Advertisement
ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ, ತಮ್ಮ ಅಭಿಮಾನಿ ಸಂಘಟನೆಯಾದ “ರಜನಿ ಮಕ್ಕಳ್ ಮಂದ್ರಂ’ನ ಜಿಲ್ಲಾ ಸಂಚಾಲಕರೊಂದಿಗೆ ಮಾತುಕತೆ ನಡೆಸಿದ ರಜನಿ, ಆನಂತರ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ತಮ್ಮ ನಿರ್ಧಾರದ ಜತೆಗೆ ತಮಿಳುನಾಡಿನ ಜನತೆಗೆ ಮನವಿ ಮಾಡಿರುವ ಅವರು, ರಾಜ್ಯದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ತಂದುಕೊಡಬಲ್ಲ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದಿದ್ದಾರೆ. ಅಲ್ಲದೆ, ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಯಾರು ಕೂಡ ತಮ್ಮ ಭಾವಚಿತ್ರ ಹಾಗೂ ರಜನಿ ಮಕ್ಕಳ್ ಮಂದ್ರ ಸಂಘಟನೆಯ ಧ್ವಜವನ್ನು ಬಳಸಬಾರದು ಎಂದು ತಾಕೀತು ಮಾಡಿದ್ದಾರೆ.
Advertisement
ಲೋಕ ಸಮರದಿಂದ ಹಿಂದೆ ಸರಿದ ತಲೈವಾ
01:00 AM Feb 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.