ಹೊಸದಿಲ್ಲಿ: ಒಮಿಕ್ರಾನ್ ಹಾವಳಿ ಹಿನ್ನೆಲೆಯಲ್ಲಿ “ಅತೀ ಅಪಾಯಕಾರಿ’ ಎಂದು ವರ್ಗೀಕರಿಸಲಾದ ದೇಶಗಳಿಂದ ಬರುವ ಅಥವಾ ಆ ದೇಶಗಳನ್ನು ಹಾದುಬರುವ ವಿಮಾನ ಯಾನಿಗಳು ಭಾರತದಲ್ಲಿ ಇಳಿದೊಡನೆಯೇ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು.
ಪರೀಕ್ಷಾ ವರದಿ ಬಾರದೆ ವಿಮಾನ ನಿಲ್ದಾಣದಿಂದ ಹೊರಬರುವಂತಿಲ್ಲ ಅಥವಾ ಇನ್ನೊಂದು ವಿಮಾನ ಏರುವಂತಿಲ್ಲ ಎಂದು ಕೇಂದ್ರ ಸರಕಾರ ಹೊಸ ಮಾರ್ಗದರ್ಶಿ ಬಿಡುಗಡೆ ಮಾಡಿದೆ.
“ಅತೀ ಅಪಾಯಕಾರಿ’ ಪಟ್ಟಿಯಲ್ಲಿಲ್ಲದ ದೇಶಗಳಿಂದ ಬರುವವರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಾಗುತ್ತದೆ. ಆದರೆ ಅವರ ಮೇಲೆ 14 ದಿನ ನಿಗಾ ಇರಿಸ ಲಾಗುತ್ತದೆ.
ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು
ಇವರಲ್ಲಿ ಶೇ. 5 ಮಂದಿಯನ್ನು ವಿಮಾನ ನಿಲ್ದಾಣದಲ್ಲಿಯೇ ರ್‍ಯಾಂಡಮ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರ ಹೇಳಿದೆ.