Advertisement

Test; ಬ್ರಾಡ್‌ಮನ್‌ ದಾಖಲೆ ಸರಿದೂಗಿಸಿದ ಮೆಂಡಿಸ್‌

01:35 AM Sep 28, 2024 | Team Udayavani |

ಗಾಲೆ: ಶ್ರೀಲಂಕಾದ ಕಮಿಂಡು ಮೆಂಡಿಸ್‌ ಕ್ರಿಕೆಟ್‌ ದಂತಕತೆ ಡೊನಾಲ್ಡ್‌ ಬ್ರಾಡ್‌ಮನ್‌ ಅವರ ದಾಖಲೆ ಯೊಂದನ್ನು ಸರಿದೂಗಿಸಿದ್ದಾರೆ. ಕೇವಲ 13 ಇನ್ನಿಂಗ್ಸ್‌ ಗಳಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿ ಬ್ರಾಡ್‌ಮನ್‌ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನಿಯಾಗಿದ್ದಾರೆ.

Advertisement

ಬ್ರಾಡ್‌ಮನ್‌ 1930ರ ಆ್ಯಶಸ್‌ ಸರಣಿಯ ಹೇಡಿಂಗ್ಲೆ ಟೆಸ್ಟ್‌ನಲ್ಲಿ ಈ ಸಾಧನೆಗೈದಿದ್ದರು. ಇಂಗ್ಲೆಂಡ್‌ನ‌ ಹರ್ಬಟ್‌ ಸಟ್‌ಕ್ಲಿಫ್ ಮತ್ತು ವೆಸ್ಟ್‌ ಇಂಡೀಸ್‌ನ ಎವರ್ಟನ್‌ ವೀಕ್ಸ್‌ ಜಂಟಿ ಅಗ್ರಸ್ಥಾನದಲ್ಲಿದ್ದಾರೆ (12 ಇನ್ನಿಂಗ್ಸ್‌).
ನ್ಯೂಜಿಲ್ಯಾಂಡ್‌ ಎದುರಿನ ಗಾಲೆ ಟೆಸ್ಟ್‌ ಪಂದ್ಯದ 2ನೇ ದಿನ ಈ ದಾಖಲೆ ನಿರ್ಮಾಣಗೊಂಡಿತು. ಶ್ರೀಲಂಕಾ 5 ವಿಕೆಟಿಗೆ 602 ರನ್‌ ಪೇರಿಸಿ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದೆ. ಕಮಿಂಡು ಮೆಂಡಿಸ್‌ 182 ರನ್‌ ಬಾರಿಸಿ ಅಜೇಯರಾಗಿ ಉಳಿದರು (250 ಎಸೆತ, 16 ಬೌಂಡರಿ, 4 ಸಿಕ್ಸರ್‌). ಕುಸಲ್‌ ಮೆಂಡಿಸ್‌ ಅಜೇಯ 106 ರನ್‌ ಹೊಡೆದರು. ಇವರ ಶತಕ ಪೂರ್ತಿಯಾದೊಡನೆ ಲಂಕಾ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು.

ಲಂಕಾ ಸರದಿಯಲ್ಲಿ ಒಟ್ಟು ಮೂವ ರಿಂದ ಸೆಂಚುರಿ ದಾಖಲಾಯಿತು. ಮೊದಲ ದಿನ ದಿನೇಶ್‌ ಚಂಡಿಮಾಲ್‌ 116 ರನ್‌ ಹೊಡೆದಿದ್ದರು. ನಿನ್ನೆಯ ಮತ್ತೋರ್ವ ನಾಟೌಟ್‌ ಬ್ಯಾಟರ್‌ ಏಂಜೆಲೊ ಮ್ಯಾಥ್ಯೂಸ್‌ ಅವರಿಗೆ ಸೆಂಚುರಿ ತಪ್ಪಿತು (88). ನ್ಯೂಜಿಲ್ಯಾಂಡ್‌ 22 ರನ್ನಿಗೆ 2 ವಿಕೆಟ್‌ ಕಳೆದುಕೊಂಡು ಸಂಕಟಕ್ಕೆ ಸಿಲುಕಿದೆ.

Advertisement

Udayavani is now on Telegram. Click here to join our channel and stay updated with the latest news.

Next