Advertisement
ಖಾಸ್ಗತೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಜು. 6ರಿಂದ ನಡೆಸಿಕೊಂಡು ಬರಲಾದ ಸಪ್ತ ಭಜನಾ ಕಾರ್ಯಕ್ರಮ ಮೊಸರು ಗಡಿಗೆ ಒಡೆಯುವುದರ ಮೂಲಕ ಮಂಗಲಗೊಂಡಿತು.
Related Articles
Advertisement
ಅದರಂತೆ ಈ ಹಿಂದಿನಿಂದ ನಡೆಸಿಕೊಂಡು ಬರಲಾದ ಈ ಕಾರ್ಯಕ್ರಮದಂತೆ ತಾಳಿಕೋಟೆಯ ಖಾಸ್ಗತೇಶ್ವರ ಮಠದ ಜಾತ್ರೆ ಸಮಯದಲ್ಲಿ ಈ ಕಾರ್ಯಕ್ರಮ ಈಗಲೂ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿಂದಿನ ಸಂಪ್ರದಾಯದಂತೆ ಖಾಸ್ಗತೇಶ್ವರ ಜಾತ್ರೋತ್ಸವ ಸಮಯದಲ್ಲಿ ರಥೋತ್ಸವಕ್ಕೆ ಒಂದು ದಿನ ಮೊದಲು ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮವನ್ನು ಈಗಲೂ ಮುಂದುವರಿಸಿಕೊಂಡು ಭಕ್ತಾದಿಗಳ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅನುವು ಮಾಡಿಕೊಡುತ್ತಿರುವುದು ವಿಶೇಷ.
ಅದರಂತೆ ಈ ಸಲವೂ ಶನಿವಾರ ನಸುಕಿನ ಜಾವ ಜರುಗಿದ ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮದಲ್ಲಿ ಮುಂಬೈ, ಪುಣೆ, ಗೋವಾ, ಹೈದರಾಬಾದ್, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಿಂದಲೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಖಾಸ್ಗತೇಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಮಠದ ಉಸ್ತುವಾರಿ ಮುರುಗೇಶ ವಿರಕ್ತಮಠ, ವಿಶ್ವನಾಥ ವಿರಕ್ತಮಠ, ಶರಭಯ್ಯ ಪುರಾಣಿಕಮಠ, ಹಿರೂರ ಜಯಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀಧರ ಕಾಗನೂರಮಠ, ವಿಜಯಕುಮಾರ ಹಿರೇಮಠ, ಮುರಗನವರ ಶಿರೂರ ಇದ್ದರು.