗರು ಎಂಬ ಭಾವನೆ ಮುಖ್ಯವಾಗಿರುತ್ತದೆ. ಥಾಣೆಯ ವರ್ತಕ್ ನಗರ ಕನ್ನಡ ಸಂಘವು ವರ್ಷಪೂರ್ತಿ ವೈವಿಧ್ಯ ಮಯ ಕಾರ್ಯಕ್ರಮಗಳಿಂದ ಸಕ್ರಿಯ ವಾಗಿರುವುದು ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು. ಭಾಷೆ ಬಗ್ಗೆ ಕೀಳರಿಮೆ ಸಲ್ಲದು
ಗೌರವ ಅತಿಥಿಯಾಗಿ ಪಾಲ್ಗೊಂಡ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಮಾತನಾಡಿ, ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು. ನಾಡಿನ ಸಂಸ್ಕೃತಿ-ಸಂಸ್ಕಾರಗಳು ಉಳಿಯಲು ಇಂತಹ ಸಂಘಟನೆಗಳಿಂದ ಮಾತ್ರ ಸಾಧ್ಯ. ತುಳು-ಕನ್ನಡಿಗರು ಎಲ್ಲಿ ಹೋದರೂ ಸಂಘಟಿತರಾಗಿ ಇರುತ್ತಾರೆ. ನಾವೆಲ್ಲರು ಭಾಷೆಯ ಬಗ್ಗೆ ಕಾಳಜಿ ವಹಿಸುವ ಅಗತ್ಯತೆಯಿದೆ. ವರ್ತಕ್ ನಗರ ಕನ್ನಡ ಸಂಘವು ಕನ್ನಡ ಕಂಪನ್ನು ಬೀರುವುದರೊಂದಿಗೆ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.
Related Articles
ಇನ್ನೋರ್ವ ಗೌರವ ಅತಿಥಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ದಯಾನಂದ ಪೂಜಾರಿ ಅವರು ಮಾತನಾಡಿ, ಸಂಸ್ಥೆ ಉತ್ತಮ ಸಾಧನೆಗಳೊಂದಿಗೆ ಶತ ಮಾನೋತ್ಸವವನ್ನು ಆಚರಿಸುವಂತಾ ಗಲಿ ಎಂದು ಹಾರೈಸಿದರು.
Advertisement
ಸಮಾರಂಭದಲ್ಲಿ ಸಾಧಕರಾದ ಶ್ರೀ ಆದಿಶಕ್ತಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಜಯರಾಮ್ ಜಿ. ಶೆಟ್ಟಿ ಮತ್ತು ಪ್ರೇಮಾ ಜೆ. ಶೆಟ್ಟಿ ಹಾಗೂ ಕನ್ನಡ ಸಂಘ ವರ್ತಕ್ ನಗರ ಮಾಜಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷ ಜಯಂತ್ ಎನ್. ಶೆಟ್ಟಿ, ಕಾರ್ಯದರ್ಶಿ ಶೇಖರ್ ಶೆಟ್ಟಿ, ಕೋಶಾಧಿಕಾರಿ ಬಾಲಕೃಷ್ಣ ರೈ, ಉಪಾಧ್ಯಕ್ಷ ಅರುಣ್ ಕುಮಾರ್ ಸುವರ್ಣ, ಜತೆ ಕಾರ್ಯದರ್ಶಿ ಸಕಿತಾ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಸಿ. ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿದ್ಯಾ ಆರ್. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಎನ್. ಹೆಗ್ಡೆ ಉಪಸ್ಥಿತರಿದ್ದರು. ಮಹಿಳಾ ವಿಭಾಗದವರು ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿದ್ಯಾ ಆರ್. ಶೆಟ್ಟಿ ಸ್ವಾಗತಿಸಿದರು.
ಮಹಿಳಾ ವಿಭಾಗದ ಸದಸ್ಯೆ ರೇಖಾ ಶೆಟ್ಟಿ, ಯಶೋದಾ ಶೆಟ್ಟಿ, ದಿವಾಕರ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಡಾ| ವಾಣಿ ಉಚ್ಚಿಲ್ಕರ್ ಅವರು ಅತಿಥಿಗಳನ್ನು ಪರಿಚಯಿಸಿದರು. ಅತಿಥಿ-ಗಣ್ಯರುಗಳನ್ನು ಪದಾಧಿಕಾರಿ ಗಳು ಗೌರವಿಸಿದರು. ಕಾರ್ಯದರ್ಶಿ ಶೇಖರ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಯಶೋದಾ ಬಟ್ಟಪಾಡಿ ಮತ್ತು ಮಹಿಳಾ ಸದಸ್ಯೆ ಶರ್ಮಿಳಾ ಎಸ್. ಶೆಟ್ಟಿ ವಾಚಿಸಿದರು. ಜಾನಪದ ನೃತ್ಯ ಸ್ಪರ್ಧೆಯ ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಿಸಿದರು. ಸ್ಪರ್ಧೆಯ ಫಲಿತಾಂಶವನ್ನು ಯಶೋದಾ ಬಟ್ಟಪಾಡಿ ಘೋಷಿಸಿದರು.
ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ ಕಲಾ ಸಂಘಟಕ ಕರ್ನೂರು ಮೋಹನ್ ರೈ ಅವರನ್ನು ಗೌರವಿಸಲಾಯಿತು. ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರತಿಭಾ ಪುರಸ್ಕಾರ ಪಡೆದ ಸಂಘದ ಸದಸ್ಯರ ಮಕ್ಕಳಾದ ಅಶ್ಮಿತಾ ಶೆಟ್ಟಿ, ಸುಶಾಂತ್ ಶೆಟ್ಟಿ, ಶಾಶ್ಮಿತಾ ಶೆಟ್ಟಿ, ಅಭಿಜ್ಞಾ ಶೆಟ್ಟಿ, ಧನ್ಯಾ ಹೆಗ್ಡೆ, ದೃಶ್ಯ ಹೆಗ್ಡೆ, ಒಮನ್ ಬಂಟರ ಐಸಿರಿ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ಅರ್ಪಿತಾ ಶೆಟ್ಟಿ ಮತ್ತು ಅಶ್ಮಿತಾ ಶೆಟ್ಟಿ ಅವರನ್ನು ಗಣ್ಯರ ಹಸ್ತದಿಂದ ಗೌರವಿಸಲಾಯಿತು.
ಮಾಜಿ ಅಧ್ಯಕ್ಷರಾದ ರತ್ನಾಕರ ಜಿ. ಶೆಟ್ಟಿ ಮತ್ತು ಸುನಿಲ್ ಆಳ್ವ ಅವರನ್ನು ಗೌರವಿಸಲಾಯಿತು. ಐಐಟಿ ಪರೀಕ್ಷೆ ಯಲ್ಲಿ ಚಿನ್ನದ ಪದಕ ಪಡೆದ ಚಿರಾಗ್ ಅವರ ಮಾತಾಪಿತರಾದ ಚಂದ್ರಹಾಸ್ ಶೆಟ್ಟಿ ಮತ್ತು ರೇಖಾ ದಂಪತಿಯನ್ನು ಗೌರವಿಸಲಾಯಿತು. ಕಲಾ ಸಂಘಟಕ ಕರ್ನೂರು ಮೋಹನ್ ರೈ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸಕಿತಾ ಎಸ್. ಶೆಟ್ಟಿ ವಂದಿಸಿದರು. ಮಕ್ಕಳು ಮತ್ತು ಸದಸ್ಯ ಬಾಂಧವರಿಂದ ನೃತ್ಯ ವೈವಿಧ್ಯ ಮತ್ತು ಬಾಬಾ ಪ್ರಸಾದ್ ಅರಸ ಅವರ ನಿರ್ದೇಶನದಲ್ಲಿ ಸದಸ್ಯೆಯರಿಂದ ಕುಲ ದೀಪ ಕಿರು ನಾಟಕ, ಸದಸ್ಯರಿಂದ ಬುಡುª ಪೋವೊಡಿc ನಾಟಕ ಪ್ರದರ್ಶನಗೊಂಡಿತು. ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ