ಸಿಲ್ಹೆಟ್: ಇಲ್ಲಿ ನಡೆಯುತ್ತಿರುವ ವನಿತಾ ಏಷ್ಯಾಕಪ್ ಕೂಟದಲ್ಲಿ ಪಾಕಿಸ್ಥಾನ ತಂಡವು ಕ್ರಿಕೆಟ್ ಶಿಶು ಥಾಯ್ಲೆಂಡ್ ವಿರುದ್ಧ ಸೋತು ಮುಖಭಂಗ ಅನುಭವಿಸಿದೆ. ಮಲೇಶ್ಯಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದ್ದ ಪಾಕಿಸ್ಥಾನ ಮೂರನೇ ಪಂದ್ಯದಲ್ಲಿ ಸೋಲನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ ತಂಡ 116 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಥಾಯ್ಲೆಂಡ್ ಇನ್ನೂ ಒಂದು ಎಸೆತ ಬಾಕಿ ಇರುವಂತೆ ಗುರಿ ತಲುಪಿ ಜಯ ಸಾಧಿಸಿತು.
ಇದನ್ನೂ ಓದಿ:ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ; ಭಾರತದಿಂದ ಖಂಡನೆ
ಪಾಕಿಸ್ಥಾನದ ಪರ ಆರಂಭಿಕ ಆಟಗಾರ್ತಿ ಅಮೀನ್ 64 ಎಸೆತಗಳಲ್ಲಿ 56 ರನ್ ಗಳಿಸಿದರು. ಮುನಿಬಾ ಅಲಿ 15 ರನ್, ನಿದಾ ದರ್ 12 ರನ್ ಮಾಡಿದರು. ಗುರಿ ಬೆನ್ನತ್ತಿದ ಥಾಯ್ಲಂಡ್ ತಂಡದ ಆರಂಭಿಕ ಆಟಗಾರ್ತಿ ನತ್ತಕನ್ ಚಂತಂ 51 ಎಸೆತಗಳಲ್ಲಿ 5 ಬೌಂಡರಿ ಮತ್ತು ಎರಡು ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಹತ್ತು ರನ್ ಬೇಕಾಗಿದ್ದಾಗ ರೊಸೆನನ್ ಕನೊಹ್ ಬೌಂಡರಿ ಸಹಿತ ಸಾಹಸದಿಂದ ಒಂದು ಎಸೆತ ಬಾಕಿ ಇರುವಂತೆ ಜಯ ಸಾಧಿಸಿತು.