Advertisement
ತಾಳಿಕೋಟೆ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಒಟ್ಟು 24,757 ಮತದಾರರರಿದ್ದು ಇದರಲ್ಲಿ 12,340 ಪುರುಷರು, 12,108 ಮಹಿಳೆಯರು ಸೇರಿದಂತೆ ಇತರರು ಇಬ್ಬರಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಸುಮಾರು 500ಕ್ಕೂ ಅಧಿಕ ಮತಗಳನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಮುಂದಾಗಿ ತನ್ನ ಪ್ರಾಬಲ್ಯ ಮೆರೆದಿದ್ದು ಸ್ಮರಿಸಬಹುದು.
Related Articles
Advertisement
ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ತಮ್ಮ ಕ್ಷೇತ್ರ ಬದಲಿಸಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಲಗ್ಗೆಯಿಟ್ಟು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಗೊಂಡಿದ್ದರೂ ಇಲ್ಲಿವರೆಗೂ ಸೋಲಿನ ರುಚಿ ಕಂಡಿಲ್ಲ. ಸದಾ ಯುವ ಸಮೂಹದೊಂದಿಗೆ ತೊಡಗಿಕೊಳ್ಳುವುದರೊಂದಿಗೆ ಸದಾ ಉತ್ಸುಕತೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತಮ್ಮ ಪ್ರಾಬಲ್ಯ ತೋರಿಸುತ್ತ ಸಾಗಿದ್ದ ಮಾಜಿ ಶಾಸಕ ಸಿ.ಎಸ್. ನಾಡಗೌಡ ಜೊತೆ ಪ್ರಬಲ ಪೈಪೋಟಿ ನಡೆಸಲಿದ್ದಾರೆ.
ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಕೂಡಾ ಪ್ರತಿ ವಾರ್ಡ್‌ಗೆ 3 ಜನ ಪ್ರಬಲ ಸ್ಪರ್ಧಾ ಆಕಾಂಕ್ಷಿಗಳನ್ನು ತಯಾರಿಸುತ್ತ ಸಾಗಿದ್ದಾರೆ. ಕೊನೆ ಘಳಿಗೆಯಲ್ಲಿ ಇಬ್ಬರನ್ನು ಹಿಂದಕ್ಕೆ ಸರಿಸಿ ಚುನಾವಣೆ ಎದುರಿಸುವ ಮತ್ತು ತಮ್ಮ ಶಕ್ತಿ ಪ್ರದರ್ಶನ ತೋರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಸ್ಪರ್ಧಾ ಆಕಾಂಕ್ಷಿಗಳು ಸ್ಪರ್ಧೆಕ್ಕಿಂತ ಮುಂಚೆಯೇ ಜನತೆ ಆಶೀರ್ವಾದ ಬಯಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತ ಯುವ ಸಮೂಹದ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಮಾ. 9ರಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿ ಮಾ. 16ರಂದು ಹಿಂತೆಗೆದುಕೊಳ್ಳುವ ಹೊತ್ತಿಗೆ ಯಾರ್ಯಾರು ಸ್ಪರ್ಧಾ ಕಣದಲ್ಲಿ ಉಳಿದುಕೊಳ್ಳುತ್ತಾರೋ ಯಾರು ಪಕ್ಷ ಮತ್ತು ಪಕ್ಷೇತರಾಗಿ ಸ್ಪರ್ಧಿಸುತ್ತಾರೋ ಎಂಬ ಚಿತ್ರಣ ಹೊರಬಿಳಲಿದೆ.
ತಾಳಿಕೋಟೆ ಪುರಸಭೆ ವಾರ್ಡ್‌ವಾರು ಮೀಸಲಾತಿ ವಿವರವಾರ್ಡ್ ನಂ. 1 ಪರಿಶಿಷ್ಠ ಪಂಗಡ, 2. ಹಿಂದುಳಿದ ವರ್ಗ (ಎ) ಮಹಿಳೆ, 3. ಸಾಮಾನ್ಯ, 4. ಹಿಂದುಳಿದ ವರ್ಗ (ಬಿ) ಮಹಿಳೆ, 5. ಸಾಮಾನ್ಯ, 6. ಹಿಂದುಳಿದ ವರ್ಗ (ಎ) ಮಹಿಳೆ, 7. ಪರಿಶಿಷ್ಠ ಜಾತಿ, 8. ಸಾಮಾನ್ಯ ಮಹಿಳೆ, 9. ಹಿಂದುಳಿದ ವರ್ಗ (ಬಿ), 10. ಸಾಮಾನ್ಯ ಮಹಿಳೆ, 11. ಸಾಮಾನ್ಯ, 12. ಸಾಮಾನ್ಯ ಮಹಿಳೆ, 13. ಸಾಮಾನ್ಯ ಮಹಿಳೆ, 14. ಹಿಂದುಳಿದ ವರ್ಗ (ಎ) ಮಹಿಳೆ, 15. ಸಾಮಾನ್ಯ, 16. ಹಿಂದುಳಿದ ವರ್ಗ (ಎ), 17. ಸಾಮಾನ್ಯ, 18. ಹಿಂದುಳಿದ ವರ್ಗ (ಎ), 19. ಪರಿಶಿಷ್ಠ ಜಾತಿ ಮಹಿಳೆ, 20. ಸಾಮಾನ್ಯ ಮಹಿಳೆ, 21. ಸಾಮಾನ್ಯ, 22. ಹಿಂದುಳಿದ ವರ್ಗ (ಎ), 23. ಸಾಮಾನ್ಯ ಮಹಿಳೆ. ತಾಳಿಕೋಟೆ ಪುರಸಭೆ 23 ವಾರ್ಡ್‌ಗಳಿಗೆ 28 ಮತಗಟ್ಟೆ ನಿರ್ಮಿಸಲಾಗುತ್ತದೆ. ಚುನಾವಣೆಯಲ್ಲಿ ಮೂವರು ಸೆಕ್ಟರ್ ಅಧಿಕಾರಿ, ಇಬ್ಬರು ತರಬೇತಿ ಅಧಿಕಾರಿಗಳ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳ ಅನುಮತಿಗೆ ಕಳುಹಿಸಿದ್ದೇನೆ. ಮತ ಎಣಿಕೆಯನ್ನು ಪಟ್ಟಣದ ಎಸ್.ಕೆ. ಕಾಲೇಜ್‌ನಲ್ಲಿ ನಿರ್ಮಿಸಲು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.
•ನಿಂಗಪ್ಪ ಬಿರಾದಾರ, ತಹಶೀಲ್ದಾರ್ ಜಿ.ಟಿ.ಘೋರ್ಪಡೆ