Advertisement
ಪಾಪ್ ಗಾಯಕನ ಥರ ಕಾಣುತ್ತಿದ್ದ ಇನ್ನೊಬ್ಬ ಯುವಕ ಮೈ, ಕೈ ಮಸಿ ಮಾಡಿಕೊಂಡು ಚೀಲದಿಂದಇದ್ದಿಲು ತೆಗೆಯಲು ಶುರುಮಾಡಿದ. ಅವರು ಟೀಮಾಡುವುದನ್ನು ನೋಡುತ್ತಾಕೂರುವ ಕಾಯಕ ನಮ್ಮದಾಯಿತು. ಮಸಾಲೆ ಟೀಯನ್ನು ಕೆಂಪಗೆಕಾದ ಮಣ್ಣಿನ ಕುಡಿಕೆಗೆ ಹಾಕಿ, ಬುರುಗು ತುಂಬಿದಚಹಾವನ್ನು ಇನ್ನೊಂದು ಮಣ್ಣಿನ ಲೋಟಕ್ಕೆ ಹಾಕಿ ಕೈಗಿತ್ತರು. ಅದರ ಮಣ್ಣಿನ ವಾಸನೆ , ಹೊಗೆಯ ಘಮಲು ನಮ್ಮನ್ನುಮಂತ್ರಮುಗ್ಧರನ್ನಾಗಿಸಿತು. ಇನ್ನೊಂದು ಟೀ ಹಾಕಿಸಿಕೊಳ್ಳಲು ಎಲ್ಲರೂ ಲೋಟ ಮುಂದು ಮಾಡಿದರು!
Related Articles
Advertisement
ಅಂಗಡಿಗೆ ಬಣ್ಣ ಬಳಿವ, ಮಣ್ಣಿನ ಮಡಕೆಗಳಿಂದಶೃಂಗರಿಸುವ, ಅಂಗಡಿಯ ಲೋಗೊವಿನ್ಯಾಸಗೊಳಿಸುವ ಎಲ್ಲ ಕೆಲಸಗಳನ್ನು ಇವರಿಬ್ಬರೇ ಮಾಡಿದರು. ಫೆ.5 ರಂದು ಹಂಪಿ ಕೆಫೆ ಉದ್ಘಾಟನೆಗೊಂಡಿತು. ತಂದೂರಿ ಚಹಾ ಸವಿಯಲು ಸ್ಥಳೀಯರುಬರುತ್ತಿದ್ದಾರೆ. ಒಮ್ಮೆ ಇದರ ರುಚಿ ನೋಡಿದವರುಮತ್ತೂಮ್ಮೆ ಬರುವಾಗ ಮನೆಯವರನ್ನು, ಗೆಳೆಯರನ್ನು ಕರೆತರುತ್ತಿದ್ದಾರೆ. ದೊಡ್ಡ ಕುಡಿಕೆಯಪುಲ್ ಟೀ ಬೆಲೆ ರೂ. 25 ಅರ್ಧಕ್ಕೆ ರೂ.15. ಕೋವಿಡ್ ನಿಂದಾಗಿ ಪ್ರವಾಸಿಗರು ಹಂಪಿಗೆಬರುತ್ತಿಲ್ಲ. ಪ್ರವಾಸಿಗರು ಬರಲು ಶುರುವಾದರೆವ್ಯಾಪಾರ ಇನ್ನಷ್ಟು ವೃದ್ಧಿಸುತ್ತದೆ ಎನ್ನುವ ಆಶಯಈ ಯುವಕರದು. ಚಹಾದಂಗಡಿಯ ಎಲ್ಲಕೆಲಸಗಳನ್ನೂ ಇವರಿಬ್ಬರೇ ಮಾಡಿಕೊಳ್ಳುತ್ತಾರೆಎನ್ನುವುದು ಮತ್ತೂಂದು ವಿಶೇಷ.”ಲಾಕ್‌ಡೌನ್ ನಂತರ ಮಗನನ್ನು ಬೆಂಗಳೂರಿಗೆಕಳಿಸೋಕೆ ನಮಗೆ ಇಷ್ಟ ಇರಲಿಲ್ಲ. ಅವನು ಕೀರ್ತನ್‌ಜತೆ ಸೇರಿ ಚಹಾದಂಗಡಿ ಶುರು ಮಾಡಿದ್ದು ನಮಗೆಖುಷಿ ಕೊಡ್ತು’ ಎಂದು ಹೇಳುವಾಗ, ಪೃಥ್ವಿ ಯ ತಂದೆ ಲಕ್ಷ್ಮೀನಾರಾಯಣರ ಮೊಗದಲ್ಲಿ ಸಂತಸ ಅರಳುತ್ತದೆ.
ತಂದೂರಿ ಚಹಾದ ವಿಶೇಷತೆ :
ರೊಟ್ಟಿ ಸುಡುವ ತಂದೂರಿ ಥರದ ಒಲೆಯಲ್ಲಿ ಇದ್ದಿಲಿನಿಂದ ಬೆಂಕಿ ಮಾಡಲಾಗುತ್ತದೆ. ಅದರಲ್ಲಿ ಮಣ್ಣಿನ ಸಣ್ಣ ಕುಡಿಕೆಗಳನ್ನು ಕೆಂಪಗಾಗುವಂತೆಕಾಯಿಸುತ್ತಾರೆ. ವಿಶೇಷವಾಗಿ ತಯಾರಿಸಿದ ಮಸಾಲೆ ಚಹಾವನ್ನು ಕಾದ ಮಣ್ಣಿನಕುಡಿಕೆಗೆ ಸುರಿದರೆ, ಕೊತಕೊತ ಕುದಿದು ಬುರುಗು ಬರುತ್ತದೆ.ಅದನ್ನುಮತ್ತೂಂದು ಮಣ್ಣಿನ ಕುಡಿಕೆಗೆ ಹಾಕಿ ಗ್ರಾಹಕರಿಗೆ ನೀಡಲಾಗುತ್ತದೆ. ಚಹಾದಮಣ್ಣಿನ ಸ್ವಾದ ಎಂಥವರನ್ನೂ ಮರಳು ಮಾಡುತ್ತದೆ. ಮಧ್ಯ ಪ್ರಾಚ್ಯ ದೇಶಗಳಲ್ಲಿತಂದೂರಿ ಚಹಾ ಬಹು ಜನಪ್ರಿಯ. ಪ್ರಮೋದ್ ಬಣಕಾರ್ ಮತ್ತು ಅಮೋಲ್‌ರಾಜ್ ದಿಯಾ ಎಂಬ ಪೂನಾದ ಯುವಕರು ತಂದೂರಿ ಚಹಾವನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಕಂಡರು. ಇತ್ತೀಚಿನ ದಿನಗಳಲ್ಲಿ ಎಲ್ಲ ಪ್ರಮುಖ ನಗರಗಳಲ್ಲಿ ತಂದೂರಿ ಚಹಾದ ಅಂಗಡಿ ಕಾಣಸಿಗುತ್ತದೆ.
ಹಲವರಿಗೆ ಮಾದರಿ: ಕೋವಿಡ್ ಅವಾಂತರಕ್ಕೆ ಸಿಕ್ಕಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲಸಕಳೆದುಕೊಳ್ಳುವ, ಅರ್ಧ ಸಂಬಳದಲ್ಲಿ ಬದುಕುವಭಯದಲ್ಲೇ ದಿನ ದೂಡುತ್ತಿದ್ದಾರೆ. ಮಹಾನಗರಗಳಿಗೆ ವಲಸೆ ಹೋದ ಅಸಂಖ್ಯಾತಯುವಕ- ಯುವತಿಯರು ತಮ್ಮ ಊರುಗಳಿಗೆವಾಪಸಾಗಿದ್ದಾರೆ. ಮುಂದೇನು ಎಂಬ ಪ್ರಶ್ನೆಗೆಉತ್ತರ ಸಿಗದೆ ಕಂಗಾಲಾಗಿದ್ದಾರೆ. ಇಂಥಸಂದರ್ಭದಲ್ಲಿ, ಪೃಥ್ವಿ ಮತ್ತು ಕೀರ್ತನ್,ಹಳ್ಳಿಗಾಡಿನ ಮತ್ತು ಸಣ್ಣ ಪಟ್ಟಣಗಳ ಯುವಕ-ಯುವತಿಯರಿಗೆ ಮಾದರಿಯಾಗಿದ್ದಾರೆ.ಕೋವಿಡ್ ತಂದ ಸಕಾರಾತ್ಮಕ ಬದಲಾವಣೆ ಇದು.ಮಾಹಿತಿಗಾಗಿ ಪೃಥ್ವಿ ( 9739052220)ಸಂಪರ್ಕಿಸಬಹುದು.
– ಚಿತ್ರ-ಲೇಖನ: ಜಿ. ಕೃಷ್ಣಪ್ರಸಾದ್