Advertisement

Thane; ಒಬ್ಬಳೇ ವಾಕಿಂಗ್‌ ಹೋದ ಪತ್ನಿಗೆ ತಲಾಖ್‌: ಪತಿ ವಿರುದ್ಧ ಪ್ರಕರಣ

12:27 AM Dec 14, 2024 | Team Udayavani |

ಥಾಣೆ: ಒಬ್ಬಂಟಿಯಾಗಿ ವಾಕಿಂಗ್‌ ಹೋಗುತ್ತಾಳೆ ಎಂದು ಆಪಾ­ದಿಸಿ ತನ್ನ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ್ದ ಭೂಪನೊಬ್ಬನ ವಿರುದ್ಧ ಥಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನ್ನ ಮಾವನಿಗೆ ಕರೆ ಮಾಡಿದ್ದ ಆರೋಪಿಯು, ನಿಮ್ಮ ಮಗಳು ಒಬ್ಬಂಟಿಯಾಗಿ ವಾಕಿಂಗ್‌ಗೆ ತೆರಳುತ್ತಾಳೆ. ಆದ್ದರಿಂದ ಆಕೆಗೆ ತಲಾಖ್‌ ನೀಡುತ್ತಿದ್ದೇನೆ ಎಂದಿದ್ದ. ಬಳಿಕ ಈ ಕುರಿತು ಆತನ ಪತ್ನಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. 2018ರಲ್ಲಿ ತ್ರಿವಳಿ ತಲಾಖ್‌ ನಿಷೇಧವಾಗಿದ್ದರೂ, ತಲಾಖ್‌ ನೀಡಿದ ಆರೋಪ­ದಡಿ ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next