Advertisement

ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ

03:57 PM Jun 04, 2020 | Naveen |

ತಾಳಿಕೋಟೆ: ಕೋವಿಡ್ ತಡೆಗಟ್ಟಲು ಆಶಾ ಕಾರ್ಯಕರ್ತೆಯರು ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆ ಪಡುವಂತಹದ್ದಾಗಿದೆ ಎಂದು ಮುಸ್ಲಿಂ ಬ್ಯಾಂಕ್‌ ನಿರ್ದೇಶಕ ಇಬ್ರಾಹಿಂ ಮನ್ಸೂರ ಹೇಳಿದರು.

Advertisement

ಆಶಾ ಕಾರ್ಯಕರ್ತೆಯರಿಗೆ ಮುಸ್ಲಿಂ ಕೋ ಆಪ್‌ ಬ್ಯಾಂಕ್‌ ವತಿಯಿಂದ 3 ಸಾವಿರ ರೂ. ಪ್ರೋತ್ಸಾಹ ಧನ ಚೆಕ್‌ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೋವಿಡ್ ತಡೆಗಟ್ಟುವ ಸಲುವಾಗಿ ಸರ್ಕಾರ ಲಾಕ್‌ಡೌನ್‌ ವಿಧಿಸಿದಾಗ ದೇಶದ ಎಲ್ಲ ಜನರು ಸಹಕರಿಸಿದ್ದಾರೆ. ಇಂಥ ವೇಳೆ ಆಶಾ ಕಾರ್ಯಕರ್ತೆಯರು ಜೀವದ ಹಂಗು ಲೆಕ್ಕಿಸದೇ ಕಾರ್ಯ ನಿರ್ವಹಿಸಿದ್ದು ಮಾದರಿಯಾಗಿದೆ ಎಂದರು.

ಈ ವೇಳೆ ಐವರು ಆಶಾ ಕಾರ್ಯಕರ್ತೆಯರಿಗೆ ಬ್ಯಾಂಕ್‌ ನಿರ್ದೇಶಕಿ ಅಲ್ಲಾಂಬಿ ಬೇಪಾರಿ ಸನ್ಮಾನಿಸಿದರು. ಬ್ಯಾಂಕ್‌ ಉಪಾಧ್ಯಕ್ಷ ಫಯಾಜ್‌ ಉತ್ನಾಳ, ನಿರ್ದೇಶಕರಾದ ಅಬ್ದುಲ್‌ಸತ್ತಾರ ಅವಟಿ, ಮಹಿಬೂಬ ಕೇಂಭಾವಿ, ಸಿಕಂದರ ಡೋಣಿ, ಆದಮ್‌ ಅತ್ತಾರ, ತನ್ವೀರ್‌ ಮನಗೂಳಿ, ಮಹಿಬೂಬ ಲಾಹೋರಿ, ವ್ಯವಸ್ಥಾಪಕ ಎನ್‌.ಎ. ಖಾಜಿ, ಎಂ.ಎಸ್‌. ಜಕಾತಿ, ಐ.ಆರ್‌. ಅರಬೋಳ, ಎಲ್‌.ಕೆ. ನಾಗೂರ, ಎ.ಎಚ್‌. ಢಾಲಾಯತ್‌ ಇದ್ದರು. ಸೈಯದ್‌ ಶಕೀಲಹ್ಮದ್‌ ಖಾಜಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next