Advertisement
ಬ್ರಾಡ್‌ಮನ್ 1930ರ ಆ್ಯಶಸ್ ಸರಣಿಯ ಹೇಡಿಂಗ್ಲೆ ಟೆಸ್ಟ್‌ನಲ್ಲಿ ಈ ಸಾಧನೆಗೈದಿದ್ದರು. ಇಂಗ್ಲೆಂಡ್‌ನ ಹರ್ಬಟ್ ಸಟ್‌ಕ್ಲಿಫ್ ಮತ್ತು ವೆಸ್ಟ್ ಇಂಡೀಸ್‌ನ ಎವರ್ಟನ್ ವೀಕ್ಸ್ ಜಂಟಿ ಅಗ್ರಸ್ಥಾನದಲ್ಲಿದ್ದಾರೆ (12 ಇನ್ನಿಂಗ್ಸ್).ನ್ಯೂಜಿಲ್ಯಾಂಡ್ ಎದುರಿನ ಗಾಲೆ ಟೆಸ್ಟ್ ಪಂದ್ಯದ 2ನೇ ದಿನ ಈ ದಾಖಲೆ ನಿರ್ಮಾಣಗೊಂಡಿತು. ಶ್ರೀಲಂಕಾ 5 ವಿಕೆಟಿಗೆ 602 ರನ್ ಪೇರಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. ಕಮಿಂಡು ಮೆಂಡಿಸ್ 182 ರನ್ ಬಾರಿಸಿ ಅಜೇಯರಾಗಿ ಉಳಿದರು (250 ಎಸೆತ, 16 ಬೌಂಡರಿ, 4 ಸಿಕ್ಸರ್). ಕುಸಲ್ ಮೆಂಡಿಸ್ ಅಜೇಯ 106 ರನ್ ಹೊಡೆದರು. ಇವರ ಶತಕ ಪೂರ್ತಿಯಾದೊಡನೆ ಲಂಕಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು.