Advertisement

ನಾಳೆಯಿಂದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

12:13 PM Apr 19, 2019 | Team Udayavani |

ತಾಂಬಾ: ಗ್ರಾಮದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಚೋರಗಿ ಗ್ರಾಮದಲ್ಲಿ ಏ.20ರಿಂದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ.

Advertisement

ಹಿನ್ನೆಲೆ: ಜಾತ್ರೆಗೆ ತಾಂಬಾ ಗ್ರಾಮದಿಂದ ಅನೇಕ ಭಕ್ತರು ಹೋಗಿ ಬರುತ್ತಿದ್ದರು. ಇವರಲ್ಲಿ ವಿಶ್ವಕರ್ಮ ಮನೆತನದ ಮೋನಪ್ಪ ಎಂಬಾತರು ಒಬ್ಬರು. ಪ್ರತಿ ವರ್ಷ ತಪ್ಪದೇ ಜಾತ್ರೆಗೆ ಹೋಗುತ್ತಿದ್ದ ಇವರ ಜೊತೆಗೆ ಆತ್ಮೀಯ ಗೆಳೆಯ ಗಂಗಾಮತ ಸ್ಥಾನದ ಸಿದ್ದಪ್ಪ ಹಾಗೂ ಅವನ ಮಗ ಮಳಿಗೆಪ್ಪ ಎನ್ನುವವರು ಚೋರಗಿ
ಗ್ರಾಮಕ್ಕೆ ಹೋಗುತ್ತಿದ್ದರು.

ಮಳೆಗೆ ತುಂಬಿದ ಹಳ್ಳ: ಒಂದು ವರ್ಷ ತಾಂಬಾ ಗ್ರಾಮದಲ್ಲಿ ಭಾರೀ ಮಳೆಯಾದ ಪರಿಣಾಮ ದೊಡ್ಡ ಹಳ್ಳ ತುಂಬಿ ಹರಿಯತೊಡಗಿತು. ಅದೇ ಸಂದರ್ಭದಲ್ಲಿ ಚೋರಗಿ ಗ್ರಾಮದಲ್ಲಿ
ವೀರಭದ್ರೇಶ್ವರ ಜಾತ್ರೆ ನಡೆಯುತ್ತಿತ್ತು. ಇದರಿಂದ ಭಕ್ತರು ಜಾತ್ರೆಗೆ ಹೋಗಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ 12 ವರ್ಷದ ಬಾಲಕ ಮಳಿಗೆಪ್ಪ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಈಜಿ ದಡ ಸೇರಿ 25 ಕಿ.ಮೀ ಅಂತರದಲ್ಲಿರುವ ಚೋರಗಿ ಗ್ರಾಮದಲ್ಲಿ ನಡೆಯುತ್ತಿರುವ ವೀರಭದ್ರೇಶ್ವರ ಜಾತ್ರೆಗೆ ಹೋದನಂತೆ.

ಅಂದು ವೀರಭದ್ರೇಶ್ವರನಿಗೆ ನಮಸ್ಕರಿಸಿ ಜಾತ್ರೆ ಮುಗಿಸಿಕೊಂಡು ಅಂದು ರಾತ್ರಿ ಅಲ್ಲಿಯೇ ದೇವಸ್ಥಾನದಲ್ಲಿ ಮಲಗಿದ್ದ. ಅವನ ಕನಸಿನಲ್ಲಿ ವೀರಭದ್ರೇಶ್ವರ ದೇವರು ಬಂದು ನಾನು
ಸಿಂದಗಿ ತಾಲೂಕಿನ ಆಲಮೇಲ ಗ್ರಾಮದ ಕೆರೆಯಲ್ಲಿದ್ದೇನೆ. ಕೆರೆ ಮಧ್ಯಭಾಗದಲ್ಲಿ ಒಂದು ಊದುಬತ್ತಿ ಉರಿಯುತ್ತಿದೆ. ಆ ಊದುಬತ್ತಿ
ಬಳಿ ನನ್ನ ಮೂರ್ತಿಯಿದೆ. ಆ ಮೂರ್ತಿ ತಂದು ನಿಮ್ಮ ಗ್ರಾಮದಲ್ಲಿ (ತಾಂಬಾ) ಪ್ರತಿಷ್ಠಾಪನೆ ಮಾಡಬೇಕೆಂದು ಮತ್ತು ಪ್ರತಿ ವರ್ಷ ಅಲ್ಲಿಯೇ ಜಾತ್ರೆ ಮಾಡಬೇಕೆಂದು ಹೇಳಿದನಂತೆ.

ಇದನ್ನೆಲ್ಲ ಕೇಳಿಸಿಕೊಂಡ ಬಾಲಕ ಬೆಳಗ್ಗೆದ್ದು ದೇವರಿಗೆ ನಮಸ್ಕರಿಸಿ, ತಾಂಬಾ ಗ್ರಾಮಕ್ಕೆ ಬಂದು ನಡೆದ ಘಟನೆಯನ್ನೆಲ್ಲ ಗ್ರಾಮಸ್ಥರಿಗೆ ತಿಳಿಸುತ್ತಾನೆ. ಆಗ ಗ್ರಾಮಸ್ಥರು ಒಂದೆಡೆ
ಸೇರಿ ಅಲ್ಲಿಂದ ಆಲಮೇಲ ಗ್ರಾಮಕ್ಕೆ ತೆರಳಿ ಬಾಲಕ ಹೇಳಿದಂತೆ ಕೆರೆಯಲ್ಲಿ ಹೋಗಿ ನೋಡುವಷ್ಟರಲ್ಲಿ ಕೆರೆ ಮಧ್ಯ ಭಾಗದಲ್ಲಿ
ಊದುಬತ್ತಿ ಉರಿಯುತ್ತಿರುವುದನ್ನು ಕಂಡು ಆ ಸ್ಥಳ ಅಗೆದು ನೋಡಿದರು. ಬಾಲಕ ಹೇಳಿದಂತೆ ಅಲ್ಲಿ ವೀರಭದ್ರೇಶ್ವರ ಮೂರ್ತಿ ಕಂಡು ಪೂಜೆ ಸಲ್ಲಿಸಿ, ಮೂರ್ತಿ ತಂದು ತಾಂಬಾ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಯಿತು ಎಂದು ವೀರಭದ್ರೇಶ್ವರ ಭಕ್ತರಾದ ಜೆ.ಎಸ್‌.
ಹತ್ತಳ್ಳಿ ಹೇಳುತ್ತಾರೆ.

Advertisement

ಜಾತ್ರಾ ಕಾರ್ಯಕ್ರಮಗಳು
20 ರಂದು ರಾತ್ರಿ 10ಕ್ಕೆ ರೇಣುಕಾ ಯಲ್ಲಮ್ಮ ಮಹಾತ್ಮೆ ಬಯಲಾಟ, ಜಾನುವಾರು ಜಾತ್ರೆ ನಡೆಯಲಿದೆ. ದೇವಾಸ್ಥಾನ ಆವರಣದಲ್ಲಿ ಶರೀ ವೀರಭದ್ರೇಶ್ವರ ಭಜನಾ ಕಲಾ ತಂಡದಿಂದ ಭಜನೆ ನಡೆಯಲಿದೆ. 21ರಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಕಟ್ಟಿಗೆ ಸಂಗ್ರಹಿಸುವುದು,
ರಾತ್ರಿ 10ಕ್ಕೆ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ಅಗ್ನಿ ಪ್ರಜ್ವಲಗೊಳ್ಳುವುದು. ನಂತರ ಮದ್ದು ಸುಡುವ ಕಾರ್ಯಕ್ರಮವಿದೆ. 22ರಂದು ಬೆಳಗ್ಗೆ 6ಕ್ಕೆ ವೀರಭದ್ರೇಶ್ವರ ಪಲ್ಲಕ್ಕಿ ಮೆರವಣಿಗೆ, ಸಂಜೆ 4ಕ್ಕೆ ರಥೋತ್ಸವ, ರಾತ್ರಿ 7ಕ್ಕೆ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಗುವುದು. ಅಂದು ರಾತ್ರಿ 10ಕ್ಕೆ ಗುರುಬಸವ ವಿರಕ್ತಮಠದ ಆವರಣದಲ್ಲಿ ಮುಧೋಳ ತಾಲೂಕಿನ ಸಿದ್ದರಾಮೇಶ್ವರ ನಾಟ್ಯ ಸಂಘದಿಂದ ಮನೆ ಬೆಳಗಿದ ಮುತ್ತೆ„ದೆ ಎಂಬ ನಾಟಕ ಪ್ರದರ್ಶನವಾಗಲಿದೆ.

ಲಕ್ಷ್ಮಣ ಹಿರೇಕುರುಬರ

Advertisement

Udayavani is now on Telegram. Click here to join our channel and stay updated with the latest news.

Next