Advertisement

ರಾಜ್ಯದಲ್ಲಿ ಶೇ.70.64 ದಾಖಲೆ ಮತದಾನ; 14 ಕ್ಷೇತ್ರಗಳ ಅಂತಿಮ ಮತದಾನ ಪ್ರಮಾಣ ಪ್ರಕಟ

12:18 AM May 09, 2024 | Team Udayavani |

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ (ಮೇ 7) ನಡೆದ ಮತದಾನದ ಅಂತಿಮ ಶೇಕಡವಾರು ಪ್ರಮಾಣ ಚುನಾವಣ ಆಯೋಗ ಬುಧವಾರ ಪ್ರಕಟಿಸಿದ್ದು, ಅದರಂತೆ ಶೇ.71.94 ದಾಖಲೆ ಮತದಾನ ಆಗಿದೆ.

Advertisement

ಮೊದಲ ಹಂತದಲ್ಲಿ ಶೇ.69.56ರಷ್ಟು ಮತದಾನವಾಗಿತ್ತು. ಅದರಂತೆ ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.70.64 ಮತದಾನವಾಗಿದೆ. ಇದು ಲೋಕಸಭಾ ಚುನಾವಣೆಗಳಲ್ಲಿನ ಈವರೆಗಿನ ದಾಖಲೆ ಪ್ರಮಾಣದ ಮತದಾನವಾಗಿದೆ.

ಎರಡನೇ ಹಂತದಲ್ಲಿ ಚಿಕ್ಕೋಡಿಯಲ್ಲಿ ಶೇ.78.66 ಅತಿ ಹೆಚ್ಚು ಮತದಾನವಾಗಿದ್ದು, ಕಲಬುರಗಿಯಲ್ಲಿ ಶೇ.62.25 ಅತಿ ಕಡಿಮೆ ಮತದಾನವಾಗಿದೆ. ಒಟ್ಟಾರೆ 28 ಕ್ಷೇತ್ರಗಳಲ್ಲಿ ಮಂಡ್ಯದಲ್ಲಿ ಅತಿ ಹೆಚ್ಚು ಶೇ.81.67ರಷ್ಟು ಮತದಾನವಾಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ, ಅಂದರೆ 53.17 ಮತದಾನ ಆಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಶೇ.68.81 ಮತದಾನ ಆಗಿತ್ತು. ಅದರಂತೆ ಕಳೆದ ಬಾರಿಗಿಂತ ಶೇ.1.83ರಷ್ಟು ಹೆಚ್ಚು ಮತದಾನವಾಗಿದೆ.

ಚಿಕ್ಕೋಡಿ 78.66
ಬೆಳಗಾವಿ 71.49
ಬಾಗಲಕೋಟೆ 72.66
ವಿಜಯಪುರ 66.32
ಕಲಬುರಗಿ 62.25
ರಾಯಚೂರು 64.66
ಬೀದರ್‌ 65.47
ಕೊಪ್ಪಳ 70.99
ಬಳ್ಳಾರಿ 73.59
ಹಾವೇರಿ 77.60
ಧಾರವಾಡ 74.37
ಉತ್ತರ ಕನ್ನಡ 76.53
ದಾವಣಗೆರೆ 76.99
ಶಿವಮೊಗ್ಗ 78.33
ಒಟ್ಟು 71.84

Advertisement

Udayavani is now on Telegram. Click here to join our channel and stay updated with the latest news.

Next