Advertisement

Kollywood: ರಿಲೀಸ್‌ಗೂ ಮುನ್ನ ಈ ವಿಚಾರದಲ್ಲಿ ʼಜವಾನ್‌ʼ ಸಿನಿಮಾದ ದಾಖಲೆ ಮುರಿದ ʼಲಿಯೋʼ

06:50 PM Oct 18, 2023 | Team Udayavani |

ಚೆನ್ನೈ: ದಳಪತಿ ವಿಜಯ್‌ ʼಲಿಯೋʼ ರಿಲೀಸ್‌ ಇನ್ನು ಕ್ಷಣಗಣನೆ ಬಾಕಿ ಉಳಿದಿದೆ. ಫಸ್ಟ್‌ ಡೇ ಫಸ್ಟ್‌ ಶೋಗಾಗಿ ಜನ ಥಿಯೇಟರ್‌ ಮುಂದೆ ನಿಲ್ಲಲು ಕಾಯುತ್ತಿದ್ದಾರೆ.

Advertisement

ಹಾಡು, ಟ್ರೇಲರ್‌, ಪೋಸ್ಟರ್‌ , ಪಾತ್ರವರ್ಗ ಹೀಗೆ ಸಟ್ಟೇರಿದ ದಿನದಿಂದ ರಿಲೀಸ್‌ ಆಗುವ ದಿನದವರೆಗೂ ʼಲಿಯೋʼ ಸದ್ದು ಮಾಡುತ್ತಿದೆ. ಅಡ್ವಾನ್ಸ್‌ ಬುಕಿಂಗ್‌ ವಿಚಾರದಲ್ಲೂ ಲೋಕೇಶ್‌ ಅವರ ಸಿನಿಮಾ ಗಮನ ಸೆಳೆಯುತ್ತಿದೆ.

ʼಲಿಯೋʼ ಸಿನಿಮಾದ ಅಡ್ವಾನ್ಸ್‌ ಟಿಕೆಟ್‌ ಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ದೇಶ – ವಿದೇಶದಲ್ಲಿ ಟಿಕೆಟ್‌ ಬುಕ್  ಆಗಿದೆ. ಕಾಲಿವುಡ್‌, ಟಾಲಿವುಡ್‌ ಸೇರಿದಂತೆ ಹಿಂದಿ ವರ್ಷನ್‌ ನಲ್ಲಿ ತೆರೆಗೆ ಬರುತ್ತಿರುವ ʼಲಿಯೋʼ ಸಿನಿಮಾ ಅಡ್ವಾನ್ಸ್‌ ಬುಕಿಂಗ್‌ ನಲ್ಲಿ ಹೊಸ ದಾಖಲೆ ಬರೆದಿದೆ.

ಸ್ಯಾಕ್ನಿಲ್ಕ್ ವರದಿಯ ಪ್ರಕಾರ ʼಲಿಯೋʼ ಅಡ್ವಾನ್ಸ್‌ ಬುಕಿಂಗ್‌ ವಿಚಾರದಲ್ಲಿ ಶಾರುಖ್‌ ಖಾನ್‌ ಅವರ ʼಜವಾನ್‌ʼ ಸಿನಿಮಾವನ್ನೇ ಮೀರಿಸಿದೆ.

ಶಾರುಖ್‌ ಖಾನ್‌ ಅವರ ʼಜವಾನ್‌ʼ 15.75 ಲಕ್ಷ ಟಿಕೆಟ್‌ ಅಡ್ವಾನ್ಸ್‌ ಆಗಿ ಬುಕ್‌ ಆಗಿತ್ತು. ʼಲಿಯೋʼ ಸಿನಿಮಾದ ಅಡ್ವಾನ್ಸ್‌ ಟಿಕೆಟ್‌ ಇದುವರೆಗೆ 16 ಲಕ್ಷ ಟಿಕೆಟ್‌ ಬುಕ್‌ ಆಗಿದೆ. ಈ ಸಂಖ್ಯೆ 20 ಲಕ್ಷ ದಾಟುವ ಸಾಧ್ಯತೆಯಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.

Advertisement

ʼಲಿಯೋʼ ತಮಿಳು ಆವೃತ್ತಿಯ ಅಡ್ವಾನ್ಸ್ ಬುಕ್ಕಿಂಗ್ 13.75 ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ.ಹಿಂದಿ ಆವೃತ್ತಿಗೆ ಸಂಬಂಧಿಸಿದಂತೆ 20,000 ಟಿಕೆಟ್‌ಗಳು ಮಾರಾಟವಾಗಿವೆ. ಮತ್ತೊಂದೆಡೆ, ತೆಲುಗು ಆವೃತ್ತಿಯ 2.10 ಲಕ್ಷ ಟಿಕೆಟ್‌ಳು ಅಡ್ವಾನ್ಸ್‌ ಆಗಿ ಮಾರಾಟವಾಗಿದೆ.

ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಮಿಸ್ಕಿನ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮತ್ತು ಸ್ಯಾಂಡಿ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next