Advertisement

ಹತ್ತು ದಿನ ಮೊದಲೇ ಬಂತು ಪಠ್ಯಪುಸ್ತಕ

11:46 AM May 21, 2018 | Team Udayavani |

ಹೊನ್ನಾಳಿ: ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಮೊದಲೇ ತಾಲೂಕಿನ ಸರ್ಕಾರಿ ಶಾಲೆಗಳ ಬೇಡಿಕೆಯ ಶೇ. 75ರಷ್ಟು ಹಾಗೂ ಖಾಸಗಿ ಶಾಲೆಗಳ ಬೇಡಿಕೆಯ ಶೇ. 95ರಷ್ಟು ಪಠ್ಯಪುಸ್ತಗಳು ತಲುಪಿರುವುದು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಸಂತಸ ಮೂಡಿಸಿದೆ.

Advertisement

ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಈ ಬಾರಿ ತಾಲೂಕಿಗೆ ಶೀಘ್ರವಾಗಿ ಪುಸ್ತಕಗಳನ್ನು ತಲುಪಿಸಿದೆ. ಕಳೆದ ಬಾರಿ
ನಾನಾ ಕಾರಣಗಳಿಂದ ಜೂನ್‌ ಮಧ್ಯಂತರದವರೆಗೂ ಪಠ್ಯಪುಸ್ತಕಗಳು ಬಂದಿರಲಿಲ್ಲ. ಜೂ. 1 ರೊಳಗೆ ಮಕ್ಕಳಿಗೆ
ಪುಸ್ತಕ ವಿತರಿಸುವ ಸಲುವಾಗಿ ತಾಲೂಕು ಬಿಆರ್‌ಸಿ ಕಚೇರಿಯಲ್ಲಿಯೇ ಮೇ 21 ರಿಂದ ಸವಳಂಗ, ಸುರಹೊನ್ನೆ,
ನ್ಯಾಮತಿ, ಬೆಳಗುತ್ತಿ, ಚೀಲೂರು, ಒಡೆಯರಹತ್ತೂರು, ಕಸಬಾ, ಗೋವಿನಕೋವಿ, ಎಚ್‌.ಜಿ ಹಳ್ಳಿ, ಅರಕೆರೆ,
ತರಗನಹಳ್ಳಿ, ಕುಂದೂರು, ಯಕ್ಕನಹಳ್ಳಿ ಸೇರಿದಂತೆ ಒಟ್ಟು 20 ಕ್ಲಸ್ಟರ್‌ಗಳಿಗೆ ಆಯಾಯ ದಿನಾಂಕದಂದು ಪಠ್ಯ
ಪುಸ್ತಕಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಬಿಇಒ ಜೆ.ಇ. ರಾಜೀವ್‌ ತಿಳಿಸಿದರು.

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ವಿತರಣೆಗೆ 1,84,195 ಪುಸ್ತಕಗಳು ಬರಬೇಕಾಗಿತ್ತು, ಅದರಲ್ಲಿ
1,58,033 ಪುಸ್ತಕಗಳು ಬಂದಿದೆ. ಅನುದಾನ ರಹಿತ ಶಾಲೆಗಳಿಗೆ 43,007 ಬರಬೇಕಾಗಿತ್ತು, ಅದರಲ್ಲಿ 39,716
ಪುಸ್ತಕಗಳು ಬಂದಿವೆ ಎಂದು ಅವರು ಹೇಳಿದರು. 

ಸಮವಸ್ತ್ರ: ಒಂದನೇ ತರಗತಿಯಿಂದ 10 ನೇ ತರಗತಿವರೆಗಿನ ಎಲ್ಲಾ ಸರ್ಕಾರಿ ಶಾಲೆಗಳ 32,652
ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗುತ್ತಿದೆ. ಅದರಲ್ಲಿ 8 ರಿಂದ 10 ನೇ ತರಗತಿಯ ಹೆಣ್ಣು ಮಕ್ಕಳಿಗೆ ಮಾತ್ರ
ಸಮವಸ್ತ್ರ ಬಂದಿಲ್ಲ. ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಗುತ್ತಿದೆ ಎಂದರು.

ಶೂ ವಿತರಣೆ ಒಂದು ತಿಂಗಳು ತಡವಾಗಬಹುದು ಎಂದು ಶಿಕ್ಷಣ ಇಲಾಖೆಯ ಆಯುಕ್ತರೇ ಹೇಳಿದ್ದಾರೆ
ಆದ್ದರಿಂದ ಜುಲೈನಲ್ಲಿ ವಿದ್ಯಾರ್ಥಿಗಳಿಗೆ ಶೂ ವಿತರಿಸಲಾಗುವುದು ಎಂದು ಅವರು ತಿಳಿಸಿದರು. 

Advertisement

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ವಿತರಣೆಗೆ 1,84,195 ಪುಸ್ತಕಗಳು ಬರಬೇಕಾಗಿತ್ತು, ಅದರಲ್ಲಿ 1,58,033 ಪುಸ್ತಕಗಳು ಬಂದಿದೆ. ಅನುದಾನ ರಹಿತ ಶಾಲೆಗಳಿಗೆ 43,007 ಬರಬೇಕಾಗಿತ್ತು, ಅದರಲ್ಲಿ 39716 ಪುಸ್ತಕಗಳು ಬಂದಿವೆ. ಶೀಘ್ರ ವಿತರಿಸಲಾಗುವುದು.
ಜೆ.ಇ. ರಾಜೀವ್‌, ಬಿಇಒ, ಹೊನ್ನಾಳಿ

Advertisement

Udayavani is now on Telegram. Click here to join our channel and stay updated with the latest news.

Next