Advertisement

Shocking: ಊಟ ರುಚಿಯಾಗಿ ಮಾಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹೆತ್ತ ತಾಯಿಯನ್ನೇ ಕೊಲೆಗೈದ ಮಗ

12:53 PM Nov 28, 2023 | |

ಮಹಾರಾಷ್ಟ್ರ: ಊಟ ರುಚಿಯಾಗಿ ಮಾಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಗ ತನ್ನ ಹೆತ್ತ ತಾಯಿಯನ್ನೇ ಕುಡುಗೋಲಿನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

Advertisement

ಘಟನೆ ವಿವರ: ಕಳೆದ ಭಾನುವಾರ ಸಂಜೆ ಥಾಣೆಯ ಮುರ್ಬಾದ್ ತಾಲೂಕಿನ ವೇಲು ಗ್ರಾಮದಲ್ಲಿ ಘಟನೆ ನಡೆದಿದ್ದು, ತಾಯಿ ಮಗನಿಗೆ ಊಟ ಬಡಿಸಿ ಕೊಟ್ಟಿದ್ದಾರೆ ಈ ವೇಳೆ ಊಟ ಮಾಡಲು ಬಂದ ಮಗ ಊಟ ರುಚಿಯಾಗಲಿಲ್ಲ ಎಂದು ಖ್ಯಾತೆ ತೆಗೆದಿದ್ದಾನೆ ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳಿದಿದೆ ಇದರಿಂದ ಕುಪಿತಗೊಂಡ ಮಗ ಮನೆಯೊಳಗಿದ್ದ ಕುಡುಗೋಲಿನಿಂದ ತಾಯಿಯ ಕುತ್ತಿಗೆಗೆ ಬಲವಾಗಿ ಹೆಡೆದಿದ್ದಾನೆ ಗಂಭೀರ ಗಾಯಗೊಂಡ ತಾಯಿ ಸ್ಥಳದಲ್ಲೇ ಬಿದ್ದು ಒದ್ದಾಡಿ ಮೃತಪಟ್ಟಿದ್ದಾರೆ.

ತಾಯಿ ಮಗನಿಗೆ ಜಗಳವಾಗುತ್ತಿರುವ ವಿಚಾರ ನೆರೆಹೊರೆಯವರಿಗೆ ಗೊತ್ತಾಗಿ ಮನೆಯ ಬಳಿ ಬಂದು ನೋಡಿದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ ಕೂಡಲೇ ನೆರೆಹೊರೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಈ ವೇಳೆ ವಿಚಾರಣೆ ನಡೆಸಿದಾಗ ತಾಯಿ ಮತ್ತು ಮಗನ ನಡುವೆ ಜಾಗದ ವಿಚಾರದಲ್ಲಿ ಆಗಾಗ ಜಗಳ ನಡೆಯುತಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ ಆದರೆ ಭಾನುವಾರ ಊಟದ ವಿಚಾರದಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಕೊನೆಗೊಂಡಿದೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Kerala: 10 ಲಕ್ಷಕ್ಕಾಗಿ ಕೇರಳದ 6 ವರ್ಷದ ಬಾಲಕಿ ಅಪಹರಣ, ಶೀಘ್ರ ಪತ್ತೆಗೆ ಕೇರಳ ಸಿಎಂ ಆದೇಶ

Advertisement
Advertisement

Udayavani is now on Telegram. Click here to join our channel and stay updated with the latest news.

Next