Advertisement

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಪರೀಕ್ಷಿಸಿ 

07:00 AM May 05, 2018 | Team Udayavani |

ಮುಂದಿನ ಶನಿವಾರ ಅಂದರೆ, ಮೇ12 ಮತದಾನದ ದಿನ. ಯಾವೊಬ್ಬ ಮತದಾರನು ಹಕ್ಕು ಚಲಾಯಿಸುವಿಕೆಯಿಂದ ವಂಚಿತ ನಾಗ ಬಾರದೆಂದು ಚುನಾವಣಾ ಆಯೋಗ ಎಲ್ಲ ಕ್ರಮಗಳನ್ನು ಕೈಗೊಂಡಿದೆ, ಸಿದಟಛಿತೆಗಳನ್ನುಮಾಡಿಕೊಳ್ಳುತ್ತಿದೆ. ಆದಾಗ್ಯೂ “ಪ್ರತ್ಯಕ್ಷ ವಾಗಿ ನೋಡಿದರೂ ಪ್ರಮಾಣಿಸಿ ನೊಡಬೇಕು’ ಎಂಬಂತೆ ಮತ ದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು, ಇದ್ದರೆ ಸರಿಯಾಗಿ ದೇಯಾ, ನಿಮಗೆ ಸಿಕ್ಕಿರುವ ಮತದಾರರ ಗುರುತಿನ ಚೀಟಿಯಲ್ಲಿ ಎಲ್ಲವೂ ಸರಿ ಇದೆಯಾ, ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ರುವ ಹೆಸರು, ಕ್ರಮ ಸಂಖ್ಯೆ, ಮತಗಟ್ಟೆ ಸಂಖ್ಯೆ, ಸ್ಥಳ, ಭಾಗ ಸಂಖ್ಯೆಗೂ ಮತದಾರರ ಪಟ್ಟಿಯಲ್ಲಿರುವ ಮಾಹಿತಿಗೂ ತಾಳೆ ಆಗುತ್ತಿದೆಯಾ ಅನ್ನುವುದನ್ನು ಪರಿಶೀಲಿಸಿಕೊಳ್ಳಿ. 

Advertisement

ಏನಾದರೂ ಸಮಸ್ಯೆ, ಲೋಪಗಳಿದ್ದರೆ ಸರಿಪಡಿಸಿಕೊಳ್ಳಿ. ಇದಕ್ಕಾಗಿ ನಿಮ್ಮ ವಿಧಾನಸಭಾ ಕ್ಷೇತ್ರದ ಮತದಾರ ನೋಂದಣಿ ಅಧಿಕಾರಿ, ಸಹಾಯಕ ಮತದಾರ ನೋಂದಣಿ ಅಧಿಕಾರಿ, ಚುನಾವಣಾಧಿಕಾರಿ, ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ. ಇವರ ವಿಳಾಸ ಗೊತ್ತಿದ್ದರೆ ಖುದ್ದಾಗಿ ಭೇಟಿ ಮಾಡಿ. ಇಲ್ಲದಿದ್ದರೆ, ಮತದಾರರ ಪಟ್ಟಿ ಮತ್ತು ಅಧಿಕಾರಿಗಳ ಕಚೇರಿ ವಿಳಾಸ, ದೂರವಾಣಿ,ಮೊಬೈಲ್‌ 
ಸಂಖ್ಯೆಗಳನ್ನು //ceokarnatakatemp.kar.nic.in/ನಲ್ಲಿ ಕೊಡಲಾಗಿದೆ. ಈ ಮೂಲಕವೂ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.ಕೊನೇ ದಿನ, ಕೊನೇ ಘಳಿಗೆಯಲ್ಲಿ ಹೈರಾಣು ಆಗುವುದನ್ನು ತಪ್ಪಿಸಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next