Advertisement

ಮೂವರುಕುರಿಗಾಹಿ, 300 ಕುರಿ ರಕ್ಷಣೆ

12:17 PM Nov 06, 2019 | Team Udayavani |

ತಾಳಿಕೋಟೆ: ಡೋಣಿ ನದಿ  ಪ್ರವಾಹದಿಂದ ಕಾಮನಕಲ್ಲ ಪ್ರದೇಶದಲ್ಲಿ ಸಿಲುಕಿದ್ದ ಮೂವರು ಕುರಿಗಾಹಿಗಳು, 300 ಕುರಿಗಳು, 4 ನಾಯಿಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸೋಮವಾರ ಮಧ್ಯಾಹ್ನದವರೆಗೂ ದೋಣಿ ನದಿ ದಡದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿಗಳು ಸಂಜೆ 5 ಗಂಟೆ ಸುಮಾರಿಗೆ ನದಿ ನಡುಗಡ್ಡೆಯ ಎತ್ತರ ಪ್ರದೇಶ ಕಾಮನಕಲ್ಲ ಪ್ರದೇಶದಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಏಕಾಏಕಿ ನದಿಯಲ್ಲಿ ಪ್ರವಾಹ ಬಂದು ಕಾಮನಕಲ್ಲ ಪ್ರದೇಶ ನೀರು ಸುತ್ತುವರಿದಿದ್ದರಿಂದ ಕುರಿಗಾಹಿಗಳು ಸಿಲುಕಿದ್ದರು.

ಮಂಗಳವಾರ ಬೆಳಗ್ಗೆ 6 ಗಂಟೆ ಹೊತ್ತಿಗೆ ನದಿಯಲ್ಲಿ ನೀರು ಇಳಿಮುಖ ಗೊಂಡಿದ್ದರಿಂದ 9 ಗಂಟೆವರೆಗೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ ಈಜುಗಾರರ ಸಹಕಾರ-ಬೋಟ್‌ಗಳ ಸಹಾಯದೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ್ದ ಮಿಣಜಗಿ ಗ್ರಾಮದ ಕುರಿಗಾಹಿಗಳಾದ ರಮೇಶ ಪೂಜಾರಿ, ಮಾನಪ್ಪ ರಾಠೊಡ, ಹನುಮಂತ ರಾಠೊಡ ಎಂಬುವರನ್ನು ಜಿಲ್ಲಾ ವಿಪತ್ತು ನಿರ್ವಹಣಾ ಸಿಬ್ಬಂದಿ ಮಂಗಳವಾರ ಬೆಳಗಿನ ಜಾವ 2:30ರ ವೇಳೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಹಶೀಲ್ದಾರ್‌ ಅನಿಲಕುಮಾರ ಢವಳಗಿ, ಪಿಎಸೈ ವಸಂತ ಬಂಡಗಾರ, ಅಗ್ನಿ ಶಾಮಕದಳ ಅಧಿಕಾರಿಗಳು ರಾತ್ರಿ ಹೊತ್ತು ವಿಪರೀತ ಮಳೆಯ ಮಧ್ಯೆಯೇ ಕಾರ್ಯಾಚರಣೆ ನಡೆಸಿದ್ದಾರೆ.ಜಿಲ್ಲಾ ವಿಪತ್ತು ನಿರ್ವಹಣಾ ತಂಡ ವಿಜಯಪುರದ ಬೇಗಂ ತಲಾಬ್‌ ನಲ್ಲಿರುವ ಬೋಟ್‌ಗಳೊಂದಿಗೆ ತೆರಳಿ ಕುರಿಗಾಹಿಗಳು, ಕುರಿಗಳು ಹಾಗೂ ನಾಯಿಗಳನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next