Advertisement

IndiGo Flight: ವಿಮಾನದಲ್ಲಿ ಯಾರಿಗೂ ಗೊತ್ತಾಗದಂತೆ ಸಿಗರೇಟ್ ಎಳೆದು ಸಿಕ್ಕಿಬಿದ್ದ ಪ್ರಯಾಣಿಕ

03:19 PM Jun 28, 2024 | Team Udayavani |

ನವದೆಹಲಿ: ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದ ಶೌಚಾಲಯದೊಳಗೆ ಧೂಮಪಾನ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

Advertisement

ಘಟನೆ ಬುಧವಾರ ಸಂಜೆ ನಡೆದಿದ್ದು 176 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಸಂಜೆ 5.15ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿತ್ತು ಇನ್ನೇನು ವಿಮಾನ ಮುಂಬೈಯಲ್ಲಿ ಇಳಿಯಲು ಐವತ್ತು ನಿಮಿಷಗಳು ಬಾಕಿ ಇರುವ ವೇಳೆ ಪ್ರಯಾಣಿಕನೊಬ್ಬ ಯಾರಿಗೂ ಗೊತ್ತಾಗದ ರೀತಿಯಲ್ಲಿ ಶೌಚಾಲಯಕ್ಕೆ ಹೋಗಿ ಧೂಮಪಾನ ಮಾಡಿದ್ದಾನೆ. ಆದರೆ ಆತ ಧೂಮಪಾನ ಮಾಡಿರುವ ವಿಚಾರ ಸ್ಮೋಕ್ ಸೆನ್ಸರ್ ಮೂಲಕ ಕ್ಯಾಬಿನ್ ಸಿಬಂದಿಗೆ ಸೂಚನೆ ಸಿಕ್ಕಿದೆ. ಕೂಡಲೇ ಪ್ರಯಾಣಿಕ ಶೌಚಾಲಯದಿಂದ ಹೊರ ಬಂದ ಕೂಡಲೇ ಕ್ಯಾಬಿನ್ ಸಿಬಂದಿ ಶೌಚಾಲಯ ಪರಿಶೀಲನೆ ನಡೆಸಿದ ವೇಳೆ ಶೌಚಾಲಯದೊಳಗೆ ಬೆಂಕಿ ಕಡ್ಡಿ ಹಾಗೂ ಸಿಗರೇಟ್ ತುಂಡು ಪತ್ತೆಯಾಗಿದೆ.

ಘಟನೆ ಕುರಿತು ಕ್ಯಾಬಿನ್ ಸಿಬಂದಿಗಳು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಇದಾದ ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ಮೇಲಧಿಕಾರಿಗಳು ಪ್ರಯಾಣಿಕನನ್ನು ವಿಚಾರಣೆ ನಡೆಸಿದ್ದಾರೆ ಈ ವೇಳೆ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ನಿವಾಸಿಯಾಗಿರುವ ಖಲೀಲ್ ಕಾಜಮ್ಮುಲ್ ಖಾನ್ ಎಂಬಾತನನ್ನು ಮುಂಬೈನ ಸಹಾರ ಪೊಲೀಸ್ ಠಾಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: T20 World Cup: ಬಾಬರ್ ಅಜಂ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Advertisement
Advertisement

Udayavani is now on Telegram. Click here to join our channel and stay updated with the latest news.

Next