Advertisement

India ವಿರುದ್ಧದ ಟೆಸ್ಟ್‌  ಸರಣಿ: ಇಂಗ್ಲೆಂಡ್‌ ತಂಡಕ್ಕೆ ಬ್ರೂಕ್‌ ಅಲಭ್ಯ

12:04 AM Jan 22, 2024 | Team Udayavani |

ಲಂಡನ್‌: ಭಾರತದ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಂಗ್ಲೆಂಡ್‌ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಹ್ಯಾರಿ ಬ್ರೂಕ್‌ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣದಿಂದ ಅವರು ತಮ್ಮ ತವರಿಗೆ ಮರಳಲಿದ್ದಾರೆ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ತಿಳಿಸಿದೆ.

Advertisement

ಬ್ರೂಕ್‌ ಅವರು ಸರಣಿಯ ಪೂರ್ವಸಿದ್ಧತಾ ಶಿಬಿರಕ್ಕಾಗಿ ತಂಡದೊಂದಿಗೆ ಅಬುಧಾಬಿಗೆ ತೆರಳಿದ್ದರು. ಆದರೆ ಅವರು ಇಂಗ್ಲೆಂಡ್‌ಗೆ ವಾಪಸಾಗುತ್ತಿದ್ದಾರೆ. ಗುರುವಾರದಿಂದ ಹೈದರಾಬಾದ್‌ನಲ್ಲಿ ಆರಂಭವಾಗುವ ಐದು ಪಂದ್ಯಗಳ ಟೆÓr… ಸರಣಿಗೆ ಬ್ರೂಕ್‌ ಅವರ ಸ್ಥಾನಕ್ಕೆ ಬದಲಿ ಆಟಗಾರರಾಗಿ ಡಾನ್‌ ಲಾರೆನ್ಸ್‌ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಇಸಿಬಿ ಹೇಳಿದೆ. ಬ್ರೂಕ್‌ ಅವರು ಇಲ್ಲಿಯವರೆಗೆ 12 ಟೆಸ್ಟ್‌ ಪಂದ್ಯಗಳಲ್ಲಿ 1181 ರನ್‌ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next