Advertisement

ಫ‌ುಟ್‌ಬಾಲ್‌ ತಂಡದ ಬಾಲಕರನ್ನು ರಕ್ಷಿಸಲು 100 ಚಿಮಣಿಗಳು

06:00 AM Jul 08, 2018 | |

ಬ್ಯಾಂಕಾಕ್‌: ಥಾಯ್ಲೆಂಡ್‌ನ‌ ಗುಹೆಯಲ್ಲಿ ಸಿಲುಕಿಕೊಂಡ ಫ‌ುಟ್‌ಬಾಲ್‌ ತಂಡದ ಬಾಲಕರನ್ನು ರಕ್ಷಿಸುವುದಕ್ಕಾಗಿ 100ಕ್ಕೂ ಹೆಚ್ಚು ಚಿಮಣಿಗಳನ್ನು ಕೊರೆಯಲಾಗುತ್ತಿದೆ. ಮಕ್ಕಳನ್ನು ನೇರವಾಗಿ ಗುಹೆಯಿಂದಲೇ ಎತ್ತಿ ತೆಗೆಯಲು ಈ ರಂಧ್ರಗಳನ್ನು ಗುಡ್ಡದಿಂದ ಕೊರೆಯಲಾಗುತ್ತಿದೆ. ಈಗಾಗಲೇ 400 ಮೀ. ವರೆಗೆ ಕೆಲವು ರಂಧ್ರಗಳನ್ನು ಕೊರೆಯಲಾಗಿದೆ. ಆದರೆ ಇನ್ನೂ ಗುಹೆಯನ್ನು ಒಂದೂ ರಂಧ್ರವೂ ತಲುಪಿಲ್ಲ. ಅಂದಾಜು 600 ಮೀ. ರಂಧ್ರ ಕೊರೆದರೆ ಗುಹೆ ಸಿಗಬಹುದು ಎಂದು ಊಹಿಸಲಾಗಿದೆ.

Advertisement

ಜೂನ್‌ 23 ರಂದು ಗುಹೆಗೆ ಪ್ರವಾಸಕ್ಕಾಗಿ ತೆರಳಿದ್ದ ಬಾಲಕರು, ನೀರಿನ ಮಟ್ಟ ಏರಿದ್ದರಿಂದಾಗಿ ಹೊರಬರಲಾಗದೇ ಸಿಲುಕಿಕೊಂಡಿದ್ದರು. 10 ದಿನಗಳ ನಂತರ ಇವರು ಗುಹೆಯಲ್ಲಿರುವುದು ಕಂಡುಬಂದಿತ್ತು. ಈಗ ದೇಶ ವಿದೇಶಗಳ ಪರಿಣಿತರು ಇವರನ್ನು ಸುರಕ್ಷಿತವಾಗಿ ಕರೆತರಲು ಶ್ರಮಿಸುತ್ತಿದ್ದಾರೆ.

ಕುಟುಂಬದವರಿಗೆ ಬಾಲಕರ ಪತ್ರ: ಇದೇ ಮೊದಲ ಬಾರಿಗೆ ಕುಟುಂಬದವರಿಗೆ ಬಾಲಕರು ಪತ್ರ ಬರೆದಿದ್ದು, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ. ಒಬ್ಬ ವಿದ್ಯಾರ್ಥಿಯಂತೂ “ಶಿಕ್ಷಕರೇ, ತುಂಬಾ ಹೋಮ್‌ವರ್ಕ್‌ ನೀಡಬೇಡಿ’ ಎಂದು ಲಘುಧಾಟಿಯಲ್ಲಿ ಬರೆದಿದ್ದಾನೆ. ಇದೇ ವೇಳೆ, ಮಕ್ಕಳ ಪಾಲಕರ ಬಳಿ ಕೋಚ್‌ ಕ್ಷಮೆ ಕೇಳಿದ್ದು, ಮಳೆಗಾಲ ಎಂದು ಗೊತ್ತಿದ್ದೂ ಮಕ್ಕಳನ್ನು ಗುಹೆಗೆ ಕರೆದೊಯ್ದಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next