Advertisement

Thalaivar 170 ಸಿನಿಮಾದ ಟೈಟಲ್‌ ಔಟ್: ಲಾಠಿ ಹಿಡಿದು ಹೆಜ್ಜೆ ಹಾಕಿದ ರಜಿನಿಕಾಂತ್

05:54 PM Dec 12, 2023 | Team Udayavani |

ಚೆನ್ನೈ: ಇಂದು ಸೂಪರ್ ಸ್ಟಾರ್ ರಜನಿಕಾಂತ್ ಅವರ 73ನೇ ಹುಟ್ಟುಹಬ್ಬದ ಸಂಭ್ರಮ. ಲಕ್ಷಾಂತರ ಅಭಿಮಾನಿಗಳು ‘ತಲೈವಾ’ ಅವರಿಗೆ ಶುಭಕೋರಿದ್ದಾರೆಮ ನೂರಾರು ಕಲಾವಿದರು ‘ಶಿವಾಜಿ’ಗೆ ವಿಶ್ ಮಾಡಿದ್ದಾರೆ.

Advertisement

‘ಜೈಲರ್’ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಸಿನಿಮಾದ ಬಗ್ಗೆ ದೊಡ್ಡಮಟ್ಟದ ಹೈಪ್ ಕ್ರಿಯೇಟ್ ಆಗಿದೆ. ಟಿ.ಜೆ. ಜ್ಞಾನವೇಲ್ ನಿರ್ದೇಶನದ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ ತಾತ್ಕಾಲಿಕವಾಗಿ ‘ತಲೈವರ್ 170’ ಎನ್ನುವ ಟೈಟಲ್ ಇಡಲಾಗಿತ್ತು. ಇದೀಗ ಸಿನಿಮಾದ ಟೈಟಲ್‌ ರಿವೀಲ್‌ ಮಾಡಿದೆ.

ಈಗಾಗಲೇ ಸಿನಿಮಾದ ಪಾತ್ರವರ್ಗವೇ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಲು ಕಾರಣವಾಗಿದೆ. ಅಮಿತಾಭ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಸೇರಿದಂತೆ ಪ್ರಮುಖ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ.

ಈ ನಡುವೆ ರಜಿನಿಕಾಂತ್‌ ಅವರ ಅಭಿಮಾನಿಗಳಿಗಾಗಿ ʼThalaivar 170ʼ ಚಿತ್ರತಂಡ ಬರ್ತ್‌ ಡೇ ಟೀಸರ್‌ ಜೊತೆ ಟೈಟಲ್‌ ರಿವೀಲ್‌ ಮಾಡಿ  ಸಿನಿಮಾದ ಬಗ್ಗೆ ಹೈಪ್‌ ಹೆಚ್ಚಿಸಿದೆ. ಲಾಟಿ ಹಿಡಿದು ರಜಿನಿಕಾಂತ್‌ ಸ್ಟೈಲಿಸ್ಟ್‌ ಆಗಿ ನಡೆದುಕೊಂಡು ಬಂದಿದ್ದಾರೆ. ಹಿನ್ನೆಲೆಯಲ್ಲಿ ಅನಿರುದ್ಧ್‌ ಅವರ ಮ್ಯೂಸಿಕ್‌ ನೋಡುಗರ ಮೈರೋಮಂಚನಗೊಳಿಸುವಂತೆ ಮಾಡುತ್ತದೆ.

ಸಿನಿಮಾಕ್ಕೆ ʼʼವೆಟ್ಟಯ್ಯನ್ʼ ಎಂದು ಟೈಟಲ್‌ ಇಡಲಾಗಿದೆ. ಸಿನಿಮಾದಲ್ಲಿ ರಜಿನಿಕಾಂತ್‌ ನಿವೃತ್ತ ಮುಸ್ಲಿಂ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಪ್ರಕರಣವೊಂದನ್ನು ರೀ ಓಪನ್‌ ಮಾಡಿ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿದ್ದಾರೆ ಎನ್ನಲಾಗಿದೆ.

Advertisement

ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ ಸಿನಿಮಾಕ್ಕೆ ಇರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next