Advertisement

ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಿ

07:36 PM Sep 05, 2019 | Team Udayavani |

ತಾಳಿಕೋಟೆ: ಮಾಜಿ ಸಂಸದ ದಿ| ಎಸ್‌.ಎಂ. ಗುರಡ್ಡಿಯವರು ತಾಳಿಕೋಟೆ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ದಾಪುಗಾಲು ಹಾಕಿ ಬಡವರ ಮಕ್ಕಳಿಗೆ ವಿದ್ಯಾಬುದ್ಧಿ ದಯ ಪಾಲಿಸಬೇಕೆಂಬ ಉದ್ದೇಶ ಹೊತ್ತಿದ್ದ ಅವರ ಕನಸನ್ನು ಇಂದು ಅವರ ಪುತ್ರ ನ್ಯಾಯವಾದಿ ಶಾಂತೇಶ ಗುರಡ್ಡಿ ನನಸು ಮಾಡಿದ್ದಾರೆಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.

Advertisement

ಜ್ಯೋತಿ, ಶಾಂತೇಶ ಗುರಡ್ಡಿ ಫೌಂಡೇಶನ್‌ ನೇತೃತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ವಿಜ್ಞಾನ ಪಪೂ ಕಾಲೇಜ್‌ ತಾಳಿಕೋಟೆಯಲ್ಲಿ ನಡೆದ ತಾಲೂಕು ಮಟ್ಟದ ಪಪೂ ಕಾಲೇಜುಗಳ ಪ್ರಸಕ್ತ ಸಾಲಿನ ಕ್ರೀಡಾಕೂಟ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಡ ವಿದ್ಯಾರ್ಥಿಗಳಿಗೆ ಕಡಿಮೆ ಫೀ ಸ್ವೀಕರಿಸಿ ಅವರಿಗೆ ಶಿಕ್ಷಣದಲ್ಲಿ ಮುಂದುವರಿಯಲು ಇಲ್ಲಿ ಅನುವು ಮಾಡಿಕೊಡಲಾಗುತ್ತಿದೆ. ಇಂತಹ ಮಹತ್ವದ ಸಂಸ್ಥೆಗೆ ನಾನು ಸಹಾಯಹಸ್ತ ಕಲ್ಪಿಸಲು ಮುಂದಾಗುತ್ತೇನೆಂದರು.

ಕ್ರೀಡೆಯಲ್ಲಿ ಜಾತಿ ಎಂಬುದಿಲ್ಲ, ಏಕತೆ ಎಂಬ ಭಾವನೆ ಇರುತ್ತದೆ. ಕ್ರೀಡಾ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕೆಂದ ಅವರು, ವಿದ್ಯಾರ್ಥಿಗಳಲ್ಲಿ ಸರಳತೆ, ಹೃದಯವಂತಿಕೆ ಇರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರದ ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜೆ.ಎಸ್‌. ಪೂಜೇರಿ ಮಾತನಾಡಿ, ಶತ ಶತಮಾನದ ಉನ್ನತಿಗಾಗಿ ನಾವು ನಮ್ಮ ದೇಶದಲ್ಲಿ ಯುವಕರನ್ನು ಪೋಷಿಸಬೇಕಾಗಿದೆ. ನೆರೆ ರಾಜ್ಯಗಳಲ್ಲಿ ದೈಹಿಕ ನಿರ್ದೇಶಕರ ನೇಮಕಾತಿ ಇದೆ. ಆದರೆ ಇದು ನಮ್ಮಲ್ಲಿ ಇಲ್ಲ ಎಂದರು.

Advertisement

ವಿಜ್ಞಾನ ಪಪೂ ಕಾಲೇಜಿನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಮಾತನಾಡಿದರು. ಬಸವಪ್ರಭು ದೇವರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಸೋಮನಗೌಡ ಪಾಟೀಲ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾಜ್ಯೋತಿಯನ್ನು ತಹಶೀಲ್ದಾರ್‌ ಅನಿಲಕುಮಾರ ಢವಳಗಿ ಬೆಳಗಿಸಿದರು. ಹಿರಿಯ ದೈಹಿಕ ಶಿಕ್ಷಕ ಆರ್‌.ಎಲ್. ಕೊಪ್ಪದ ಪ್ರಮಾಣ ವಚನ ಬೋಧಿಸಿದರು.

ಬಿಇಒ ಎಸ್‌.ಡಿ. ಗಾಂಜಿ, ಜೆಎಸ್‌ಜಿ ಪಪೂ ಕಾಲೇಜಿನ ನಿರ್ದೇಶಕರಾದ ಬಸನಗೌಡ ಪಾಟೀಲ, ಗಿರಿರಾಜ್‌ ಕನಕಗಿರಿ, ಅಧಿಕಾರಿ ಪ್ರಕಾಶ ಗೊಂಗಡಿ, ಪ್ರಶಾಂತ ಹಾವರಗಿ, ನಿಂಗನಗೌಡ ಪಾಟೀಲ (ಗ.ಸೋಮನಾಳ) ಇದ್ದರು.

ಸುಷ್ಮಾ ಬಡಿಗೇರ ಪ್ರಾರ್ಥಿಸಿದರು. ತಾಲೂಕು ಕ್ರೀಡಾಕೂಟ ಸಮಿತಿ ಅಧ್ಯಕ್ಷ ಗಿರೀಶ ಪಿ.ಆರ್‌. ಸ್ವಾಗತಿಸಿದರು. ಶಿಕ್ಷಕರಾದ ಅಶೋಕ ಹಂಚಲಿ, ಸುಮಂಗಲಾ ಕೊಳೂರ ನಿರೂಪಿಸಿದರು. ಶಿಕ್ಷಕ ಮಹೇಶ ಹಡಪದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next