332 ರನ್ ಗೆಲುವಿನ ಗುರಿ ಪಡೆದಿರುವ ನ್ಯೂಜಿಲ್ಯಾಂಡ್ 4ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 113 ರನ್ ಮಾಡಿ ಪರದಾಡುತ್ತಿದೆ. ಡ್ಯಾರಿಲ್ ಮಿಚೆಲ್ 44 ಮತ್ತು ಐಶ್ ಸೋಧಿ 7 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರವಿವಾರ ಪಂದ್ಯದ ಅಂತಿಮ ದಿನವಾಗಿದ್ದು, ಪ್ರವಾಸಿಗರ 3 ವಿಕೆಟ್ ಉರುಳಿಸಲು ಬಾಂಗ್ಲಾಕ್ಕೆ ಸಮಸ್ಯೆ ಆಗದು.
Advertisement
ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಮತ್ತೆ ನ್ಯೂಜಿಲ್ಯಾಂಡ್‌ಗೆ ಕಂಟಕವಾಗಿ ಕಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಉರುಳಿಸಿದ ತೈಜುಲ್, ದ್ವಿತೀಯ ಸರದಿಯ 7 ವಿಕೆಟ್‌ಗಳಲ್ಲಿ ನಾಲ್ಕನ್ನು ತಮ್ಮದಾಗಿಸಿಕೊಂಡಿದ್ದಾರೆ. ಶೊರೀಫುಲ್ ಇಸ್ಲಾಮ್, ಮೆಹಿದಿ ಹಸನ್ ಮಿರಾಜ್, ನಯೀಮ್ ಹಸನ್ ತಲಾ ಒಂದು ವಿಕೆಟ್ ಉರುಳಿಸಿದ್ದಾರೆ.
ನ್ಯೂಜಿಲ್ಯಾಂಡ್ 7 ರನ್ನುಗಳ ಇನ್ನಿಂಗ್ಸ್ ಲೀಡ್ ಪಡೆಯಲು ಯಶಸ್ವಿಯಾಗಿತ್ತು. ಬಾಂಗ್ಲಾದೇಶ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 338 ರನ್ ಪೇರಿಸಿತು. ನಾಯಕ ನಜ್ಮುಲ್ ಹುಸೇನ್ ಶತಕ (105), ಮುಶ್ಫಿಕರ್ ರಹೀಂ (67) ಮತ್ತು ಮೆಹಿದಿ ಹಸನ್ ಮಿರಾಜ್ (50) ಅರ್ಧ ಶತಕ ಬಾರಿಸಿ ಮಿಂಚಿದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ- 310 ಮತ್ತು 338. ನ್ಯೂಜಿಲ್ಯಾಂಡ್-317 ಮತ್ತು 7 ವಿಕೆಟಿಗೆ 113 (ಮಿಚೆಲ್ ಬ್ಯಾಟಿಂಗ್ 44, ಕಾನ್ವೇ 22, ತೈಜುಲ್ ಇಸ್ಲಾಮ್ 40ಕ್ಕೆ 4).