Advertisement

ಪಠ್ಯ ಪರಿಷ್ಕರಣೆ : ಸಿಎಂಗೆ ವರದಿ ಸಲ್ಲಿಸಿದ ಶಿಕ್ಷಣ ಸಚಿವ

12:29 PM Jun 01, 2022 | Team Udayavani |

ಬೆಂಗಳೂರು :  ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸೃಷ್ಟಿಯಾಗಿದ್ದ ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡಿ ಶಿಕ್ಷಣ ಸಚಿವರ ಕಚೇರಿಯಿಂದ ಸಿಎಂ ಬೊಮ್ಮಾಯಿ ಕಾರ್ಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.

Advertisement

ಗುಜರಾತ್ ನಲ್ಲಿ ನಡೆಯುತ್ತಿರುವ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುವುದಕ್ಕೆ ಮುನ್ನ ಈ ವರದಿಯನ್ನು ಸಿಎಂ ಕಚೇರಿಗೆ ಕಳುಹಿಸಲಾಗಿದೆ. ಬೊಮ್ಮಾಯಿ ಅವರು ಬೆಂಗಳೂರಿಗೆ ವಾಪಾಸ್ ಆದ ಬಳಿಕ ಈ ವರದಿಯತ್ತ ಚಿತ್ತ ಹರಿಸಲಿದ್ದಾರೆ.

ಇದನ್ನೂ ಓದಿ:ಪಠ್ಯ ಪರಿಷ್ಕರಣೆಯ ವಾಸ್ತವಾಂಶದ ಆಧಾರದಲ್ಲಿ ನಾಳೆಯೇ ಸೂಕ್ತ ನಿರ್ಧಾರ: ಸಿಎಂ ಬೊಮ್ಮಾಯಿ

ಭಗತ್ ಸಿಂಗ್, ನಾರಾಯಣಗುರು ಕುರಿತಾದ ವಿವಾದಗಳಿಗೆ ಈ ವರದಿಯಲ್ಲಿ ಸ್ಪಷ್ಟನೆ ನೀಡಲಾಗಿದೆ. ಜತೆಗೆ ಕುವೆಂಪು ವಿಚಾರದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಸೇರಿದಂತೆ ಅನೇಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ.

ಪರಿಷ್ಕರಣೆ :

Advertisement

ಇದರ ಜತೆಗೆ ಪಿಯುಸಿ ದ್ವಿತೀಯ ವರ್ಷದ ಸಮಾಜ ವಿಜ್ಞಾನದ‌ ಒಂದು ಪಾಠವನ್ನೂ ಬದಲಾಯಿಸಲಾಗಿದೆ. ಒಂದು ಸಮುದಾಯದ ಭಾವನೆಗೆ ಧಕ್ಕೆ ಪಡಿಸುವಂತಿದ್ದ ಹೊಸಧರ್ಮಗಳ ಉದಯ ಪಾಠದ ಆಕ್ಷೇಪಾರ್ಹ ವಿಚಾರವನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next