ಥಾಣೆ: ಥಾಣೆ ಬಂಟ್ಸ್ ಅಸೋಸಿಯೇಶನ್ ಇದರ 14ನೇ ವಾರ್ಷಿಕೋತ್ಸವ ಸಮಾರಂಭವು ಫೆ. 4ರಂದು ಅಪರಾಹ್ನ ಥಾಣೆ ಪಶ್ಚಿಮದ ಹೀರಾನಂದಾನಿ ಮೆಡೋಸ್, ಪೊಕ್ರಾನ್ ರೋಡ್‌ನ ಡಾ| ಕಾಶೀನಾಥ ಘಾಣೇಕರ್ ನಾಟ್ಯಗೃಹ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಥಾಣೆ ಬಂಟ್ಸ್‌ನ ಅಧ್ಯಕ್ಷ ಕುಶಲ್ ಸಿ. ಭಂಡಾರಿ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಂಆರ್‌ಜಿ ಗ್ರೂಪ್ ಇದರ ಕಾರ್ಯಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಆದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮಂಜುನಾಥ ಭಂಡಾರಿ ಶೆಡ್ಡೆ ಆಗಮಿಸಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಉದ್ಯಮಿ ಸುಧಾಕರ ಶೆಟ್ಟಿ, ಸಮಾಜ ಸೇವಕ ರಾಜೇಂದ್ರ ಮೆಲಾಂಟ, ಡಾಕ್ಟರ್ ಪ್ಲಾನೇಟ್ ಆಡಳಿತ ನಿರ್ದೇಶಕ ರತ್ನಾಕರ ಎ. ಶೆಟ್ಟಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಥಾಣೆ ಬಂಟ್ಸ್‌ನ ಸದಸ್ಯರ ಹಾಗೂ ಸದಸ್ಯರ ಮಕ್ಕಳಿಂದ ನೃತ್ಯ ವೈವಿಧ್ಯ, ವಿವಿಧ ವಿನೋದಾವಳಿಗಳು ಅಲ್ಲದೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ದಿನಕರ ಭಂಡಾರಿ ಕಣಂಜಾರು ರಚಿಸಿ, ಉಳೆಪಾಡಿ ಕೃಷ್ಣರಾಜ ಶೆಟ್ಟಿ ಅವರ ನಿರ್ದೇಶನದಲ್ಲಿ ಪಿರ ಬನ್ನಗ ತುಳು ನಾಟಕ ಹಾಗೂ ಮಹಿಳಾ ವಿಭಾಗದವರಿಂದ ಉಳ್ಳಾಲದ ರಾಣಿ ಅಬ್ಬಕ್ಕ ಎಂಬ ಕಿರು ಪ್ರಹಸನ ಪ್ರದರ್ಶನಗೊಂಡಿತು.
ಸಂಸ್ಥೆಯ ಅಧ್ಯಕ್ಷ ಕುಶಲ್ ಸಿ. ಭಂಡಾರಿ, ಉಪಾಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ, ಕಾರ್ಯದರ್ಶಿ ಸುನೀಲ್ ಜೆ. ಶೆಟ್ಟಿ, ಕೋಶಾಧಿಕಾರಿ ಭಾಸ್ಕರ ಎನ್. ಶೆಟ್ಟಿ, ಜತೆ ಕಾರ್ಯದರ್ಶಿ ಅಶೋಕ್ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಶೇಖರ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಂಜನ್ ಆರ್. ಶೆಟ್ಟಿ, ಸಂಸ್ಥೆಯ ಸ್ಥಾಪಕರು, ಮಾಜಿ ಅಧ್ಯಕ್ಷರುಗಳು, ಮಹಿಳಾ ವಿಭಾಗ, ಯುವ ವಿಭಾಗದ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.