Advertisement
ಸಿಂಧು ಗೈರಲ್ಲಿ ಭಾರತದ ಪ್ರಮುಖ ಆಟಗಾರ್ತಿಯಾಗಿದ್ದ ಸೈನಾ ನೆಹ್ವಾಲ್ ಅವರನ್ನು ಜಪಾನಿನ ಸಯಾಕಾ ಟಕಹಾಶಿ 16-21, 21-11, 21-14 ಅಂತರದಿಂದ ಪರಾಭವಗೊಳಿಸಿದರು. ಟಕಹಾಶಿ ಈ ಕೂಟದಲ್ಲಿ ಯಾವುದೇ ಶ್ರೇಯಾಂಕ ಪಡೆದಿಲ್ಲ ಎಂಬುದು ಗಮನಾರ್ಹ.
Related Articles
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಭರವಸೆ ಮೂಡಿಸಿದ್ದಾರೆ. ಇವರು ಇಂಡೋನೇಶ್ಯದ ಫಜರ್ ಅಲ್ಫಿಯಾನ್-ಮುಹಮ್ಮದ್ ರಿಯಾನ್ ಅರ್ದಿಯಾಂತೊ ಜೋಡಿಯನ್ನು 21-17, 21-19ರಿಂದ ಪರಾಭವಗೊಳಿಸಿದರು.
Advertisement
ಪ್ರಣಯ್ ಪರಾಭವದಿನದ ಕೊನೆಯ ಪಂದ್ಯದಲ್ಲಿ ಎಚ್.ಎಸ್. ಪ್ರಣಯ್ ಕೂಡ ಸೋಲಿನ ಸುದ್ದಿ ನೀಡಿದರು. ಜಪಾನಿನ ಕೆಂಟ ನಿಶಿಮೊಟೊ ವಿರುದ್ಧ 17-21, 10-21 ಅಂತರದಿಂದ ಕಳೆದುಕೊಂಡು ಕೂಟದಿಂದ ನಿರ್ಗಮಿಸಿದರು. ಶುಭಂಕರ್‌ಗೆ ಸೋಲುಣಿಸಿದ ಪ್ರಣೀತ್
ಭಾರತೀಯರ ಮೇಲಾಟದಲ್ಲಿ ಬಿ. ಸಾಯಿಪ್ರಣೀತ್ 21-18, 21-19 ಅಂತರದಿಂದ ಶುಭಂಕರ್ ಡೇ ವಿರುದ್ಧ ಗೆದ್ದು ಬಂದರು. ಸಾಯಿ ಪ್ರಣೀತ್ ಕ್ವಾ.ಫೈನಲ್ನಲ್ಲಿ ಜಪಾನಿನ 7ನೇ ಶ್ರೇಯಾಂಕಿತ ಆಟಗಾರ ಕಾಂಟ ತ್ಸುನೆಯಾಮ ವಿರುದ್ಧ ಸೆಣಸಲಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್ ಚೈನೀಸ್ ತೈಪೆಯ ಚೋ ಟೀನ್ ಚೆನ್ ವಿರುದ್ಧ 9-21, 14-21 ಅಂಕಗಳಿಂದ ಎಡವಿದರು.