ನವದೆಹಲಿ: ಭಾರತೀಯ ರೈಲ್ವೆಯನ್ನು 2023ರ ಅಂತ್ಯದ ಹೊತ್ತಿಗೆ ಸಂಪೂರ್ಣ ವಿದ್ಯುತ್ ಚಾಲಿತ ಮಾಡಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ.
ಇದರ ಮಧ್ಯೆ ರೈಲ್ವೆ ಎಂಜಿನ್‌ಗಳಿಗೆ ಜೈವಿಕ ಡೀಸೆಲ್ ಬಳಸುತ್ತೇವೆ ಎಂಬ ಮಾಹಿತಿಯನ್ನು ರೈಲ್ವೆ ಇಲಾಖೆ, ಸಂಸತ್ತಿಗೆ ನೀಡಿದೆ.
ಆರ್‌ಡಿಎಸ್‌ಒದಿಂದ ಆಯ್ದ ರೈಲುಗಳಿಗೆ ಜೈವಿಕ ಡೀಸೆಲ್ ಬಳಸಿ ಪರೀಕ್ಷಾರ್ಥ ಪ್ರಯಾಣವೂ ನಡೆಯುತ್ತಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಕಡ್ಡಾಯಗೊಳ್ಳಲೂಬಹುದು. ಇದರಿಂದ ಬಹಳ ಲಾಭಗಳಿವೆ.
ಇದನ್ನೂ ಓದಿ:ಮುಂಬೈಗೆ ಸತತ ಆರನೇ ಸೋಲು : ಪೂರ್ಣ ಜವಾಬ್ದಾರಿ ನನ್ನದೆಂದ ರೋಹಿತ್ ಶರ್ಮಾ
ರೈಲ್ವೆ ಎಂಜಿನ್ನುಗಳು ಹೊಗೆಯುಗುಳುವುದಿಲ್ಲ. ಮಾಲಿನ್ಯನಿಯಂತ್ರಣವಾಗುತ್ತದೆ. ಮಾಮೂಲಿ ಡೀಸೆಲ್ ಅನ್ನು ಆಮದು ಮಾಡಿಕೊಳ್ಳಲು ಸಾವಿರಾರು ಕೋಟಿ ರೂ. ವ್ಯಯಿಸುವ ದುಸ್ಥಿತಿಯಿಂದಲೂ ಪಾರಾಗಬಹುದು.