Advertisement

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

09:53 PM Jun 19, 2021 | Team Udayavani |

ಸೌತಾಂಪ್ಟನ್‌ : ವಿಶ್ವಕಪ್‌ ಟೆಸ್ಟ್‌ ಫೈನಲ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ನೂತನ ಮೈಲುಗಲ್ಲು ನೆಟ್ಟರು. ಅತ್ಯಧಿಕ 61 ಟೆಸ್ಟ್‌ಗಳಲ್ಲಿ ತಂಡವನ್ನು ಮುನ್ನಡೆಸಿದ ಭಾರತೀಯ ದಾಖಲೆ ಬರೆದರು. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್‌ ಧೋನಿ ದಾಖಲೆ ಪತನಗೊಂಡಿತು. ಅವರು 60 ಟೆಸ್ಟ್‌ಗಳಲ್ಲಿ ನಾಯಕರಾಗಿದ್ದರು.

Advertisement

ಹಾಗೆಯೇ ಏಶ್ಯದ ನಾಯಕರ ಯಾದಿಯಲ್ಲೂ ಕೊಹ್ಲಿ ಅಗ್ರಸ್ಥಾನಿಯಾಗಿದ್ದಾರೆ. ಶ್ರೀಲಂಕಾದ ಅರ್ಜುನ ರಣತುಂಗ, ಪಾಕಿಸ್ಥಾನದ ಮಿಸ್ಬಾ ಉಲ್‌ ಹಕ್‌ ತಲಾ 56 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಸರ್ವಾಧಿಕ ಟೆಸ್ಟ್‌ ನಾಯಕರ ಯಾದಿಯಲ್ಲಿ ವಿರಾಟ್‌ ಕೊಹ್ಲಿಗೆ ಈಗ 6ನೇ ಸ್ಥಾನ. ದಾಖಲೆ ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌ ಹೆಸರಲ್ಲಿದೆ (109). ಸ್ಮಿತ್‌ ಟೆಸ್ಟ್‌ ನಾಯಕತ್ವದ ಶತಕ ಬಾರಿಸಿದ ವಿಶ್ವದ ಏಕೈಕ ಆಟಗಾರನೂ ಹೌದು. ಆಸ್ಟ್ರೇಲಿಯದ ಆಲನ್‌ ಬೋರ್ಡರ್‌ ದ್ವಿತೀಯ (93), ವೆಸ್ಟ್‌ ಇಂಡೀಸಿನ ಕ್ಲೈವ್‌ ಲಾಯ್ಡ ತೃತೀಯ ಸ್ಥಾನದಲ್ಲಿದ್ದಾರೆ (74).

Advertisement

Udayavani is now on Telegram. Click here to join our channel and stay updated with the latest news.

Next