ತಾಳಿಕೋಟೆ: ಪಟ್ಟಣದ ಪುರಸಭೆ ಚುನಾವಣೆಗೆ 23 ವಾರ್ಡ್‌ಗೆ ಸಂಬಂಧಿಸಿ ಶುಕ್ರವಾರ ನಡೆದ ನಾಮಪತ್ರ ಪರಿಶೀಲನೆ ವೇಳೆ ಎರಡು ನಾಮಪತ್ರ ತಿರಸ್ಕೃತಗೊಂಡಿದ್ದು ಇಬ್ಬರು ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ನಿಂಗಪ್ಪ ಬಿರಾದಾರ ತಿಳಿಸಿದ್ದಾರೆ.
ವಾರ್ಡ್ ನಂ. 9ಕ್ಕೆ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಹಾಗೂ ಸಂತೋಷ ನಿಡಗುಂದಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ ಹಿಂದುಳಿದ ವರ್ಗ (ಬಿ) ಸೇರಿದ್ದರಿಂದ ಶಾಲಾ ದಾಖಲಾತಿ ಅನುಗುಣವಾಗಿ ಸಂತೋಷ ನಿಡಗುಂದಿ ಅವರು ಲಿಂಗಾಯತ ಜಾತಿ ಹಿಂದುಳಿದ ವರ್ಗ (ಬಿ) ಎಂದು ಜಾತಿ ಪ್ರಮಾಣ ಪತ್ರದ ಮೇಲೆ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರು ಮೂಲತಃ ಶಿಂಪಿ ಸಮಾಜಕ್ಕೆ ಹಿಂದುಳಿದ ವರ್ಗ (ಅ)ಕ್ಕೆ ಸೇರಿದ್ದರ ಕುರಿತು ದಾಖಲಾತಿ ಒದಗಿ ಬಂದಿದ್ದರಿಂದ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಸ್ಥಾನಿಕ ಚೌಕಸಿ ನಡೆಸಿ ನಿಡಗುಂದಿ ಅವರ ನಾಮಪತ್ರ ತಿರಸ್ಕೃತಗೊಳಿಸಿದರು. ಇದರಿಂದ 9 ನೇ ವಾಡ್ ಅಭ್ಯರ್ಥಿ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವಿರೋಧ ಆಯ್ಕೆಗೊಂಡರು.
20ನೇ ವಾರ್ಡ್‌ಗೆ ಸಂಬಂಧಿಸಿ ಜುಬೇದಾ ಹುಸೇನಬಾಷಾ ಜಮಾದಾರ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ನಾಮಪತ್ರ ಪರಿಶೀಲನೆ ಬಳಿಕ ಅವಿರೋಧ ಆಯ್ಕೆ ಘೋಷಿಸಲಾಯಿತು. ಪುರಸಭೆಯ 23 ವಾರ್ಡ್‌ಗಳಿಗೆ ನಾಮಪತ್ರ ಸಲ್ಲಿಸಿದ್ದ 86 ಜನರಲ್ಲಿ ಎರಡು ನಾಮಪತ್ರ ತಿರಸ್ಕೃತಗೊಂಡಿದ್ದರಿಂದ 84 ಜನರು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ. ಬಿಜೆಪಿಯಿಂದ 9, ಕಾಂಗ್ರೆಸ್‌ನಿಂದ 10, ಜೆಡಿಎಸ್ ಪಕ್ಷದಿಂದ ಮೂವರು ಕಣದಲ್ಲಿದ್ದು ವಿವರ ಇಂತಿದೆ.
ವಾರ್ಡ್ ನಂ.1ಕ್ಕೆ ಹನುಮಂತ್ರಾಯ ಮೇಲಿನಮನಿ (ಕಾಂಗ್ರೆಸ್), ಬಸವರಾಜ ದೇವದುರ್ಗ (ಪಕ್ಷೇತರ), ರಮೇಶ ಗೌಡಗೇರಿ (ಪಕ್ಷೇತರ), ಸಂಗಪ್ಪ ಇಂಗಳಗಿ(ಪಕ್ಷೇತರ), ಅಶೋಕ ಅಸ್ಕಿ (ಪಕ್ಷೇತರ), ವಾರ್ಡ್ ನಂ. 2ಕ್ಕೆ ಸೈದಾಬಿ ಚಿತ್ತರಗಿ (ಜೆಡಿಎಸ್), ಮಹಿಬೂಬಿ ಪಟೇಲ (ಕಾಂಗ್ರೆಸ್), ಶ್ರೀದೇವಿ ಮೂಕಿಹಾಳ (ಪಕ್ಷೇತರ), ಅಮರವ್ವ ಬಾಕಲಿ (ಬಿಜೆಪಿ), ದಾಲಬಿ ಮಾಲಗತ್ತಿ (ಪಕ್ಷೇತರ), ಹಲಿಮಾ ಮುಲ್ಲಾ (ಪಕ್ಷೇತರ), ವಾರ್ಡ್ ನಂ.3ಕ್ಕೆ ಪ್ರಭುಗೌಡ ಮದರಕಲ್ಲ (ಪಕ್ಷೇತರ), ವಾಸುದೇವ ಹೆಬಸೂರ (ಬಿಜೆಪಿ), ವಾರ್ಡ್ ನಂ. 4ಕ್ಕೆ ಲಕ್ಷ್ಮೀಬಾಯಿ ಪರಂಪುರ (ಪಕ್ಷೇತರ), ನಾಗಮ್ಮ ಬಂದಾಳ (ಪಕ್ಷೇತರ), ಕಸ್ತೂರಿಬಾಯಿ ಬಿರಾದಾರ (ಕಾಂಗ್ರೆಸ್), ವಾರ್ಡ್ ನಂ. 5ಕ್ಕೆ ಸೈದುಸಾಬ ನಮಾಜಕಟ್ಟಿ (ಪಕ್ಷೇತರ), ಪರಶುರಾಮ ತಂಗಡಗಿ (ಪಕ್ಷೇತರ), ಮಹ್ಮದಶಫೀಕ್ ಮುರಾಳ (ಪಕ್ಷೇತರ), ಅಕ್ಬರ್ ಮಕಾಂದಾರ (ಕಾಂಗ್ರೆಸ್), ಮಹ್ಮದಾರೀಪ ಹೊನ್ನುಟಗಿ (ಪಕ್ಷೇತರ), ವಾರ್ಡ್ ನಂ. 6ಕ್ಕೆ ಮಮತಾಜ ಪಟ್ಟೇವಾಲೆ (ಪಕ್ಷೇತರ), ರಾಜಬಿ ಶಹಾಪುರ (ಪಕ್ಷೇತರ), ಇಸ್ಮಾಲಬಿ ಮಕಾಂದಾರ (ಪಕ್ಷೇತರ), ಹಾಜರಾಬಿ ಅರಬ (ಕಾಂಗ್ರೆಸ್), ಸರಸ್ವತಿ ಕಲಾಲ್ (ಪಕ್ಷೇತರ), ವಾರ್ಡ್ ನಂ.7ಕ್ಕೆ ರಾಘವೇಂದ್ರ ಬಿಜಾಪುರ (ಪಕ್ಷೇತರ), ಮುತ್ತಪ್ಪ ಚಮಲಾಪುರ (ಬಿಜೆಪಿ), ಪರಶುರಾಮ ಕಟ್ಟಿಮನಿ (ಕಾಂಗ್ರೆಸ್), ಗೋಪಾಲ ವಿಜಾಪುರ (ಪಕ್ಷೇತರ), ವಾರ್ಡ್ ನಂ.8ಕ್ಕೆ ಬೋರಮ್ಮ ಕುಂಬಾರ (ಪಕ್ಷೇತರ), ಶಾರದಾ ಕಸಬೇಗೌಡರ (ಪಕ್ಷೇತರ), ಶಾಂತಾಬಾಯಿ ಹೊಟ್ಟಿ (ಪಕ್ಷೇತರ), ವಾರ್ಡ್ ನಂ. 10ಕ್ಕೆ ಮಜಾನಬಿ ಚನ್ನೂರ (ಪಕ್ಷೇತರ), ಸಾಹೀದಾಬೇಗಂ ಬೇಪಾರಿ (ಪಕ್ಷೇತರ), ರಮೀಜಾ ಬೇಪಾರಿ (ಕಾಂಗ್ರೆಸ್), ವಾರ್ಡ್ ನಂ.11 ಕ್ಕೆ ಮಹ್ಮದಿಬ್ರಾಹಿಂ ಮನ್ಸೂರ (ಪಕ್ಷೇತರ), ಮುಸ್ತಫಾ ಚೌದ್ರಿ(ಪಕ್ಷೇತರ), ಅಬ್ದುಲರಜಾಕ ಮನಗೂಳಿ (ಪಕ್ಷೇತರ), ವಾರ್ಡ್ ನಂ.12ಕ್ಕೆ ಕುಸುಮಾಬಾಯಿ ವಿಜಾಪುರ (ಪಕ್ಷೇತರ), ಮಹಾಬೂಬಿ ಮನಗೂಳಿ (ಪಕ್ಷೇತರ), ಬಸಮ್ಮ ಹೊಟಗಾರ (ಪಕ್ಷೇತರ), ಅಶ್ವಿನಿ ಮಹೇಂದ್ರಕರ(ಕಾಂಗ್ರೇಸ್), ವಾರ್ಡ್ ನಂ. 13ಕ್ಕೆ ರಕ್ಷೀತಾ ಕೊಕಟನೂರ (ಬಿಜೆಪಿ), ಗೀತಾ ನಾಡಗೇರಿ (ಪಕ್ಷೇತರ), ಮಹಬುಬಿ ಲಾಹೋರಿ (ಪಕ್ಷೇತರ), ನಿರ್ಮಲಾ ಕೊಕಟನೂರ (ಪಕ್ಷೇತರ), ವಾರ್ಡ್ ನಂ.14ಕ್ಕೆ ಗೌರಮ್ಮ ಕುಂಬಾರ (ಪಕ್ಷೇತರ), ಮಹಾದೇವಿ ಕುಂಬಾರ(ಪಕ್ಷೇತರ), ಮಹಾಲಕ್ಷ್ಮೀ ದೊಡಮನಿ (ಪಕ್ಷೇತರ), ನಿರ್ಮಲಾ ದುಮಗುಂಡಿ (ಬಿಜೆಪಿ), ವಾರ್ಡ್ ನಂ.15ಕ್ಕೆ ವಿಜಯಸಿಂಗ್ ಹಜೇರಿ (ಪಕ್ಷೇತರ), ನಿಂಗಪ್ಪ ಕುಂಟೋಜಿ (ಬಿಜೆಪಿ), ಆನಂದ ಕೊಂಗಂಡಿ (ಪಕ್ಷೇತರ), ವಾರ್ಡ್ ನಂ.16ಕ್ಕೆ ನಾರಾಯಣಸಿಂಗ್ ಮನಗೂಳಿ (ಪಕ್ಷೇತರ), ಜಯಸಿಂಗ್ ಮೂಲಿಮನಿ (ಪಕ್ಷೇತರ), ಶಬ್ಬೀರಹ್ಮದ ದಖನಿ (ಪಕ್ಷೇತರ), ವಾರ್ಡ್ ನಂ.17ಕ್ಕೆ ಶರಣಗೌಡ ಪಾಟೀಲ (ಪಕ್ಷೇತರ), ಫಿರೋಜ್ ತಾಳಿಕೋಟಿ (ಪಕ್ಷೇತರ), ಸಿದ್ದನಾಥ ಸಾಳುಂಕೆ(ಬಿಜೆಪಿ), ಅಣ್ಣಪ್ಪ ಜಗತಾಪ (ಪಕ್ಷೇತರ), ಬಸನಗೌಡ ಪಾಟೀಲ (ಪಕ್ಷೇತರ), ವಾರ್ಡ್ ನಂ.18ಕ್ಕೆ ರಮೇಶ ಚವ್ಹಾಣ (ಪಕ್ಷೇತರ), ಲಾಳೇಮಶಾಕ ಚೋರಗಸ್ತಿ(ಪಕ್ಷೇತರ), ಯಾಸೀನ್ ಮಮದಾಪುರ (ಕಾಂಗ್ರೆಸ್), ರಮೇಶ ಮೂಕಿಹಾಳ (ಪಕ್ಷೇತರ), ಮೋದಿನಸಾಬ ನಗಾರ್ಚಿ (ಪಕ್ಷೇತರ), ಭೀಮಣ್ಣ ತಳವಾರ (ಪಕ್ಷೇತರ), ವಾರ್ಡ್ ನಂ.19ಕ್ಕೆ ಅಕ್ಕಮಹಾದೇವಿ ಕಟ್ಟಿಮನಿ (ಕಾಂಗ್ರೆಸ್), ಗಾಯಿತ್ರಿ ಕಟ್ಟಿಮನಿ (ಪಕ್ಷೇತರ), ವಾರ್ಡ್ ನಂ.21ಕ್ಕೆ ದುಂಡಪ್ಪಗೌಡ ಪಾಟೀಲ(ಪಕ್ಷೇತರ), ಪ್ರಕಾಶ ಮೋಹಿತೆ (ಪಕ್ಷೇತರ), ಶರಣಪ್ಪ ಗೊಟಗುಣಕಿ (ಬಿಜೆಪಿ), ವಾರ್ಡ್ ನಂ.22ಕ್ಕೆ ಸಣ್ಣಪ್ಪ ಹಗರಗುಂಡ (ಬಿಜೆಪಿ), ಬಸವರಾಜ ಸಜ್ಜನ (ಪಕ್ಷೇತರ), ಮೋಹನ ಬಡಿಗೇರ (ಪಕ್ಷೇತರ), ವಾರ್ಡ್ ನಂ. 23ಕ್ಕೆ ಫಾತಿಮಾ ಖಾಜಾಬಸರಿ (ಪಕ್ಷೇತರ), ಹುಸೇನಬಿ ಮುಲ್ಲಾ (ಪಕ್ಷೇತರ), ಸುನಂದಾ ಕಾಟಾಪುರ(ಪಕ್ಷೇತರ), ಪಾರ್ವತಿ ಕೂಚಬಾಳ (ಪಕ್ಷೇತರ), ಅಶ್ವಿನಿ ಪಾಟೀಲ (ಪಕ್ಷೇತರ), ಲಕ್ಷ್ಮೀಬಾಯಿ ಸಜ್ಜನ (ಪಕ್ಷೇತರ).
ಇಬ್ಬರಿಗೆ ಬಿಜೆಪಿ ಬಿ ಫಾರಂ
ವಾರ್ಡ್ ನಂ. 22ಕ್ಕೆ ಭಾರತೀಯ ಜನತಾ ಪಕ್ಷದಿಂದ ಇಬ್ಬರಿಗೆ ಬಿ ಫಾರಂ ನೀಡಿದ್ದು ಪರಿಶೀಲನೆ ವೇಳೆ ದೃಢಪಟ್ಟಿದೆ. ವಾರ್ಡ್ ನಂ. 22ಕ್ಕೆ ಸಣ್ಣಪ್ಪ ಹಗರಗುಂಡ ಮತ್ತು ಮೋಹನ ಬಡಿಗೇರ ಬಿಜೆಪಿ ಬಿ ಫಾರಂ ಮೇಲೆ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಸಣ್ಣಪ್ಪ ಹಗರಗುಂಡ ಮೊದಲು ನಾಮಪತ್ರ ಸಲ್ಲಿಸಿದ್ದರಿಂದ ಅದನ್ನು ಸ್ವೀಕರಿಸಿ ಮೋಹನ ಬಡಿಗೇರ ಅವರು ಸಲ್ಲಿಸಿದ ಬಿ ಫಾರಂನ ನಾಮಪತ್ರ ತಿರಸ್ಕೃತಗೊಳಿಸಲಾಗಿದೆ. ಆದರೆ ಮೋಹನ ಬಡಿಗೇರ ಅವರು ಪಕ್ಷೇತರವಾಗಿಯೂ ನಾಮಪತ್ರ ಸಲ್ಲಿಸಿದ್ದರಿಂದ ಅವರು ಕಣದಲ್ಲಿ ಉಳಿದಿದ್ದಾರೆ. ಮೇ18 ಮತ್ತು 19 ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದೆ ಎಂದು ಚುನಾವಣಾಧಿಕಾರಿ ನಿಂಗಪ್ಪ ಬಿರಾದಾರ ತಿಳಿಸಿದ್ದಾರೆ.