Advertisement

ಟೆಸ್ಟ್‌ ಶ್ರೇಯಾಂಕ: ಭಾರತಕ್ಕೆ ನಂ.1 ಸ್ಥಾನ ಅಬಾಧಿತ

06:30 AM Jan 29, 2018 | |

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-2 ರಿಂದ ಸರಣಿ ಸೋತರೂ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನ ಅಬಾಧಿತವಾಗಿದೆ. ಏ.3ರವರೆಗೂ ಭಾರತ ನಂ.1 ಸ್ಥಾನ ಕಾಯ್ದುಕೊಳ್ಳುವುದು ಖಚಿತವಾಗಿರುವುದರಿಂದ ಐಸಿಸಿ ಟೆಸ್ಟ್‌ ಟ್ರೋಫಿ ಭಾರತಕ್ಕೆ ದೊರೆಯಲಿದೆ.

Advertisement

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3ನೇ ಟೆಸ್ಟ್‌ನಲ್ಲಿ 63 ರನ್‌ಗಳಿಂದ ಜಯ ಸಾಧಿಸಿದೆ. ಹೀಗಾಗಿ ಭಾರತ ಟೆಸ್ಟ್‌ನಲ್ಲಿ ಒಟ್ಟು 121 ಅಂಕವನ್ನು ಸಂಪಾದಿಸಿದೆ. 115 ಅಂಕ ಸಂಪಾದಿಸಿರುವ ದಕ್ಷಿಣ ಆಫ್ರಿಕಾ ನಂ.2ನೇ ಸ್ಥಾನ, 104 ಅಂಕ ಸಂಪಾದಿಸಿರುವ ಆಸ್ಟ್ರೇಲಿಯಾ ನಂ.3ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next