Advertisement

ತೀರ್ಪು ಹೊರಬಿದ್ದ ಅನಂತರ ತಲಾಖ್‌ ಕೊಟ್ಟ ಭೂಪ!

06:45 AM Aug 25, 2017 | Team Udayavani |

ಮೀರತ್‌:  ತ್ರಿವಳಿ ತಲಾಕ್‌ ಸಂವಿಧಾನ ವಿರೋಧಿ ಎಂದು ದೇಶದ ಉನ್ನತ ಕೋರ್ಟ್‌ ಮಹತ್ವದ ತೀರ್ಪುಕೊಟ್ಟ ಕೆಲವೇ ಗಂಟೆಗಳಲ್ಲಿ ಉತ್ತರಪ್ರದೇಶದಲ್ಲಿ ಗರ್ಭಿಣಿಯೊಬ್ಬಳಿಗೆ ಆಕೆಯ ಪತಿ ತಲಾಖ್‌ ನೀಡಿದ್ದಾನೆ . 

Advertisement

ಈ ಕುರಿತು ಮಹಿಳೆ ದೂರು ನೀಡಿದ್ದು, ಆತನ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ವರದಕ್ಷಿಣೆಗಾಗಿ ಕಾಡಿಸಿ, ಕಿರುಕುಳ ಕೊಡುತ್ತಿದ್ದಾರೆ. ತನ್ನ ಮೇಲೆ ಪತಿ ನಡೆಸಿದ ಹಲ್ಲೆಯಿಂದಾಗಿ ಗರ್ಭಪಾತವೂ ಆಗಿತ್ತು ಎಂದೂ ಆಕೆ ಆರೋಪಿಸಿದ್ದಾಳೆ. ದಿಢೀರ್‌ ತ್ರಿವಳಿ ತಲಾಖ್‌ ಅನಾಗರಿಕ ಪದ್ಧತಿ ಎಂದು ಮಂಗಳವಾರವಷ್ಟೆ ಸು. ಕೋ.ತೀರ್ಪು ನೀಡಿತ್ತು. ತೀರ್ಪಿನ ಅನಂತರ ದಾಖಲಾದ ಮೊದಲ ಪ್ರಕರಣ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next