Advertisement

ಥೈಲೆಂಡ್‌ನ‌ ಸೌಂದರ್ಯ ಸ್ಪರ್ಧೆ: ಮಂಗಳೂರು ಸುಂದರಿಯರಿಗೆ ಕಿರೀಟ

01:53 AM Nov 21, 2019 | Team Udayavani |

ಮಂಗಳೂರು: ಫ್ಯಾಶನ್‌ ಎಬಿಸಿಡಿ ಮತ್ತು ಸ್ಪಾಟ್‌ ಲೈಟ್‌ ಇಂಟರ್‌ನ್ಯಾಶನಲ್‌ ಫಿಲ್ಮ್ ವತಿಯಿಂದ ನ. 12ರಿಂದ 16ರ ವರೆಗೆ ಥೈಲೆಂಡ್‌ನ‌ಲ್ಲಿ ಜರಗಿದ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರು ಮೂಲದ ಮಹಿಳೆಯರಿಬ್ಬರು ವಿಜೇತರಾಗಿದ್ದಾರೆ.

Advertisement

ಡಾ| ಜೆನ್ನಿಫರ್‌ ಮಿಸ್‌ ವರ್ಲ್ಡ್ ಸೂಪರ್‌ ಮಾಡೆಲ್‌
ಮಿಸ್‌ ವರ್ಲ್ಡ್ ಸೂಪರ್‌ ಮಾಡೆಲ್‌-2019 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಫಾದರ್‌ ಮುಲ್ಲರ್‌ ಹೋಮಿಯೋಪತಿ ಕಾಲೇಜಿನ ಇಂಟರ್ನಿ 23ರ ಹರೆಯದ ಡಾ| ಜೆನ್ನಿಫರ್‌ ನೊರೋನ್ಹ ವಿಜೇತರಾಗಿ “ಮಿಸ್‌ ಮಲ್ಟಿ ಮೀಡಿಯಾ-2019′ ಬಿರುದನ್ನು ತಮ್ಮದಾಗಿಸಿಕೊಂಡಿ
ದ್ದಾರೆ. ವಿವಿಧ ದೇಶಗಳ 16 ಸ್ಪರ್ಧಿಗಳು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ದಿ| ಲಾರೆನ್ಸ್‌ ನೊರೋನ್ಹ ಮತ್ತು ಸೋಬಿನಾ ನೊರೋನ್ಹ ದಂಪತಿಯ ಪುತ್ರಿಯಾಗಿರುವ ಜೆನ್ನಿಫರ್‌, ಮುಂಬಯಿಯಲ್ಲಿ ಬೆಳೆದಿದ್ದು, ಪ್ರಸ್ತುತ ತಾಯಿಯೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಕರ್ನಾಟಕದಲ್ಲಿ ಆ್ಯತ್ಲೆಟಿಕ್ಸ್‌ ಮತ್ತು ವಿವಿಧ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದಾರೆ.

ಡಾ| ಪ್ರಿಯದರ್ಶಿನಿ “ಮಿಸೆಸ್‌ ಸೂಪರ್‌ ಮಾಡೆಲ್‌’
ಮಂಗಳೂರಿನ ವೈದ್ಯೆ ಡಾ| ಪ್ರಿಯದರ್ಶಿನಿ ಅವರು “ಮಿಸೆಸ್‌ ಸೂಪರ್‌ ಮಾಡೆಲ್‌’ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ವಿವಿಧ ದೇಶಗಳ 16 ಸ್ಪರ್ಧಿಗಳಿದ್ದರು. ಇದರಲ್ಲಿ ಪ್ರಿಯದರ್ಶಿನಿ ಅವರು ವಿಜೇತರಾದರೆ ಬೆಂಗಳೂರಿನ ಆಶಾ ಫಸ್ಟ್‌ ರನ್ನರ್‌ ಅಪ್‌ ಮತ್ತು ದುಬಾೖಯ ರಿಹಾ ಖಾನ್‌ ಪಟಾನ್‌ ಅವರು ದ್ವಿತೀಯ ರನ್ನರ್‌ ಆಪ್‌ ಆದರು. ವೃತ್ತಿಯಲ್ಲಿ ವೈದ್ಯೆಯಾಗಿರುವ ಪ್ರಿಯದರ್ಶಿನಿ ಅವರು ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಬೈಂದೂರಿನ ವಿಜಯ ರೈ ಹಾಗೂ ಲೀನಾ ರೈ ದಂಪತಿಯ ಪುತ್ರಿಯಾಗಿದ್ದು, ಅರುಣ್‌ ಡಿ’ಸೋಜಾ ಅವರ ಪತ್ನಿ.

Advertisement

Udayavani is now on Telegram. Click here to join our channel and stay updated with the latest news.

Next