Advertisement
ಕಳೆದ ಎರಡು ವಾರ ಸಿಂಧು ಪಾಲಿಗೆ ಯಮಾಗುಚಿ ಅಪಾಯ ಕಾರಿಯಾಗಿದ್ದರು. ಇಂಡೋನೇಶ್ಯ ಓಪನ್‌ನ ಫೈನಲ್‌ನಲ್ಲಿ ಅವರಿಗೆ ಶರಣಾಗಿದ್ದ ಸಿಂಧು, ಜಪಾನ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಮತ್ತೆ ಮುಖಾಮುಖೀಯಾದಾಗ ನೇರ ಗೇಮ್‌ಗಳಿಂದ ಸೋತಿದ್ದರು. ಇದೀಗ 7 ತಿಂಗಳ ಪ್ರಶಸ್ತಿ ಬರವನ್ನು ನೀಗಿಸಲು ಸಿಂಧು ಹಾತೊರೆಯುತ್ತಿದ್ದಾರೆ.
ನಾಲ್ಕನೇ ಶ್ರೇಯಾಂಕದ ಸಿಂಧು ಮೊದಲ ಸುತ್ತಿನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಚೀನದ ಹಾನ್ ಯುಯಿ ಅವರನ್ನು ಎದುರಿಸಲಿದ್ದಾರೆ. ಜಪಾನ್ ಓಪನ್‌ನಲ್ಲಿ ಸಿಂಧು ಈ ಎದುರಾಳಿಯನ್ನು ಸುಲಭವಾಗಿ ಮಣಿಸಿದ್ದರು. ಸಿಂಧು ಅವರಿಗೆ ನಿಜವಾದ ಪರೀಕ್ಷೆ ಎದುರಾಗುವುದು ಕ್ವಾರ್ಟರ್ ಫೈನಲ್‌ನಲ್ಲಿ. ಅಲ್ಲಿ ಅವರಿಗೆ ಆರನೇ ಶ್ರೇಯಾಂಕದ ಆತಿಥೇಯ ನಾಡಿನ ರಚನಾಕ್ ಇಂತನಾನ್ ಎದುರಾಗಲಿದ್ದಾರೆ.
Related Articles
ಸೈನಾ ಮೊದಲ ಸುತ್ತಿನಲ್ಲಿ ಅರ್ಹತಾ ಆಟಗಾರ್ತಿಯೊಬ್ಬರನ್ನು ಎದುರಿಸಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಕಳೆದ ಎರಡು ಕೂಟಗಳಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಮುಂದಿನ ತಿಂಗಳು ನಡೆಯುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ನಡೆಸುವುದು ಅವರ ಅಲೋಚನೆಯಾಗಿದೆ.
Advertisement
ಪುರುಷರ ಸಿಂಗಲ್ಸ್ಪುರುಷರ ಸಿಂಗಲ್ಸ್‌ನಲ್ಲಿ ಶುಭಂಕರ್ ಡೇ ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಜಪಾನಿನ ಕೆಂಟೊ ಮೊಮೊಟ ಅವರನ್ನು ಎದುರಿಸಲಿದ್ದಾರೆ. ಇದೇ ವೇಳೆ ಬಿ. ಸಾಯಿ ಪ್ರಣೀತ್ ಥಾಯ್ಲೆಂಡಿನ ಕಾಂತಪನ್ ವಾಂಗ್‌ಚರೋನ್ ಅವರನ್ನು ಎದುರಿಸಲಿದ್ದಾರೆ. ಶುಭಂಕರ್ ಮತ್ತು ಪ್ರಣೀತ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದರೆ ದ್ವಿತೀಯ ಸುತ್ತಿನಲ್ಲಿ ಪರಸ್ಪರ ಮುಖಾಮುಖೀಯಾಗಲಿದ್ದಾರೆ.