Advertisement
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ರಸ್ತೆಯ ಈ ತೋಡಿನಲ್ಲಿ ಪಾದೂರು ಪೈಪ್‌ಲೈನ್ ಕಾಮಗಾರಿ ನಡೆಯುವಾಗ ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದರು. ಕಳೆದ ಬಾರಿ ಮಳೆ ನೀರು ರಭಸವಾಗಿ ತೋಡಿನಲ್ಲಿ ಹರಿದು ತಡೆಗೋಡೆ ಕುಸಿದಿತ್ತಲ್ಲದೇ ಪಕ್ಕದ ಕೃಷಿ ಭೂಮಿಗೆ ಮಳೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಈ ಕಾಮಗಾರಿಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೇ ಪಡು ಪಣಂಬೂರು ಗ್ರಾಮ ಪಂಚಾಯತ್ ಸಹ ಈ ಬಗ್ಗೆ ಪಾದೂರು ಪೈಪ್‌ಲೈನ್ ನಡೆಸುವ ಗುತ್ತಿಗೆದಾರರಿಗೆ ಎಚ್ಚರಿಕೆಯನ್ನು ನೀಡಿತ್ತು.
ಮಳೆ ನೀರು ರಭಸವಾಗಿ ಹರಿ ಯುತ್ತಿದ್ದರಿಂದ ಆ ಸಂದರ್ಭ ಯಾವುದೇ ರೀತಿಯಲ್ಲೂ ಕಾಮಗಾರಿ ನಡೆಸದೇ ಆಸಹಾಯಕತೆಯಿಂದ ತುರ್ತು ಕ್ರಮವಾಗಿ ಮರಳಿನ ಚೀಲ ಗಳನ್ನು ಹಾಕಲಾಗಿದ್ದರು ಅದು ಶಾಶ್ವತ ಪರಿಹಾರ ಕಂಡು ಬಂದಿ ರಲಿಲ್ಲ. ಈ ವರ್ಷದ ಮಳೆಗಾಲ ಆರಂಭಕ್ಕೂ ಮುನ್ನ ದುರಸ್ತಿ ನಡೆಸಲು ಗುತ್ತಿಗೆದಾರರು ಮುಂದಾಗದೇ ಇದ್ದುದರಿಂದ ಕಳೆದ ನಾಲ್ಕು ತಿಂಗಳ ಹಿಂದೆಯೇ ಗ್ರಾ.ಪಂ.ಮರಳಿ ಗುತ್ತಿಗೆದಾರರಿಗೆ ಶಾಶ್ವತವಾಗಿ ದುರಸ್ತಿ ಮಾಡಲು ಸೂಚನೆ ನೀಡಲಾಗಿತ್ತು. ಗ್ರಾಮದಲ್ಲಿ ಪೈಪ್‌ಲೈನ್‌ಗಾಗಿ ನಡೆಸಿರುವ ಯಾವುದೇ ಕಾಮಗಾರಿಗೆ ಅಧಿಕೃತವಾಗಿ ಎನ್‌ಒಸಿ ನೀಡುವುದಿಲ್ಲ, ಬದಲಾಗಿ ಆಕ್ಷೇಪ ನೀಡುತ್ತೇವೆ ಎಂದು ಷರತ್ತು ವಿಧಿಸಿತ್ತು. ಇದೀಗ ಎಚ್ಚೆತ್ತುಕೊಂಡಿರುವ ಗುತ್ತಿಗೆದಾರರು ಕಾಂಕ್ರೀಟ್ ಮಿಶ್ರಿತ ತಡೆಗೋಡೆಯನ್ನು ನಿರ್ಮಿಸಿ ಪಂಚಾಯತ್‌ನ ಸೂಚನೆಯನ್ನು ಪಾಲಿಸಿದಂತಿದೆ.
Related Articles
Advertisement
ಮಳೆಗಾಲಕ್ಕೆ ಮುನ್ನೆಚ್ಚರಿಕೆಗೆ ಕ್ರಮಕಳೆದ ವರ್ಷದಲ್ಲಿ ತಡೆಗೋಡೆ ಕುಸಿತ ಕಂಡಿದ್ದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೆವು. ಆದರೂ ಕೃಷಿ ಭೂಮಿಗೆ ಹಾನಿಯಾಗಿತ್ತು. ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಮಳೆಗಾಲಕ್ಕೆ ಮೊದಲೇ ದುರಸ್ಥಿ ನಡೆಸಲು ಸ್ಪಷ್ಟವಾಗಿ ಸೂಚನೆ ನೀಡಿದ್ದೇವೆ. ಇನ್ನೂ ಹಲವು ಕಡೆಗಳಲ್ಲಿ ಪಾದೂರು ಪೈಪ್‌ಲೈನ್ ಕಾಮಗಾರಿಯಿಂದ ತೊಂದರೆಯಾಗಿದ್ದು ಅದನ್ನು ಸಹ ಸರಿಪಡಿಸಲು ಸೂಚನೆ ನೀಡಲಾಗಿದೆ.
– ಮೋಹನ್‌ದಾಸ್,
ಅಧ್ಯಕ್ಷರು, ಪಡುಪಣಂಬೂರು ಗ್ರಾಮ ಪಂಚಾಯತ್