Advertisement

ಥಾಣೆಯಲ್ಲಿ ವಾರ್ಷಿಕ ಗಣೇಶೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ

03:49 PM Sep 23, 2018 | |

ಮುಂಬಯಿ: ಕುಲಾಲ ಸಂಘ ಮುಂಬಯಿ ವತಿಯಿಂದ ಥಾಣೆ ಘೋಡ್‌ಬಂದರ್‌ನಲ್ಲಿರುವ ಸಂಸ್ಥೆಯ ಜಾಗದಲ್ಲಿ ಮೂರನೇ ವಾರ್ಷಿಕ ಗಣೇಶೋತ್ಸವವು ಸೆ. 13 ರಿಂದ ಸೆ. 14 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಸಂಘದ ಅಧ್ಯಕ್ಷ ಪಿ. ದೇವದಾಸ್‌ ಎಲ್‌. ಕುಲಾಲ್‌ ಅವರ ಉಪಸ್ಥಿತಿಯಲ್ಲಿ, ಉಪಾಧ್ಯಕ್ಷ ರಘು ಎ. ಮೂಲ್ಯ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆ. 13 ರಂದು ಬೆಳಗ್ಗೆ ಥಾಣೆಯ ಎನ್‌. ಕೃಷ್ಣಮೂರ್ತಿ ಭಟ್‌ ಅವರ ಪೌರೋಹಿತ್ಯದಲ್ಲಿ ಗಣಹೋಮ, ಗಣೇಶನ ಮೂರ್ತಿ ಪ್ರತಿಷ್ಠಾಪನೆ, ಮಂಗಳಾರತಿ ನಡೆಯಿತು. ಆಶೀರ್ವಚನ ನೀಡಿ ಕೃಷ್ಣಮೂರ್ತಿ ಭಟ್‌ ಅವರು, ಈ ಜಾಗದಲ್ಲಿ ಸಮಾಜ ಬಾಂಧವರಿಗೆ ಉಪಯೋಗವಾಗುವಂತೆ ಭವ್ಯ ಕುಲಾಲ ಭವನ ಆದಷ್ಟು ಬೇಗ ನಿರ್ಮಾಣವಾಗಲು ಶ್ರೀ ಮಹಾಗಣಪತಿ ದೇವರ ಅನುಗ್ರಹ ಸದಾಯಿರಲಿ ಎಂದು ಹಾರೈಸಿದರು.

ಗಣಹೋಮದ ಪೂಜಾ ವಿಧಿ- ವಿಧಾನ ಗಳಲ್ಲಿ ನಂದಕುಮಾರ್‌ ದಂಪತಿ ಸಹಕರಿಸಿ ದರು. ಸಂಜೆ 4ರಿಂದ ಗುರುವಂದನಾ ಭಜನ ಮಂಡಳಿಯ ಕಾರ್ಯಾಧ್ಯಕ್ಷ ಸಿಎ ಜಿ. ಮೂಲ್ಯ ಅವರ ಮುಂದಾಳತ್ವದಲ್ಲಿ ಸಂಘದ ಐದು ಸ್ಥಳೀಯ ಸಮಿತಿಯ ಸದಸ್ಯರಿಂದ ಭಜನೆ, ಹರಿನಾಮ ಸಂಕೀರ್ತನೆ ಜರಗಿತು.

ಬಳಿಕ ಗುರುವಂದನಾ ಭಜನಾ ಮಂಡಳಿಯ ಪ್ರಧಾನ ಅರ್ಚಕ ಶಂಕರ್‌ ವೈ. ಮೂಲ್ಯ ಮಂಗಳಾರತಿಗೈದರು. ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಸಂಘದ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ನಡೆಯಿತು. ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರು ತನ್ನ ಮನೆಯ ಕೆಲಸವನ್ನು ಮಾಡಿ ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿ ಸೇರಿರುವುದನ್ನು ನೋಡಿ ಸಂತೋಷವಾಯಿತು. ಮುಂದಿನ ದಿನಗಳಲ್ಲಿಯೂ ನಿಮ್ಮಿಂದ ಸಹಕಾರ ಅಗತ್ಯವಾಗಿದೆ. ಈ ಜಾಗದಲ್ಲಿ ಸ್ಥಿರ ಚಪ್ಪರ ನಿರ್ಮಾಣಕ್ಕೆಂದು ಸಂಗ್ರಹಿಸಿದ 1 ಲಕ್ಷ ರೂ. ಗಳನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿ ಶುಭಹಾರೈಸಿದರು.

ಆನಂತರ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭಹಾರೈಸಿಕೊಂಡರು. ಕಾರ್ಯದರ್ಶಿ ಮಾಲತಿ ಅಂಚನ್‌ ವಂದಿಸಿದರು. ಗಣೇಶೋತ್ಸವ ಹಾಗೂ ಸ್ಥಿರ ಚಪ್ಪರದ ಯಶಸ್ಸಿಗೆ ಸ್ಥಿರ ಹೆಚ್ಚಿನ ಮೊತ್ತದ ಸ್ಥಿರ ಧನ ಸಹಾಯ ನೀಡಿದ ದಾನಿಗಳನ್ನು ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸತ್ಕರಿಸಿದರು. ಅಧ್ಯಕ್ಷ ಪಿ. ದೇವದಾಸ್‌ ಎಲ್‌. ಕುಲಾಲ್‌ ಅವರು ಮಾತನಾಡಿ, ಈ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಂಘದ ವತಿಯಿಂದ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ವಿನಂತಿಸಿದರು.

Advertisement

ಸೆ. 14 ರಂದು ಸಂಜೆ 4 ರಿಂದ ಮಹಾಮಂಗಳಾರತಿ ನಡೆಯಿತು. ವಾದ್ಯ ಘೋಷಗಳೊಂದಿಗೆ ವಿಶೇಷ ಮೆರವಣಿಗೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಕಾರ್ಯಕಾರಿ ಮಂಡಳಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಐದು ಸ್ಥಳೀಯ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್‌, ಕೋಶಾಧಿಕಾರಿ ಜಯ ಎಸ್‌. ಅಂಚನ್‌, ಜ್ಯೋತಿ ಕೋ. ಆಪರೇಟಿವ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌, ಡಿ. ಐ. ಮೂಲ್ಯ, ಸುನೀಲ್‌ ಕುಮಾರ್‌ ಕುಲಾಲ್‌, ಶೇಖರ ಮೂಲ್ಯ, ಚಂದ್ರಶೇಖರ್‌ ಕುಲಾಲ್‌, ಸುಂದರ ಎನ್‌. ಮೂಲ್ಯ, ಉಮೇಶ್‌ ಎಂ. ಬಂಗೇರ, ಸಂಜೀವ ಬಂಗೇರ, ಕೃಷ್ಣ ಎಸ್‌. ಮೂಲ್ಯ, ಶಶಿಕುಮಾರ್‌ ವಿ. ಕುಲಾಲ್‌, ಜೆ. ಕುಟ್ಟಿ, ನಂದಕುಮಾರ್‌, ವೇಣುಗೋಪಾಲ್‌ ಕರ್ಕೇರ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next