Advertisement

ಕರುಣ್‌ ನಾಯರ್‌ಗಾಗಿ ರಹಾನೆಯನ್ನು ಹೊರಗಿಡುವ ಪ್ರಶ್ನೆಯೇ ಇಲ್ಲ

12:04 PM Mar 03, 2017 | Harsha Rao |

ಬೆಂಗಳೂರು: ಕರುಣ್‌ ನಾಯರ್‌ ಅವರ ಒಂದು ತ್ರಿಶತಕ ಎನ್ನುವುದು ಅಜಿಂಕ್ಯ ರಹಾನೆಯವರ 2 ವರ್ಷಗಳ ಯಶಸ್ಸನ್ನು ಮಸುಕಾಗಿ ಸದು ಎಂಬುದಾಗಿ ಟೀಮ್‌ ಇಂಡಿಯಾ ಕೋಚ್‌ ಅನಿಲ್‌ ಕುಂಬ್ಳೆ ಹೇಳಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ನಡೆಯ ಲಿರುವ ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯಕ್ಕೆ ತವರಿನ ನಾಯರ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದೂರಾಗಿದೆ. 

Advertisement

“ಅನುಭವಿ ರಹಾನೆಯನ್ನು ತಂಡದಿಂದ ಹೊರಗಿರಿಸುವ ಪ್ರಶ್ನೆಯೇ ಇಲ್ಲ. ಕಳೆದೆರಡು ಋತುಗಳಲ್ಲಿ ಅವರು ಉತ್ತಮ ಯಶಸ್ಸು ಕಾಣುತ್ತ ಬಂದಿದ್ದಾರೆ. ಇಷ್ಟಕ್ಕೂ ತಂಡದ ಕಾಂಬಿನೇಶನ್‌ ಬಗ್ಗೆ ನಾವಿನ್ನೂ ಚರ್ಚೆಯನ್ನೇ ನಡೆಸಿಲ್ಲ. ಎಲ್ಲ 16 ಮಂದಿ ಆಟಗಾರರೂ ಆಯ್ಕೆಗೆ ಲಭ್ಯರಿದ್ದಾರೆ’ ಎಂದು ಕುಂಬ್ಳೆ ಗುರುವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

“ತ್ರಿಶತಕ ಬಾರಿಸಿದ ಬಳಿಕವೂ ಕರುಣ್‌ ನಾಯರ್‌ ಹನ್ನೊಂದರ ಬಳಗದಿಂದ ಹೊರಗುಳಿಯಬೇಕಾದದ್ದು ನಿಜಕ್ಕೂ ದುರದೃಷ್ಟ. ಆದರೆ ನಾವೀಗ 5 ಮಂದಿ ಸ್ಪೆಷಲಿಸ್ಟ್‌ ಬೌಲರ್‌ಗಳನ್ನು ಆಡಿಸುವುದರಿಂದ ಹೆಚ್ಚು ವರಿ ಬ್ಯಾಟ್ಸ್‌ಮನ್‌ ಸೇರ್ಪಡೆ ಸಾಧ್ಯವಾಗುತ್ತಿಲ್ಲ. ಆದರೆ ತಂಡದಲ್ಲಿ ಇಂಥ ಆಯ್ಕೆಗಳಿಗೆ ಅವಕಾಶ ಹಾಗೂ ಸ್ಪರ್ಧೆ ಇರುವುದು ಒಳ್ಳೆಯ ಲಕ್ಷಣ…’ ಎಂದರು.

ಹಾಗಾದರೆ ಬೆಂಗಳೂರು ಟೆಸ್ಟ್‌ ನಲ್ಲೂ ಐವರು ಸ್ಪೆಷಲಿಸ್ಟ್‌ ಬೌಲರ್‌ ಗಳಿರುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿ ಸಿದ ಕುಂಬ್ಳೆ, “ಸೂಕ್ತ ಕಾಂಬಿನೇಶನ್‌’ ನೊಂದಿಗೆ ಹೋರಾಟಕ್ಕಿಳಿಯಲಿದ್ದೇವೆ. ನಮಗೆ ಪಂದ್ಯ ಗೆಲ್ಲುವುದು ಮುಖ್ಯ’ ಎಂದರು.

ಫ‌ಲಿತಾಂಶ ತರುವ ಪಿಚ್‌
ಬೆಂಗಳೂರು ಪಿಚ್‌ ಹೇಗೆ ಎಂಬ ಪ್ರಶ್ನೆ ಕರ್ನಾಟಕದ ಮಾಜಿ ಕ್ರಿಕೆಟಿಗನಿಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಕುಂಬ್ಳೆ, “ಪ್ರಾಮಾಣಿಕವಾಗಿ ಹೇಳ ಬೇಕೆಂದರೆ ನನಗೆ ಚಿನ್ನಸ್ವಾಮಿ ಪಿಚ್‌ ಬಗ್ಗೆ ಹೆಚ್ಚು ತಿಳಿದಿಲ್ಲ. ನಾನು ಈ ಅಂಗಳದಲ್ಲೇ ಆಡಿ ಬೆಳೆದವನು. ಇದೊಂದು ಉತ್ತಮ ಬ್ಯಾಟಿಂಗ್‌ ಟ್ರ್ಯಾಕ್‌. ಇಲ್ಲಿ ಖಂಡಿತ ಫ‌ಲಿತಾಂಶ ಲಭಿಸಲಿದೆ. ನನ್ನ ಬೌಲಿಂಗ್‌ ಯಶಸ್ಸು ಹಾಗೂ ಪಿಚ್‌ ಪಾತ್ರದ ಬಗ್ಗೆ ಜನರು ಸಾಕಷ್ಟು ಹೇಳಿದ್ದಿದೆ. ಆದರೆ ನಾನು ಆಡುತ್ತಿದ್ದ ಕಾಲದಲ್ಲಿ ಪಿಚ್‌ ಬಗ್ಗೆ ಯೋಚಿಸಿದವನೇ ಅಲ್ಲ. ಆದರೆ ಒಮ್ಮೆ ಪಿಚ್‌ ನೋಡಿದಾಕ್ಷಣ ಯಾವ ರೀತಿಯ ಕಾರ್ಯತಂತ್ರ ರೂಪಿಸಬೇಕು ಎಂಬುದನ್ನು ಯೋಚಿಸುತ್ತಿದ್ದೆವು. ಇಂಥ ಪಿಚ್‌ ತಿಳಿವಳಿಕೆ ಬಹಳ ಮುಖ್ಯ…’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next