Advertisement

ಪಠ್ಯಪೂರಕ ಚಟುವಟಿಕೆ ಅಗತ್ಯ

03:47 PM Dec 26, 2021 | Team Udayavani |

ಸಿಂದಗಿ: ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಪಠ್ಯದಷ್ಟೇ ಪಠ್ಯಪೂರಕ ಚಟುವಟಿಕೆಗಳು ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂದು ತಾಲೂಕಿನ ಮಲಘಾಣ ಗ್ರಾಮದ ಶರಣಬಸವೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿವೇಕಾನಂದ ಪಾಟೀಲ ಹೇಳಿದರು.

Advertisement

ಪಟ್ಟಣದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಬಿಎಸ್‌ಡಬ್ಲ್ಯು, ಬಿಕಾಂ ಮತ್ತು ಬಿಎ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2021-22ನೇ ಸಾಲಿನ ವಿದ್ಯಾರ್ಥಿಗಳ ಒಕ್ಕೂಟ ಉದ್ಘಾಟಿಸಿ ಪಠ್ಯಪೂರಕ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಕ್ರಿಯವಾಗಿ ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಭಾಗವಹಿಸುವಿಕೆಯಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಬೆಳವಣಿಗೆಯಾಗುವ ಜೊತೆಗೆ ನಾಯಕತ್ವ ಗುಣ ಬೆಳವಣಿಗೆಯಾಗುತ್ತದೆ. ಪ್ರತಿಭೆ ಅನಾವರಣಗೊಳಿಸಲು ಒಂದು ಮುಖ್ಯ ವೇದಿಕೆಯಾಗುತ್ತದೆ. ಈ ವೇದಿಕೆ ಮೇಲೆ ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಆಡಳಿತಾಧಿಕಾರಿ ಡಾ| ಬಿ.ಜಿ. ಮಠ ಮಾತನಾಡಿ, ಪಠ್ಯಪೂರಕ ಚಟುವಟಿಕೆಗಳಿಂದ ಜ್ಞಾನ ಮತ್ತು ವಿಜ್ಞಾನ ಎರಡು ದೊರೆಯುತ್ತವೆ. ಹೊಸ ಪಠ್ಯಕ್ರಮವೂ ನಮಗೆ ದಾರಿ ದೀಪವಾಗಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. 2021-22ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ವಿಭಾಗಗಳಲ್ಲಿ ಪದಾಧಿಕಾರಿಗಳ ಪಾತ್ರ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಾರಂಗಮಠ-ಗಚ್ಚಿನಮಠದ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಶ್ರದ್ಧೆ, ಪ್ರಾಮಾಣಿಕತೆಯಿಂದ ಅಧ್ಯಯನ ಮಾಡುವ ಮೂಲಕ ವಿದ್ಯಾಲಯಕ್ಕೆ ಕೀರ್ತಿ ತರುವಂತ ಕೆಲಸ ವಿದ್ಯಾರ್ಥಿಗಳು ಮಾಡಬೇಕು. ವಚನ, ಮೌಲ್ಯಾಧಾರಿತ ಸಾಹಿತ್ಯ ಅಧ್ಯಯನ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಪಠ್ಯಪೂರಕ ಚಟುವಟಿಕೆ ಆಯೋಜಿಸಬೇಕು ಎಂದು ಹೇಳಿದರು.

Advertisement

ಡಾ| ಚನ್ನಪ್ಪ ಕಟ್ಟಿ, ಡಾ| ಎಂ.ಎಂ. ಪಡಶೆಟ್ಟಿ, ಎಂ.ಎಸ್‌. ಹೈಯ್ನಾಳಕರ, ಡಾ| ಶರಣಬಸವ ಜೋಗೂರ, ಅಂಗವಿಕಲರ ಐಕ್ಯತಾ ವೇದಿಕೆ ಅಧ್ಯಕ್ಷೆ ಸಬಿಯಾ ಮರ್ತೂರ, ಮಹಾಂತೇಶ ನೂಲಾನವರ, ಉಮೇಶ ಪೂಜೇರಿ, ಗದಿಗೆಯ್ಯ ನಂದಿಮಠ, ಅನಿಲಕುಮಾರ ರಜಪೂತ, ಸರಸ್ವತಿ ಪಟೇದ, ಭಾಗ್ಯಶ್ರೀ ನಂದಿಮಠ, ಪ್ರಭಾವತಿ ಮಾಲಿಪಾಟೀಲ, ಶೃತಿ ಹೂಗಾರ, ಮುರ್ತುಬಿಬೇಗಂ ಬಿರಾದಾರ, ಲಕ್ಷ್ಮೀ ಕೆಸರಗೊಪ್ಪ, ಚೈತ್ರಾ ನಿರಂಬಳ್ಳಿ, ಪ್ರಿಯಾಂಕಾ ಬ್ಯಾಕೋಡ, ಮಂಗಳಾ ಈಳಗೇರ, ದಾನಮ್ಮ ಜೋಗೂರ, ಮಮತಾ ಹರನಾಳ, ನಾಗಯ್ಯ ಹಿರೇಮಠ ಮತ್ತು ಮುದ್ದು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಇದ್ದರು.

ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ವಿದ್ಯಾ ರುಕುಂಪುರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್‌.ಎಂ. ಪೂಜಾರಿ ಸ್ವಾಗತಿಸಿದರು. ವಿದ್ಯಾ ಕಡಲಗೊಂಡ ಹಾಗೂ ಪವಿತ್ರಾ ದಿಗಸಂಗ ನಿರೂಪಿಸಿದರು. ನಜ್ಮಾ ಮಣೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next