Advertisement

ಟೆಸ್ಟ್‌ ಶ್ರೇಯಾಂಕ ಪ್ರಕಟ: ಭಾರತವೇ ನಂಬರ್‌ ವನ್‌ 

12:30 AM Dec 31, 2018 | |

ದುಬೈ: ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ ನೂತನ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ
ಅಗ್ರಸ್ಥಾನದಲ್ಲೇ ಮುಂದುವರಿದಿದೆ.

Advertisement

ಭಾನುವಾರ ಐಸಿಸಿ ಪ್ರಕಟಿಸಿರುವ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಭಾರತ 116 ಅಂಕದೊಂದಿಗೆ ಪಾರಮ್ಯ ಮುಂದು ವರಿಸಿದೆ. ಇಂಗ್ಲೆಂಡ್‌ 108 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಶ್ರೀಲಂಕಾ ವಿರುದಟಛಿ ಗೆದ್ದು, ಸತತ 4 ಟೆಸ್ಟ್‌ ಸರಣಿಗಳನ್ನು ಗೆದ್ದಿರುವ ನ್ಯೂಜಿಲೆಂಡ್‌ ಒಂದು ಸ್ಥಾನದ ಪ್ರಗತಿಯೊಂದಿಗೆ ಮೂರಕ್ಕೇರಿದೆ. ದಕ್ಷಿಣ ಆಫ್ರಿಕಾ ಒಂದು ಸ್ಥಾನ ಕೆಳಕ್ಕಿಳಿದಿದೆ.

ಪಾಕಿಸ್ತಾನ ವಿರುದ್ಧ ಟೆಸ್ಟ್‌ ಸರಣಿಯಲ್ಲಿ  1-0ಮುನ್ನಡೆಯಲ್ಲಿರುವ ದಕ್ಷಿಣ ಆಫ್ರಿಕಾ ಸದ್ಯ 4ನೇ ಸ್ಥಾನದಲ್ಲಿದ್ದು, ಪಾಕಿಸ್ತಾನ ವಿರುದ್ಧ ಸರಣಿ ಗೆದ್ದರೆ 2ನೇ ಸ್ಥಾನಕ್ಕೆ ಜಿಗಿಯುವ ಸಾಧ್ಯತೆ ಇದೆ.ಮೆಲ್ಬರ್ನ್ನಲ್ಲಿ ಎಡವಿದ ಆಸ್ಟ್ರೇಲಿಯ 5ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next