ಬ್ಯಾಂಕಾಕ್: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ವಿಶ್ವದ ನಂಬರ್ ವನ್ ಆಟಗಾರ್ತಿ, ಜಪಾನಿನ ಅಕಾನೆ ಯಮಾಗುಚಿ ಅವರನ್ನು ಕೆಡಹಿ “ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್’ ಕೂಟದ ಸೆಮಿಫೈನಲ್ ಹಂತಕ್ಕೇರಿದರು. ಸಿಂಧು ಈ ಕೂಟದ ಸ್ಪರ್ಧೆಯಲ್ಲಿ ಉಳಿ ದಿರುವ ಭಾರತದ ಏಕೈಕ ಆಟ ಗಾರ್ತಿಯಾಗಿದ್ದಾರೆ.
ಆರನೇ ಶ್ರೇಯಾಂಕದ ಸಿಂಧು 51 ನಿಮಿಷಗಳ ಹೋರಾಟದಲ್ಲಿ ಯಮಾಗುಚಿ ಅವರನ್ನು 21-15, 20-22, 21-13 ಗೇಮ್‌ಗಳಿಂದ ಮಣಿಸಿ ದರು. ಸೆಮಿಫೈನಲ್ ಹೋರಾಟ ದಲ್ಲಿ ಅವರು ಒಲಿಂಪಿಕ್ ಚಾಂಪಿಯನ್, ಚೀನದ ಚೆನ್ ಯು ಫೆಯಿ ಸವಾಲನ್ನು ಎದುರಿಸಲಿದ್ದಾರೆ.
ಯಮಾಗುಚಿ ವಿರುದ್ಧ 13 ಗೆಲುವು 9 ಸೋಲಿನ ದಾಖಲೆ ಹೊಂದಿರುವ ಸಿಂಧು ಈ ಪಂದ್ಯದಲ್ಲೂ ಅದ್ಭುತ ನಿರ್ವಹಣೆ ನೀಡಿದ್ದರು. ದ್ವಿತೀಯ ಗೇಮ್ ತೀವ್ರ ಪೈಪೋಟಿಯಿಂದ ಸಾಗಿತ್ತು. ಅಂತಿಮವಾಗಿ ಹಾಲಿ ವಿಶ್ವ ಚಾಂಪಿಯನ್ ವಿರುದ್ಧ ತನ್ನ 14ನೇ ಗೆಲುವು ಒಲಿಸಿಕೊಳ್ಳುವಲ್ಲಿ ಸಿಂಧು ಯಶಸ್ವಿಯಾದರು.
ಜಿದ್ದಾಜಿದ್ದಿ ಹೋರಾಟ
ಪಂದ್ಯದ ಆರಂಭದ ಹಂತದಲ್ಲಿ ಇಬ್ಬರೂ ಸಮಬಲದ ಹೋರಾಟ ನೀಡಿದ್ದರು. ನಿಖರ ದಾಳಿಯಿಂದ ಯಮಾಗುಚಿ ಅವರಿಗೆ ಸಮಸ್ಯೆ ತಂದಿಟ್ಟ ಸಿಂಧು ಮುನ್ನಡೆ ಸಾಧಿ ಸಲು ಪ್ರಯತ್ನಿಸಿದರು. ಯಮಾಗುಚಿ ಹೆಚ್ಚಾಗಿ ನೆಟ್‌ಗೆ ಶಟಲ್ ಅನ್ನು ಹಾಕಿದ್ದರಿಂದ ಸಿಂಧು ಮೊದಲ ಗೇಮ್ ಗೆದ್ದರು. ದ್ವಿತೀಯ ಗೇಮ್‌ನಲ್ಲೂ ಜಿದ್ದಾಜಿದ್ದಿನ ಹೋರಾಟ ಮುಂದುವರಿಯಿತು. ಕೊನೆಗೆ ಈ ಗೇಮ್ ಯಮಾಗುಚಿ ಗೆದ್ದರೆ ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಸಿಂಧು ಮೇಲುಗೈ ಸಾಧಿಸಿದರು.
ಸಿಂಧು ಮತ್ತು ಯಮಾಗುಚಿ ಈ ಹಿಂದೆ ಜತೆಯಾಗಿ ಆಡಿದ್ದ ಪಂದ್ಯ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಪಂದ್ಯದ ವೇಳೆ ತನ್ನ ತಂತ್ರವನ್ನು ಉಪಯೋಗಿಸಲು ವಿಳಂಬ ಮಾಡಿದ್ದರಿಂದ ಅಂಪಾ ಯರ್ ಸಿಂಧು ಅವರಿಗೆ ಒಂದಂಕ ದಂಡ ವಿಧಿಸಿದ್ದರು.