Advertisement

Test; ಶಾರ್ದೂಲ್‌ ಠಾಕೂರ್‌, ಗೆರಾಲ್ಡ್‌ ಕೋಟ್ಜಿ ಗಾಯಾಳು

11:35 PM Dec 30, 2023 | Team Udayavani |

ಸೆಂಚುರಿಯನ್‌: ನ್ಯೂ ಇಯರ್‌ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ, ದಕ್ಷಿಣ ಆಫ್ರಿಕಾ ತಂಡಗಳೆರ ಡಕ್ಕೂ ಗಾಯದ ಹೊಡೆತ ಎದುರಾಗಿದೆ. ಟೀಮ್‌ ಇಂಡಿಯಾದ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ಮತ್ತು ಆತಿಥೇಯ ತಂಡದ ವೇಗಿ ಗೆರಾಲ್ಡ್‌ ಕೋಟ್ಜಿ ಗಾಯಾಳಾಗಿದ್ದು, ದ್ವಿತೀಯ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಕಡಿಮೆ.

Advertisement

ಶಾದೂìಲ್‌ ಠಾಕೂರ್‌ ನೆಟ್ಸ್‌ ವೇಳೆ ಭುಜದ ನೋವಿಗೆ ಸಿಲುಕಿದ್ದಾರೆ. ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಠೊಡ್‌ ಎಸೆದ ಚೆಂಡು ಬ್ಯಾಟಿಂಗ್‌ ಮಾಡುತ್ತಿದ್ದ ಠಾಕೂರ್‌ ಅವರ ಎಡ ಭುಜಕ್ಕೆ ಹೋಗಿ ಅಪ್ಪಳಿಸಿತ್ತು.

23 ವರ್ಷದ ವೇಗಿ ಗೆರಾಲ್ಡ್‌ ಕೋಟ್ಜಿ ಜಠರದ ಉರಿಯೂತದಿಂದಾಗಿ ದ್ವಿತೀಯ ಟೆಸ್ಟ್‌ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next