ಮಹಾರಾಷ್ಟ್ರ: ರೈಲ್ವೆ ಸಿಬ್ಬಂದಿಯೊಬ್ಬರು ಆಯುರ್ವೇದ ಚಿಕಿತ್ಸಾ ಕೇಂದ್ರದ ವಿರುದ್ಧ ವಂಚನೆಯ ಆರೋಪವನ್ನು ಮಾಡಿ ಪ್ರಕರಣವನ್ನು ದಾಖಲಿಸಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಪತ್ನಿ ಕಳೆದ ಕೆಲ ಸಮಯದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗವನ್ನು ಗುಣಪಡಿಸುವುದಾಗಿ ಆಯುರ್ವೇದ ಚಿಕಿತ್ಸಾ ಕೇಂದ್ರವೊಂದು ವ್ಯಕ್ತಿಗೆ ಭರವಸೆ ನೀಡಿ ಕಳೆದ ಫೆಬ್ರವರಿಯಿಂದ ಚಿಕಿತ್ಸೆಯನ್ನು ಆರಂಭಿಸಿತ್ತು. ಚಿಕಿತ್ಸೆ ಆರಂಭಿಸಿದಾಗಿನಿಂದ ಇದುವರೆಗೆ 15.22 ಲಕ್ಷ ರೂ. ಖರ್ಚು ತಗುಲಿದೆ.
ಇದನ್ನೂ ಓದಿ: ಮಸೀದಿಯಲ್ಲಿ ಇಫ್ತಾರ್ ಆಹಾರ ಸೇವಿಸಿದ ಬಳಿಕ 100 ಕ್ಕೂ ಅಧಿಕ ಮಂದಿ ಅಸ್ವಸ್ಥ; ಕೆಲವರು ಗಂಭೀರ
ಆದರೆ ಚಿಕಿತ್ಸೆಯಿಂದ ತನ್ನ ಪತ್ನಿಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ ಸಿಬ್ಬಂದಿಗಳು ಕೆಲ ಸಮಯದಿಂದ ನನ್ನೊಂದಿಗೆ ಸರಿಯಾಗಿ ಸಂಪರ್ಕಕ್ಕೆ ಬರುತ್ತಿಲ್ಲ ಚಿಕಿತ್ಸೆಯ ನೆಪದಲ್ಲಿ ಆಯುರ್ವೇದ ಚಿಕಿತ್ಸಾ ಕೇಂದ್ರ ನನಗೆ ಮೋಸ ಮಾಡಿದೆ ಎಂದು ಆರೋಪಿಸಿ ಥಾಣೆ ಪೊಲೀಸರಿಗೆ ವ್ಯಕ್ತಿ ದೂರು ನೀಡಿದ್ದಾರೆ.
ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿರುವ ಇಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ ಇದುವೆರೆಗೆ ಈ ಪ್ರಕರಣದಲ್ಲಿ ಯಾರ ಬಂಧನವೂ ಆಗಿಲ್ಲ. ದೂರಿನ ಅನ್ವಯ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.