Advertisement

Test in South Africa: ವೇಗಕ್ಕೆ ಎದೆಯೊಡ್ಡಿ ನಿಲ್ಲಬೇಕಿದೆ ರೋಹಿತ್‌ ಪಡೆ

10:49 PM Dec 25, 2023 | Team Udayavani |

ಸೆಂಚುರಿಯನ್‌: ಟೀಮ್‌ ಇಂಡಿಯಾ “ಜೀವಮಾನದ ಮಹಾ ಘಾತ’ಕ್ಕೆ ಸಿಲುಕಿ 36 ದಿನಗಳು ಉರು ಳಿದ ಬಳಿಕ ಕ್ಯಾಪ್ಟನ್‌ ರೋಹಿತ್‌ ಶರ್ಮ ಮತ್ತು ಟೀಮ್‌ ಇಂಡಿಯಾ ಹೊಸತೊಂದು ಸವಾಲಿಗೆ ಸಜ್ಜಾಗ ಬೇಕಿದೆ. ಅದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿ. ಕಾಮನಬಿಲ್ಲಿನ ನಾಡಿನ ಸೆಂಚುರಿಯನ್‌ನಲ್ಲಿ ಮಂಗಳ ವಾರ “ಬಾಕ್ಸಿಂಗ್‌ ಡೇ ಟೆಸ್ಟ್‌’ ಆರಂಭ ವಾಗಲಿದ್ದು, 3ನೇ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆವೃತ್ತಿಗೆ ಇತ್ತಂಡ ಗಳೂ ನಾಂದಿ ಹಾಡಲಿವೆ.
ಆದರೆ ಭಾರತದ ಪಾಲಿಗೆ ಇದು ಮಹತ್ವದ್ದಾಗಿ ಪರಿಣಮಿಸಲು ಬೇರೆಯೇ ಕಾರಣವಿದೆ. ದಕ್ಷಿಣ ಆಫ್ರಿಕಾ  ದಲ್ಲಿ ಕಳೆದ 31 ವರ್ಷಗಳಿಂದ, ಅಂದರೆ 1992ರಿಂದ ಟೆಸ್ಟ್‌ ಪಂದ್ಯ ಗಳನ್ನು ಆಡುತ್ತ ಬಂದಿರುವ ಭಾರತ, ಈವರೆಗೆ ಒಮ್ಮೆಯೂ ಸರಣಿ ಜಯಿ ಸಿಲ್ಲ. ಈ ಕಾಯುವಿಕೆ ಅಂತ್ಯ  ಗೊಂಡೀತೇ ಎಂಬುದೊಂದು ನಿರೀಕ್ಷೆ.
ದಕ್ಷಿಣ ಆಫ್ರಿಕಾದಲ್ಲಿ ಆಡಿದ 22 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ನಾಲ್ಕನ್ನು ಜಯಿಸಿದೆ. 7 ಸಲ ಸರಣಿ ಸೋತಿದೆ. 2010-11ರ 2 ಪಂದ್ಯಗಳ ಸರಣಿ 1-1ರಿಂದ ಸಮನಾಗಿತ್ತು.

Advertisement

ಮೊದಲೆರಡು ದಿನ ಮಳೆ?
ಇದು ಕೇವಲ 2 ಪಂದ್ಯಗಳ ಟೆಸ್ಟ್‌ ಸರಣಿ. ಇಲ್ಲಿನ “ಸೂಪರ್‌ನ್ಪೋರ್ಟ್‌ ಪಾರ್ಕ್‌’ನಲ್ಲಿ ಮೊದಲ ಮುಖಾ ಮುಖೀ ನಡೆಯಲಿದೆ. ಆದರೆ ಪಂದ್ಯದ ಮೊದಲೆರಡು ದಿನ ಭಾರೀ ಮಳೆ ಆಗಲಿದೆ ಎಂಬ ವರದಿ ಕ್ರಿಕೆಟ್‌ ಅಭಿಮಾನಿಗಳನ್ನು ನಿರಾಸೆಗೆ ತಳ್ಳಿದೆ. ಹೀಗಾಗಿ ಪಂದ್ಯಕ್ಕೆ 3 ದಿನಗಳ ಅವಧಿಯಷ್ಟೇ ಲಭಿಸಲಿದೆ ಎಂಬುದು ಈಗಿನ ಲೆಕ್ಕಾಚಾರ. ಆದರೆ ಇಲ್ಲಿನ ಬೌನ್ಸಿ ಟ್ರ್ಯಾಕ್‌, ಶೀತಗಾಳಿ, ಅಂಗಳದ ಸ್ಥಿತಿಯನ್ನು ಗಮನಿಸಿದರೆ ಸ್ಪಷ್ಟ ಫ‌ಲಿತಾಂಶಕ್ಕೆ ಮೂರೇ ದಿನ ಸಾಕಾದೀತು ಅನಿಸುತ್ತದೆ!

ನಾಲ್ವರು ವೇಗಿಗಳ ದಾಳಿ
ಸೆಂಚುರಿಯನ್‌ ಟ್ರ್ಯಾಕ್‌ ಮೇಲೆ ನಾಲ್ವರು ವೇಗಿಗಳಿಂದ ದಾಳಿ ಸಂಘ ಟಿ ಸುವುದು ಇತ್ತಂಡಗಳ ಯೋಜನೆ. ಭಾರತದ ವೇಗದ ಬೌಲಿಂಗ್‌ ವಿಭಾಗ ಬುಮ್ರಾ, ಸಿರಾಜ್‌, ಮುಕೇಶ್‌ ಕುಮಾರ್‌, ಪ್ರಸಿದ್ಧ್ ಕೃಷ್ಣ ಮತ್ತು ಶಾದೂìಲ್‌ ಠಾಕೂರ್‌ ಅವರನ್ನು ನೆಚ್ಚಿ  ಕೊಂಡಿದೆ. ಏಕೈಕ ಸ್ಪೆಷಲಿಸ್ಟ್‌ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಇದ್ದಾರೆ. ರವೀಂದ್ರ ಜಡೇಜ ಸ್ಪಿನ್‌ ಬೌಲಿಂಗ್‌ ಆಲ್‌  ರೌಂಡರ್‌ ಆಗಿ ದ್ದಾರೆ. ಅಶ್ವಿ‌ನ್‌- ಠಾಕೂರ್‌ ನಡುವೆ ಸ್ಪರ್ಧೆ ಏರ್ಪಡ ಬಹುದು. ನೆಟ್ಸ್‌ನಲ್ಲಿ ಹೆಚ್ಚು ವೇಳೆ ಕಳೆ ದರೂ ಮುಕೇಶ್‌ ಆಡುವ ಸಾಧ್ಯತೆ ಕಡಿಮೆ. “ಎಕ್ಸ್‌ಟ್ರಾ ಬೌನ್ಸ್‌’ ಮಾನ ದಂಡ  ದಂತೆ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಅದೃಷ್ಟ ಶಾಲಿ ಎನಿಸಿಯಾರು. ಮೊಹಮ್ಮದ್‌ ಶಮಿ ಗಾಯಾಳಾಗಿ ಸರಣಿ  ಯಿಂದಲೇ ಬೇರ್ಪಟ್ಟದ್ದು ಭಾರತಕ್ಕೆ ಎದುರಾದ ದೊಡ್ಡ ಹೊಡೆತ.

ರೋಹಿತ್‌-ಜೈಸ್ವಾಲ್‌ ಭಾರತದ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಹೆಚ್ಚು. ಆಗ ಗಿಲ್‌ ವನ್‌ಡೌನ್‌ ನಲ್ಲಿ ಬರ ಬೇಕಾಗು ತ್ತದೆ. ಕೊಹ್ಲಿ, ಕೆ.ಎಲ್‌. ರಾಹುಲ್‌, ಅಯ್ಯರ್‌ ಅವರಿಂದ ಬ್ಯಾಟಿಂಗ್‌ ಸರದಿ ಮುಂದು ವರಿಯ ಲಿದೆ. ರಾಹುಲ್‌ ಕೀಪಿಂಗ್‌ ಜವಾಬ್ದಾರಿ ವಹಿ ಸು ವುದರಿಂದ ಕೆ.ಎಸ್‌. ಭರತ್‌ಗೆ ಸ್ಥಾನ ಲಭಿಸದು. ಯಾರೇ ಆಡಿದರೂ ವೇಗಕ್ಕೆ ಎದೆಯೊಡ್ಡಿ ನಿಲ್ಲುವುದು ಮುಖ್ಯ.

ಇವರಲ್ಲಿ ರೋಹಿತ್‌, ಕೊಹ್ಲಿ, ಅಶ್ವಿ‌ನ್‌, ಜಡೇಜ ಪಾಲಿಗೆ ಇದು ಕೊನೆಯ “ಆಫ್ರಿಕನ್‌ ಸಫಾರಿ’. ಹೀಗಾಗಿ ಇವರೆಲ್ಲರ ಪಾಲಿಗೆ ಸರಣಿ ಗೆಲುವಿಗಿಂತ ಮಿಗಿಲಾದ  ಉಡುಗೊರೆ ಬೇರೊಂದಿರದು. ಏಕದಿನ ಸರಣಿ ಗೆದ್ದ, ಟಿ20 ಸರಣಿ ಯನ್ನು ಸಮಬಲಗೊಳಿಸಿದ ಸಾಧನೆ ಭಾರತೀಯರ ಟೆಸ್ಟ್‌ ಯಶಸ್ಸಿಗೆ ಸ್ಫೂರ್ತಿ ಆಗಬೇಕಿದೆ.

Advertisement

ಮೇಲ್ದರ್ಜೆಯ ಬೌಲಿಂಗ್‌
ಟೆಂಬ ಬವುಮ ನೇತೃತ್ವದ ದಕ್ಷಿಣ ಆಫ್ರಿಕಾ ಮೇಲ್ದರ್ಜೆಯ ವೇಗಿ ಗಳನ್ನು ಹೊಂದಿದೆ. ಕಾಗಿಸೊ ರಬಾಡ, ಲುಂಗಿ ಎನ್‌ಗಿಡಿ, ಮಾರ್ಕೊ ಜಾನ್ಸೆನ್‌, ಗೆರಾಲ್ಡ್‌ ಕೋಟಿj ಅವರೆಲ್ಲ ತವರಿನಂಗಳದಲ್ಲಿ ಅತ್ಯಂತ ಅಪಾಯ ಕಾರಿ ಯಾಗಬಲ್ಲರು. ಹೀಗಾಗಿ ಜೈಸ್ವಾಲ್‌, ಗಿಲ್‌ ಮತ್ತು ಅಯ್ಯರ್‌ ಪಾಲಿಗೆ ಇದೊಂದು “ರಿಯಲ್‌ ಟೆಸ್ಟ್‌’ ಆಗ ಲಿದೆ. ಜೈಸ್ವಾಲ್‌ ಮತ್ತು ಗಿಲ್‌ ತಮ್ಮ ಬ್ಯಾಟಿಂಗ್‌ ಶೈಲಿಯನ್ನು ಬದಲಿಸಿ ಕೊಳ್ಳ ಬೇಕಾದ ಅಗತ್ಯವಿದೆ ಎಂಬುದು ಕೋಚ್‌ ರಾಹುಲ್‌ ದ್ರಾವಿಡ್‌ ನೀಡಿರುವ ಸಲಹೆ.

ಎಲ್ಗರ್‌, ಝೋರ್ಜಿ, ಮಾರ್ಕ್‌ ರಮ್‌, ಬವುಮ, ಪೀಟರ್‌ಸನ್‌, ಬೇಡಿಂಗ್‌ಹ್ಯಾಮ್‌ ಮತ್ತು ಕೀಪರ್‌ ವೆರೇಯ್ನ ಆತಿಥೇಯರ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್‌

 ಭಾರತ ಈವರೆಗೆ 17 ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯಗಳನ್ನು ಆಡಿದೆ. ನಾಲ್ಕನ್ನು ಜಯಿಸಿದೆ, ಹತ್ತರಲ್ಲಿ ಸೋತಿದೆ. ಉಳಿದ 3 ಪಂದ್ಯಗಳು ಡ್ರಾಗೊಂಡಿವೆ.
 ಭಾರತ ಕೊನೆಯ ಸಲ ಬಾಕ್ಸಿಂಗ್‌ ಡೇ ಟೆಸ್ಟ್‌ ಜಯಿಸಿದ್ದು 2021ರಲ್ಲಿ. ಎದುರಾಳಿ ದಕ್ಷಿಣ ಆಫ್ರಿಕಾ, ಸ್ಥಳ ಸೆಂಚುರಿಯನ್‌, ಅಂತರ 113 ರನ್‌.
 ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವೊಂದರಲ್ಲಿ ಅತ್ಯಧಿಕ ರನ್‌ ಬಾರಿಸಿದ ಭಾರತದ ದಾಖಲೆ ವೀರೇಂದ್ರ ಸೆಹವಾಗ್‌ ಹೆಸರಲ್ಲಿದೆ. 2003ರ ಆಸ್ಟ್ರೇಲಿಯ ಎದುರಿನ ಮೆಲ್ಬರ್ನ್ ಪಂದ್ಯದಲ್ಲಿ ಅವರು 195 ರನ್‌ ಮಾಡಿದ್ದರು.
 ಜಸ್‌ಪ್ರೀತ್‌ ಬುಮ್ರಾ ಭಾರತದ ಅತ್ಯುತ್ತಮ ಬೌಲಿಂಗ್‌ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯ ವಿರುದ್ಧದ 2018ರ ಮೆಲ್ಬರ್ನ್ ಪಂದ್ಯದಲ್ಲಿ ಅವರು 33ಕ್ಕೆ 6 ವಿಕೆಟ್‌ ಕೆಡವಿದ್ದರು.
 1950-51ರ ಆ್ಯಶಸ್‌ ಸರಣಿಯ ದ್ವಿತೀಯ ಪಂದ್ಯ, ಬಾಕ್ಸಿಂಗ್‌ ಡೇ ಇತಿಹಾಸದ ಮೊದಲ ಟೆಸ್ಟ್‌ ಆಗಿದೆ. ಮೆಲ್ಬರ್ನ್ನಲ್ಲಿ ನಡೆದ ಈ ಪಂದ್ಯವನ್ನು ಆಸ್ಟ್ರೇಲಿಯ 28 ರನ್ನುಗಳಿಂದ ಜಯಿಸಿತ್ತು.
 ಆಸ್ಟ್ರೇಲಿಯ ಅತ್ಯಧಿಕ 47 ಬಾಕ್ಸಿಂಗ್‌ ಡೇ ಟೆಸ್ಟ್‌ಗಳನ್ನು ಆಡಿದೆ. 28 ಜಯ, 10, ಸೋಲು, 9 ಡ್ರಾಗೊಂಡಿದೆ.

ಟೆಸ್ಟ್‌ ತಂಡಗಳು
ಭಾರತ
ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ರವೀಂದ್ರ ಜಡೇಜ, ಆರ್‌. ಆಶ್ವಿ‌ನ್‌, ಶಾದೂìಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಮುಕೇಶ್‌ ಕುಮಾರ್‌, ಪ್ರಸಿದ್ಧ್ ಕೃಷ್ಣ, ಕೆ.ಎಸ್‌. ಭರತ್‌, ಅಭಿಮನ್ಯು ಮಿಥುನ್‌ (2ನೇ ಟೆಸ್ಟ್‌ಗೆ).
ದಕ್ಷಿಣ ಆಫ್ರಿಕಾ
ಟೆಂಬ ಬವುಮ (ನಾಯಕ), ಐಡನ್‌ ಮಾರ್ಕ್‌ ರಮ್‌, ಟೋನಿ ಡಿ ಝೋರ್ಜಿ, ಡೀನ್‌ ಎಲ್ಗರ್‌, ಕೀಗನ್‌ ಪೀಟರ್‌ಸನ್‌, ಕೈಲ್‌ ವೆರೇಯ್ನ, ಟ್ರಿಸ್ಟನ್‌ ಸ್ಟಬ್ಸ್, ಮಾಂಡ್ರೆ ಬರ್ಗರ್‌, ಮಾರ್ಕೊ ಜಾನ್ಸನ್‌, ವಿಯಾನ್‌ ಮುಲ್ಡರ್‌, ಗೆರಾಲ್ಡ್‌ ಕೋಟಿj, ಕೇಶವ್‌ ಮಹಾರಾಜ್‌, ಕಾಗಿಸೊ ರಬಾಡ, ಲುಂಗಿ ಎನ್‌ಗಿಡಿ, ಡೇವಿಡ್‌ ಬೇಡಿಂಗ್‌ಹ್ಯಾಮ್‌.

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಸಾಧನೆ
ವರ್ಷ ವಿಜೇತರು ಅಂತರ
1992-93 ದಕ್ಷಿಣ ಆಫ್ರಿಕಾ 1-0 (4)
1996-97 ದಕ್ಷಿಣ ಆಫ್ರಿಕಾ 2-0 (3)
2001-02 ದಕ್ಷಿಣ ಆಫ್ರಿಕಾ 1-0 (2)
2006-07 ದಕ್ಷಿಣ ಆಫ್ರಿಕಾ 2-1 (3)
2010-11 ಡ್ರಾ 1-1 (2)
2013-14 ದಕ್ಷಿಣ ಆಫ್ರಿಕಾ 1-0 (2)
2017-18 ದಕ್ಷಿಣ ಆಫ್ರಿಕಾ 2-1 (3)
2021-22 ದಕ್ಷಿಣ ಆಫ್ರಿಕಾ 2-1 (3)

“ಕಳೆದ 31 ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ಭಾರತದ ಹಿಂದಿನ ಯಾವುದೇ ಟೆಸ್ಟ್‌ ತಂಡಗಳು ಗೈದಿರದ ಸಾಧನೆಯನ್ನು ನಾವು ಮಾಡಬೇಕಿದೆ’ – ರೋಹಿತ್‌ ಶರ್ಮ

 ಆರಂಭ: ಅ. 1.30
 ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್
ಟೆಸ್ಟ್‌ ಮುಖಾಮುಖಿ
 ಪಂದ್ಯ: 42
 ಭಾರತ ಜಯ: 15
 ದಕ್ಷಿಣ ಆಫ್ರಿಕಾ ಜಯ: 17
 ಡ್ರಾ: 10

Advertisement

Udayavani is now on Telegram. Click here to join our channel and stay updated with the latest news.

Next