Advertisement

Snapchat ಡೌನ್‌ಲೋಡ್ ಮಾಡಬೇಡ ಎಂದಿದ್ದೇ ತಪ್ಪಾಯ್ತು… ನೇಣಿಗೆ ಶರಣಾದ 16 ವರ್ಷದ ಮಗಳು

12:07 PM Jun 24, 2024 | Team Udayavani |

ಮಹಾರಾಷ್ಟ್ರ: ಮೊಬೈಲ್ ನಲ್ಲಿ ಸ್ನ್ಯಾಪ್‌ಚಾಟ್ ಡೌನ್ ಲೋಡ್ ಮಾಡಿದ್ದಕ್ಕೆ ತಂದೆ ಗದರಿದ್ದಕ್ಕೆ ಮನನೊಂದ ಮಗಳು ರಾತ್ರಿ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

Advertisement

ಡೊಂಬಿವಿಲಿ ಪ್ರದೇಶದ ನಿಲ್ಜೆಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಹದಿನಾರು ವರ್ಷದ ಮಗಳು ತನ್ನ ಮೊಬೈಲ್ ನಲ್ಲಿ ಸ್ನ್ಯಾಪ್‌ಚಾಟ್ ಡೌನ್ ಲೋಡ್ ಮಾಡಿದ್ದಾಳೆ ಇದನ್ನು ಗಮನಿಸಿದ ತಂದೆ ಆ್ಯಪ್ ಡಿಲೀಟ್ ಮಾಡುವಂತೆ ಗದರಿಸಿದ್ದಾರೆ ಇದರಿಂದ ಮನನೊಂದ ಮಗಳು ರಾತ್ರಿ ಊಟ ಮಾಡಿ ತನ್ನ ಕೋಣೆಯಲ್ಲಿ ಮಲಗಲು ಹೋದವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಶನಿವಾರ ಬೆಳಿಗ್ಗೆ ಪೋಷಕರು ಎದ್ದು ಮಗಳನ್ನು ಎಬ್ಬಿಸಲು ಹೋದಾಗ ಮಗಳು ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಪರಿಶೀಲಿಸಿದ ವೈದ್ಯರು ಮಗಳು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆಕ್ಷೇಪದ ನಡುವೆಯೂ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next