Advertisement
ದೆಹಲಿಯಲ್ಲಿ ದಂತ ವೈದ್ಯಕೀಯ ಪದವಿ ಪಡೆದಿದ್ದ ಶಾಲಿನಿ, ಟೆಕ್ಸಾಸ್‌ನ ಎ ಆ್ಯಂಡ್ ಎಂ ವಿವಿಯಲ್ಲಿ ಸ್ನಾತಕೋತ್ತರ ಪದವಿಗಾಗಿ 2 ತಿಂಗಳ ಹಿಂದಷ್ಟೇ ಇಲ್ಲಿಗೆ ಆಗಮಿಸಿದ್ದರು. ಕಳೆದ ಶನಿವಾರ ಭಾರತೀಯ ವಿದ್ಯಾರ್ಥಿ ನಿಖೀಲ್ ಭಾಟಿಯಾ ಜೊತೆ ಬ್ರ್ಯಾನ್ ಸರೋವರದಲ್ಲಿ ಈಜಲು ತೆರಳಿದ್ದರು. ಒಮ್ಮೆಲೇ ಚಂಡಮಾರುತ ಅಪ್ಪಳಿಸಿ, ಇಬ್ಬರೂ ನೀರಿನಲ್ಲಿ ಮುಳುಗಿದ್ದರು. ಇಬ್ಬರನ್ನೂ ಕೂಡಲೇ ರಕ್ಷಿಸಿ ಚಿಕಿತ್ಸೆ ಕೊಡಿಸ ಲಾಗಿತ್ತು. ನಿಖೀಲ್ ಮರುದಿನವೇ ಮೃತರಾದರು. ಶಾಲಿನಿ ವೈದ್ಯೆಯಾಗುವ ಕನಸು ಕಂಡಿದ್ದಳು. ಪರಿಶ್ರಮದಿಂದ ಟೆಕ್ಸಾಸ್‌ನಲ್ಲಿ ಪದವಿಗೆ ಪ್ರವೇಶ ಪಡೆದಿದ್ದಳು. ಆದರೆ ಅವಳು ಭಾರತದಿಂದ ಹೊರಟ 2 ತಿಂಗಳಲ್ಲಿ ಈ ಲೋಕವನ್ನೇ ಬಿಟ್ಟು ಹೋಗಿದ್ದಾಳೆ ಎಂದು ಅವರ ತಂದೆ ಕಣ್ಣೀರು ಹರಿಸಿದ್ದಾರೆ. Advertisement
ಟೆಕ್ಸಾಸ್ ನೆರೆ: ಭಾರತೀಯ ವಿದ್ಯಾರ್ಥಿನಿ ಸಾವು
07:20 AM Sep 05, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.