Advertisement
ಗಾರವೆಂಬ ಸೀರೆಯನ್ನುಟ್ಟು, ಬಂಗಾರವೆಂಬ ಬಳೆಯನ್ನು ತೊಟ್ಟು, ನರ್ತಕಿಯೆಂಬ ನತ್ತನ್ನಿಟ್ಟು, ಚೆಲುವೆ ಚೆಂದುಳ್ಳಿ ಯಾಗಿ ಕೈಬೀಸಿ ಕರೆಯುವ ದೇಶ ಥಾçಲ್ಯಾಂಡ್…
Related Articles
Advertisement
ಸ್ವತ್ಛತೆ ಇಲ್ಲಿ ಎದ್ದು ಕಾಣುವ ವಿಚಾರ. ರಸ್ತೆ, ಹೆದ್ದಾರಿ ಸ್ವತ್ಛತೆ ಕಾರ್ಯ ಮೆಚ್ಚುವಂತಿದೆ. ಟ್ರಾಫಿಕ್ ಜಾಮ್ ಕಾಣ ಸಿಗುವುದೇ ಇಲ್ಲ. ಇಲ್ಲಿ ಹೆದ್ದಾರಿಯನ್ನೂ ಅದೇ ರೀತಿ ನಿರ್ಮಾಣಮಾಡಲಾಗಿದೆ. ಇಲ್ಲಿ ಎಂಜಿನಿಯರಿಂಗ್ ಪರಿಣತಿ ಎದ್ದು ಕಾಣುತ್ತದೆ.ದೇಶದ ಕೇಂದ್ರಬಿಂದು ಬ್ಯಾಂಕಾಕ್ ಅತ್ಯಂತ ಸಮೃದ್ಧಿಯನ್ನು ಹೊಂದಿದ ನಗರ. ಇಲ್ಲಿ ಭಾರತೀಯ ಆಚಾರ, ವಿಚಾರಗಳಿಗೆ ಮನ್ನಣೆ ನೀಡುವುದರ ಜತೆಗೆ ಧರ್ಮ, ಸಂಪ್ರದಾಯ, ಹಬ್ಬಹರಿದಿನಗಳ ಆಚರಣೆಗೂ ಹೆಚ್ಚಿನ ಅವಕಾಶವಿದೆ. ಕನ್ನಡಿಗರ ಹೃದಯ ಶ್ರೀಮಂತಿಕೆಗೆ ಇಲ್ಲಿನ ಜನ ಗೌರವ ನೀಡುತ್ತಾರೆ. ಕನ್ನಡ ನಾಡುನುಡಿ, ನಿತ್ಯಹರಿದ್ವರ್ಣ ಕಾಡುಗಳು, ಗಂಧದ ಮರ, ರಾಜಮಹಾರಾಜರ ಇತಿಹಾಸ, ಶಿಲ್ಪಕಲೆ, 8 ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕ ರಾಜ್ಯದ ಬಗ್ಗೆ ಇಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸುವುದು ವಿಶೇಷ. ಅತ್ಯಂತ ಸುಸಂಸ್ಕೃತ, ಸರಳ ಜೀವನ ನಡೆಸುವ ಇಲ್ಲಿನ ಜನರು, ಕನ್ನಡಿಗರೊಂದಿಗೆ ಸಹೋದರತ್ವ ಭಾವನೆಯಿಂದ ಬೆರೆತುಕೊಳ್ಳುತ್ತಾರೆ. ಹಬ್ಬಗಳಲ್ಲಿಯೂ ಸಹಭಾಗಿಯಾಗುತ್ತಾರೆ. ದೇವರು, ಪೂಜೆ, ಪುನಸ್ಕಾರಗಳನ್ನು ಗೌರವಿಸುತ್ತಾರೆ. - ಲಕ್ಷ್ಮೀ, ಅಂಕಲಗಿಮಠ , ಥೈಲ್ಯಾಂಡ್