Advertisement
19 ವಾರ್ಡ್‌ಗಳಿಗೆ 64 ಜನ ಕಣದಲ್ಲಿ ಉಳಿದಿದ್ದು ಅದರಲ್ಲಿ ಬಿಜೆಪಿಯಿಂದ 8 ಜನರು, ಕಾಂಗ್ರೆಸ್ ಪಕ್ಷದಿಂದ 9 ಜನರು, ಕೇವಲ ಎರಡು ವಾರ್ಡ್‌ಗಳಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಗಳನ್ನು ಹಾಕುವುದರೊಂದಿಗೆ ಸ್ಪರ್ಧಾ ಕಣದಲ್ಲಿ ಚುರುಕು ಮೂಡಿಸಿದ್ದಾರೆ. ಇದರಲ್ಲಿ 44 ಪಕ್ಷೇತರ ಅಭ್ಯರ್ಥಿಗಳು ಕೆಲವು ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗೆ ಠಕ್ಕರ್ ನೀಡಲು ಜಾತಿ ಲೆಕ್ಕಾಚಾರದ ಮೇಲೆ ಹಾಗೂ ಎರಡೂ ಪಕ್ಷದ ಕಾರ್ಯಕರ್ತರನ್ನು ಸೆಳೆದುಕೊಳ್ಳುವುದರೊಂದಿಗೆ ಜಾಣ್ಮೆಯೊಂದಿಗೆ ತಮ್ಮದೇ ರೀತಿಯಲ್ಲಿ ಪೈಪೋಟಿ ನೀಡುತ್ತಿದ್ದಾರೆ.
Related Articles
Advertisement
ನಾಡಗೌಡ-ನಡಹಳ್ಳಿ ಪ್ರತಿಷ್ಠೆ ಪ್ರಶ್ನೆ: ಮಾಜಿ ಶಾಸಕ ಸಿ.ಎಸ್. ನಾಡಗೌಡ ಹಾಗೂ ಹಾಲಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಪ್ರತಿಷ್ಠೆಯಾಗಿ ಗುರುತಿಸಿಕೊಂಡಿರುವ ವಾರ್ಡ್ ನಂ. 3ರಲ್ಲಿ ನಾಡಗೌಡರ ಆಪ್ತ ಪ್ರಭುಗೌಡ ಮದರಕಲ್ಲ ಹ್ಯಾಟ್ರಿಕ್ ಗೆಲುವು ಸಾಧಿಸಿ ನಾಡಗೌಡರ ಕೈ ಬಲಪಡಿಸಲು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ನಡಹಳ್ಳಿ ಅವರ ಆಪ್ತ ವಾಸುದೇವ ಹೆಬಸೂರ ಪ್ರಥಮ ಬಾರಿಗೆ ಪುರಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಈ ಕಾರಣದಿಂದ ಈ ವಾರ್ಡ್‌ನಲ್ಲಿ ಕೈಗೊಳ್ಳುವ ಪ್ರಚಾರ , ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದ ಮೇಲೆ ಬೆಟ್ಟಿಂಗ್ ಶುರುವಾಗಿದೆ. ಇನ್ನೊಂದೆಡೆ ಈ ವಾರ್ಡ್ ಮತದಾರು ಅತಿ ಸುಶಿಕ್ಷೀತರ ಕುಟುಂಬಕ್ಕೆ ಸೇರಿದವರಲ್ಲದೇ ಹೆಚ್ಚು ವಿದ್ಯಾವಂತ ಸರ್ಕಾರಿ ನೌಕರರು ಮತ್ತು ದೊಡ್ಡ ದೊಡ್ಡ ವ್ಯಾಪಾರಸ್ಥರು ಕುಟುಂಬದವರೇ ಹೆಚ್ಚು ವಾಸಿಸುವಂತಹ ಸ್ಥಳವಾಗಿದ್ದು ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿರುವುದು ಕಾಣುತ್ತಿದೆ.
ತಾಳಿಕೋಟೆ ಪುರಸಭೆ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಓರ್ವ ಸದಸ್ಯ ಅವಿರೋಧ ಆಯ್ಕೆಗೊಂಡಿದ್ದಾರೆ. ಪುರಸಭೆ ಗದ್ದುಗೆಗೆ ಅವಶ್ಯವಿರುವ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನ ನಾವು ಗೆಲ್ಲುತ್ತೇವೆ. ಕೆಲವು ವಾರ್ಡ್‌ಗಳಲ್ಲಿ ಟಿಕೆಟ್ ಮೂಲಕ ಸ್ಪರ್ಧೆಗಿಳಿಸಿದ್ದರೆ ಇನ್ನೂ ಕೆಲವೆಡೆ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದೇವೆ.•ರಾಘವೇಂದ್ರ ಚವ್ಹಾಣ
ಬಿಜೆಪಿ ತಾಲೂಕಾಧ್ಯಕ್ಷ ಪ್ರತಿ ಪುರಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳೇ ಅತಿ ಹೆಚ್ಚು ಆಯ್ಕೆಗೊಳ್ಳುತ್ತ ಬಂದಿದ್ದಾರೆ. ಅದರಂತೆ ಈ ಬಾರಿಯೂ ಕೂಡಾ ಹೆಚ್ಚಿನ ಸದಸ್ಯರು ಆಯ್ಕೆಗೊಳ್ಳುವದರೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ.
•ಎಸ್.ಎನ್. ಪಾಟೀಲ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ •ಜಿ.ಟಿ. ಘೋರ್ಪಡೆ